ನವದೆಹಲಿ: ಮಹಾಮಾರಿ ಕರೊನಾ ವೈರಸ್ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಇಡೀ ಜಗತ್ತು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರಾದ ಬಿಲ್ಗೇಟ್ಸ್ ಇಡೀ ವಿಶ್ವಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಿಲ್ಗೇಟ್ಸ್, ಜಗತ್ತಿಗೆ ಮತ್ತೊಂದು ಸಾಂಕ್ರಮಿಕ ಎದುರಾಗಲಿದೆ. ಆದರೆ, ಅದಕ್ಕೆ ಕರೊನಾ ವೈರಸ್ ಕಾರಣವಾಗುವುದಿಲ್ಲ. ಬೇರೊಂದು ವೈರಸ್ ಇಡೀ ವಿಶ್ವವನ್ನು ಮತ್ತೊಮ್ಮೆ ಕಾಡಲಿದೆ ಎಂದು ಎಚ್ಚರಿಸಿದ್ದಾರೆ. ಕೋವಿಡ್ 19 ಪ್ರಭಾವ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಯು ಭವಿಷ್ಯದಲ್ಲಿ ಹೊರಹೊಮ್ಮಬಹುದಾದ ಯಾವುದೇ ವೈರಸ್ ವಿರುದ್ಧ ಹೋರಾಡಲು ಜಗತ್ತಿಗೆ ಸಹಾಯ ಮಾಡುತ್ತದೆ. ನಾವು ಮತ್ತೊಂದು ಸಾಂಕ್ರಮಿಕವನ್ನು ಎದುರಿಸಲಿದ್ದೇವೆ. ಮುಂದಿನ ಬಾರಿ ಇದು ವಿಭಿನ್ನ ರೋಗಕಾರಕವಾಗಿರಲಿದೆ ಎಂದರು.
ವಿಶ್ವದ ಜನಸಂಖ್ಯೆಯ 61.9 ಪ್ರತಿಶತದಷ್ಟು ಜನರು ಕೋವಿಡ್ -19 ಲಸಿಕೆಯ ಕನಿಷ್ಠ ಒಂದು ಡೋಸ್ ಅನ್ನು ಮಾತ್ರ ಪಡೆದಿದ್ದಾರೆ. ಆದರೆ, 2022ರ ಮಧ್ಯದ ವೇಳೆಗೆ ಜಾಗತಿಕ ಜನಸಂಖ್ಯೆಯ 70 ಪ್ರತಿಶತದಷ್ಟು ಜನರಿಗೆ ಲಸಿಕೆ ಹಾಕುವ WHO ಗುರಿಯನ್ನು ತಲುಪಲು ತಡವಾಗಿದೆ ಎಂದು ಬಿಲ್ ಗೇಟ್ಸ್ ಹೇಳಿದರು.
ಎರಡು ವರ್ಷಗಳ ಬದಲಿಗೆ, ಮುಂದಿನ ಆರು ತಿಂಗಳಲ್ಲೇ WHO ಗುರಿಯನ್ನು ಮುಟ್ಟುವ ಪ್ರಯತ್ನ ಮಾಡಬೇಕು. ಮುಂದಿನ ಸಾಂಕ್ರಾಮಿಕ ರೋಗಕ್ಕೆ ತಯಾರಾಗುವ ವೆಚ್ಚವು ದೊಡ್ಡದಲ್ಲ. ಮುಂದಿನ ಬಾರಿ ನಾವು ಸಾಂಕ್ರಮಿಕ ಮೇಲೆ ಬಹುಬೇಗನೆ ಹಿಡಿತ ಸಾಧಿಸುತ್ತೇವೆ ಎಂದರು. (ಏಜೆನ್ಸೀಸ್)
ಅಡಲ್ಟ್ ಸಿನಿಮಾ ಮೇಕಿಂಗ್ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ನಟಿ ಉರ್ಫಿ ಜಾವೇದ್: ಕೊನೆಯಲ್ಲಿ ರೋಚಕ ಟ್ವಿಸ್ಟ್!