More

    VIDEO| ಹೆಬ್ಬೆರಳಿನ ಗುರುತಿನಂತಿರುವ ದ್ವೀಪ: ಈ ಸುಂದರ ತಾಣದ ಬಗ್ಗೆ ತಿಳಿದರೆ ಅಚ್ಚರಿ ಖಂಡಿತ!

    ಹೊರಜಗತ್ತಿಗೆ ತೆರೆದುಕೊಳ್ಳದ ಅದೆಷ್ಟೋ ಅಚ್ಚರಿಯ ತಾಣಗಳು ನಮ್ಮ ಭೂಮಿಯ ಮೇಲೆ ಇನ್ನೂ ಇವೆ. ಸುಂದರವಾದ ಜಲಪಾತಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಚ್ಚ ಹಸಿರಿನ ಕಾಡುಗಳು ನಮ್ಮ ಭೂಮಿಯ ಭಾಗವಾಗಿದ್ದು, ಅದರ ಸೌಂದರ್ಯವನ್ನು ಹೆಚ್ಚಿಸಿವೆ. ಕೆಲವೊಮ್ಮೆ ಹೊಸದಾಗಿ ಅನ್ವೇಷಣೆಗೊಳ್ಳುವ ಅಪಾಯಕಾರಿ ತಾಣಗಳನ್ನು ನೋಡಿ ಜನರು ಶಾಕ್​ ಆದರೆ, ಇನ್ನು ಕೆಲವೊಮ್ಮೆ ಸುಂದರ ತಾಣವನ್ನು ನೋಡಿ ಈ ಭೂಮಿಯ ಮೇಲೆ ಇಂತಹ ಸೌಂದರ್ಯವಿದೆಯಾ? ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಅಂಥದ್ದೇ ಒಂದು ಸುಂದರ ತಾಣವನ್ನು ನಾವಿಂದು ನಿಮಗೆ ಪರಿಚಯಿಸಿಕೊಡುತ್ತೇವೆ.

    ನಾವಿಂದ ಹೇಳ ಹೊರಟಿರುವುದು ಒಂದು ದ್ವೀಪದ ಬಗ್ಗೆ. ಆ ದ್ವೀಪವನ್ನು ಬೆಲ್ಜೆನ್ಯಾಕ್​ ದ್ವೀಪ ಎಂದು ಕರೆಯಲಾಗುತ್ತದೆ. ಬಾಲ್ಕನ್ಸ್‌ನಲ್ಲಿರುವ ಕ್ರೊಯೇಷಿಯಾ ದೇಶದ ಕರಾವಳಿ ಪ್ರದೇಶದಲ್ಲಿರುವ ಶಿಬೆನಿಕ್ ದ್ವೀಪಸಮೂಹದಲ್ಲಿ ಬೆಲ್ಜೆನ್ಯಾಕ್ ಕೂಡ ಒಂದು. ಈ ದ್ವೀಪವನ್ನು ಮೇಲಿಂದ ನೋಡಿದರೆ, ನಿಮಗೆ ಅಚ್ಚರಿಯೊಂದು ಕಾಣುತ್ತದೆ. ಏಕೆಂದರೆ, ಈ ದ್ವೀಪ ನೋಡಲು ಹೆಬ್ಬೆರಳಿನ ಗುರುತು ಅಥವಾ ಬೆರಳಚ್ಚು (ಥಂಬ್​ಪ್ರಿಂಟ್​) ರೀತಿಯಲ್ಲಿ ಕಾಣುತ್ತದೆ. ಈ ದ್ವೀಪ ಕೇವಲ 1.30 ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿದೆ.

    ವಾಸ್ತವವಾಗಿ, ಸುಮಾರು 200 ವರ್ಷಗಳ ಹಿಂದೆ, ಈ ದ್ವೀಪವು ಅದರ ಬೆಳೆಗಳು ಮತ್ತು ವೈನ್ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಆದರೆ, ಸಮುದ್ರದ ಮಧ್ಯ ಭಾಗದ ದೊಡ್ಡ ದೊಡ್ಡ ಅಲೆಗಳು ಬೆಳೆಗಳನ್ನು ನಾಶ ಮಾಡುತ್ತಿದ್ದವು. ಇದರಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಆಗಿನ ಕಾಲದ ಜನರು ಕಲ್ಲುಗಳನ್ನು ರಾಶಿ ಹಾಕಿ ಜೇಡಿಮಣ್ಣಿನಿಂದ ಗಟ್ಟಿಯಾದ ಅಡ್ಡಗೋಡೆಗಳನ್ನು ಮಾಡುತ್ತಿದ್ದರು. ಕೆಲವು ವರ್ಷಗಳಿಂದ ಇಲ್ಲಿ ಕೆಲಸ ನಿಲ್ಲಿಸಿದ್ದು, ಅಡ್ಡಗೋಡೆಗಳು ಮಾತ್ರ ಹಾಗೇ ಇವೆ. ಸುಮಾರು 14 ಎಕರೆಯಲ್ಲಿ ನಿರ್ಮಿಸಲಾದ ಗೋಡೆಯಂತಹ ರಚನೆಯು ಸುಮಾರು 24 ಕಿ.ಮೀ ಇದೆ. ಆದರೆ, ಈಗ ಅಲ್ಲಿ ಯಾವುದೇ ಬೆಳೆ ಬೆಳೆಯಲಾಗುವುದಿಲ್ಲ. ಹೀಗಾಗಿ ಕ್ರೊಯೇಷಿಯಾದ ಸರ್ಕಾರ ಬೆಲ್ಜೆನ್ಯಾಕ್​ ದ್ವೀಪವನ್ನು ಪ್ರವಾಸಿಗರ ತಾಣವೆಂದು ಘೋಷಿಸಿದೆ.

    ಇನ್ನು ಇಲ್ಲಿಗೆ ಬಂದ ಕೆಲ ಪ್ರವಾಸಿಗರು ಅಡ್ಡಗೋಡೆಗಳನ್ನು ನಾಶ ಮಾಡಿದ್ದಾರೆ. ಅನಾದಿ ಕಾಲದಿಂದಲೂ ಸಂರಕ್ಷಿಸಲ್ಪಟ್ಟಿರುವ ಈ ದ್ವೀಪ ತನ್ನ ನೋಟವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ ಎಂದು ಸ್ಥಳೀಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ದ್ವೀಪದ ಬೆರಳಚ್ಚು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಸರ್ಕಾರವು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಬಯಸುತ್ತದೆ. ಕೆಲವು ಟ್ರಾವೆಲ್​ ಬ್ಲಾಗರ್​ಗಳು ಈ ದ್ವೀಪಕ್ಕೆ ಭೇಟಿ ನೀಡಿ ಅದರ ಸೌಂದರ್ಯವನ್ನು ವರ್ಣಿಸಿದ್ದಾರೆ. (ಏಜೆನ್ಸೀಸ್​)

    ಮುತ್ತಿನ ಹಾರ ಹೆಣೆದಿದ್ದೇ ರೋಚಕ!; ಇಂದು ವಿಷ್ಣುವರ್ಧನ್ 12ನೇ ಪುಣ್ಯಸ್ಮರಣೆ

    ಬೆಳವಣಿಗೆಗೆ ಒಮಿಕ್ರಾನ್ ಸವಾಲು; ಆತಂಕ ವ್ಯಕ್ತಪಡಿಸಿದ ಆರ್​ಬಿಐ ಎನ್​ಆರ್​ಐ, ಒಸಿಐಗೆ ಸ್ಥಿರಾಸ್ತಿ ಖರೀದಿ ಸುಲಭ

    ನಾಳೆ ಕರ್ನಾಟಕ ಬಂದ್ ಅನುಮಾನ?: ಕನ್ನಡಪರ ಸಂಘಗಳ ಒಕ್ಕೂಟದಲ್ಲೇ ಅಪಸ್ವರ; ಬಂದ್​ನಿಂದ ಹಿಂದೆ ಸರಿದ ಹಲವು ಬಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts