More

    Lakhimpur Kheri Case: ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರಾ ಬಂಧನಕ್ಕೆ ಕಾರಣವಾದ ಪ್ರಮುಖ 3 ಅಂಶಗಳಿವು..!

    ನವದೆಹಲಿ: ಲಖಿಂಪುರ್​ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್​ ಮಿಶ್ರ ಪುತ್ರ ಆಶೀಶ್ ಮಿಶ್ರಾರ ಬಂಧನವಾಗಿದೆ. ಶನಿವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದ ಆಶೀಶ್​ ಮಿಶ್ರಾ, ತನಿಖಾಧಿಕಾರಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವಲ್ಲಿ ಪರದಾಡಿದ್ದಲ್ಲದೆ, ತನಿಖೆಗೆ ಸಹಕಾರ ನೀಡದಿದ್ದಕ್ಕೆ ಶನಿವಾರ ರಾತ್ರಿಯೇ ಬಂಧಿಸಲಾಗಿದೆ.

    ಮೂಲಗಳ ಪ್ರಕಾರ ಕಳೆದ ಭಾನುವಾರ ಹಿಂಸಾಚಾರ ನಡೆದ ಸ್ಥಳದಿಂದ ಸುಮಾರು 4 ರಿಂದ 5 ಕಿ.ಮೀ. ದೂರದಲ್ಲಿ ನಡೆಯುತ್ತಿದ್ದ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ್ದೆ. ನಾನು ಘಟನಾ ಸ್ಥಳದಲ್ಲಿರಲಿಲ್ಲ ಎಂದು ಆಶಿಶ್​ ಮಿಶ್ರಾ ಹೇಳಿದ್ದರು. ಆದರೆ, ಕುಸ್ತಿ ಪಂದ್ಯದ ಗಸ್ತಿನಲ್ಲಿದ್ದ ಪೊಲೀಸ್​ ಸಿಬ್ಬಂದಿ ಮತ್ತು ಜನರು ಹೇಳುವ ಪ್ರಕಾರ ಅಂದು ಕೇಂದ್ರ ಸಚಿವರ ಪುತ್ರ 2 ಮತ್ತು 4 ಗಂಟೆ ಸಮಯದಲ್ಲಿ ಕಾರ್ಯಕ್ರಮದಿಂದ ನಾಪತ್ತೆಯಾಗಿದ್ದರಂತೆ.

    ಇನ್ನು ಆಶೀಶ್​ ಮಿಶ್ರಾರ ಮೊಬೈಲ್​​ ಟವರ್​ ಲೊಕೇಶನ್​ ಕೂಡ ಘಟನೆ ನಡೆದ ದಿನ ಅದೇ ಸಮಯದಲ್ಲಿ, ಅದೇ ಜಾಗದಲ್ಲಿ ತೋರಿಸುತ್ತಿದೆ. ಆದಾಗ್ಯೂ ಅದನ್ನು ನಿರಾಕರಿಸಿರುವ ಮಿಶ್ರಾ ಘಟನೆ ನಡೆದ ಸ್ಥಳಕ್ಕೆ ಹತ್ತಿರವಿರುವ ಮತ್ತು ಅದೇ ಲೋಕೆಶನ್​ ವ್ಯಾಪ್ತಿಯಲ್ಲಿ ಬರುವ ನಮ್ಮ ರೈಸ್​ ಮಿಲ್​ನಲ್ಲಿ ಇದ್ದೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ.

    ಇನ್ನು ಮಿಶ್ರಾ ಅವರು ಬೇರೆಡೆ ಇದ್ದರು ಎಂದು ಹೇಳೆ ಅವರ ಆಪ್ತರು ತಮ್ಮ ಚಾಲಕ ಹರಿ ಓಂ ಸೇರಿದಂತೆ ಅವರ ಮೂವರನ್ನು ಕೊಂದ ಆರೋಪದ ಮೇಲೆ ರೈತರ ವಿರುದ್ಧವೇ ಎಫ್‌ಐಆರ್ ದಾಖಲಿಸಿದ ಕಾರಣ ಮಿಶ್ರಾ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಯಿತು. ರೈತರ ಮೇಲೆ ಹರಿದ ಮಹೀಂದ್ರ ಥಾರ್​ ಕಾರನ್ನು ಮಿಶ್ರಾ ಅವರ ಚಾಲಕ ಹರಿ ಓಂ ಚಲಾಯಿಸುತ್ತಿದ್ದರು ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪೊಲೀಸರು ವಿಡಿಯೋವನ್ನು ಪರಿಶೀಲಿಸಿದಾಗ ಕಾರು ಓಡಿಸುತ್ತಿದ್ದ ವ್ಯಕ್ತ ಬಿಳಿ ಅಂಗಿ ಮತ್ತು ಕುರ್ತಾ ಧರಿಸಿದ್ದ. ಆದರೆ, ಚಾಲಕ ಹರಿ ಓಂ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದಾಗ ಆತ ಹಳದಿ ಕುರ್ತಾವನ್ನು ಧರಿಸಿದ್ದ ಎಂದು ತಿಳಿದುಬಂದಿದೆ.

    ಈ ಮೂರು ವಿವಾದಾತ್ಮಕ ಅಂಶಗಳ ಆಧಾರದ ಮೇಲೆ ಮತ್ತು ಮಿಶ್ರಾ ಅವರು ಸರಿಯಾದ ಉತ್ತರ ನೀಡದೇ ಪ್ರಶ್ನೆಗಳಿಂದ ಜಾರಿಕೊಳ್ಳುತ್ತಿರುವುದನ್ನು ಗಮನಿಸಿ ಪೊಲೀಸರು ಮಿಶ್ರಾರನ್ನು ಬಂಧಿಸಿದ್ದಾರೆ. ಭಾನುವಾರ ಘಟನೆ ನಡೆದ ಬಳಿಕ ಕೊಲೆ ಪ್ರಕರಣ ದಾಖಲಿಸಿದ ಐದು ದಿನಗಳ ನಂತರ ಮಿಶ್ರಾರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಮಿಶ್ರಾ ವಿರುದ್ಧ ಕೇಳಿಬಂದಿರುವ ಆರೋಪಗಳು ತುಂಬಾ ಗಂಭೀರವಾಗಿದ್ದು, ಇಂತಹ ಪ್ರಕರಣಗಳಲ್ಲಿ ಆರೋಪಿಯನ್ನು ತಕ್ಷಣಕ್ಕೆ ಬಂಧಿಸಲಾಗುತ್ತದೆ. ಆದರೆ, ತಂದೆ ಕೇಂದ್ರ ಸಚಿವರಾಗಿರುವುದರಿಂದ ಪ್ರಕರಣದ ಹಿಂದೆ ಪ್ರಭಾವಿಗಳಿರುವುದು ಸ್ಪಷ್ಟವಾಗಿದೆ.

    ಕಳೆದ ಭಾನುವಾರ ಲಖಿಂಪುರ್​ ಖೇರಿಯಲ್ಲಿ ರೈತರು ಶಾಂತಿಯುತವಾಗಿ ಕಪ್ಪು ಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಕಾರು ರೈತರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ ನಾಲ್ಕು ರೈತರು ಮೃತಪಟ್ಟಿದ್ದರು. ಬಳಿಕ ಉದ್ರಿಕ್ತ ರೈತರಿಂದ ಕೇಂದ್ರ ಸಚಿವರ ನಾಲ್ವರು ಬೆಂಗಾವಲು ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಉದ್ದೇಶಪೂರ್ವಕವಾಗಿಯೇ ಕಾರು ಹರಿಸಲಾಗಿದೆ ಎಂಬುದು ಸ್ಪಷ್ಟವಾಗಿದ್ದು, ಕೇಂದ್ರ ಸಚಿವರ ಪುತ್ರ ಆಶಿಶ್​ ಮಿಶ್ರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

    ಘಟನೆ ನಡೆದ ಬೆನ್ನಲ್ಲೇ ಕೇಂದ್ರ ಸಚಿವರ ಮಗ ರೈತರ ಮೇಲೆ ಚಲಾಯಿಸಿದ ಎಸ್‌ಯುವಿ ತನಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದ. ಆದರೆ, ಅದರಲ್ಲಿ ನಾನು ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದ. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದ್ದರು ಹಾಜರಾಗದೇ ನಿನ್ನೆ ಪೊಲೀಸ್​ ಠಾಣೆಗೆ ಹಾಜರಾದ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್​)

    VIDEO| ಪ್ರತಿಭಟನಕಾರರ ಮೇಲೆ ವಾಹನ ಹರಿದುಹೋದ ಸ್ಪಷ್ಟ ಚಿತ್ರಣ! ನ್ಯಾಯ ಒದಗಿಸಿ ಎಂದ ಬಿಜೆಪಿ ಸಂಸದ

    ಅದಕ್ಕೆಲ್ಲ ನಾನು ಜವಾಬ್ದಾರನಲ್ಲ: ವೈರಲ್​ ಟ್ವೀಟ್​ ಬಗ್ಗೆ ಸಮಂತಾರ ಮಾಜಿ ಲವರ್ ನಟ ಸಿದ್ಧಾರ್ಥ್​ ಸ್ಪಷ್ಟನೆ..!

    ಸುಶಾಂತ್‌ಗೆ ಡ್ರಗ್ಸ್ ಕೊಟ್ಟವನೇ ಆರ್ಯಂಗೂ ನೀಡಿದ್ನಾ? ನಿರ್ಮಾಪಕನ ಮನೆ ಮೇಲೆ ರೇಡ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts