More

    ಭಾರತ ಪ್ರವಾಸ: ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬ್ರಿಟನ್​ ಪ್ರಧಾನಿ ಸಂದರ್ಶಕರ ಪುಸ್ತಕದಲ್ಲಿ​ ಬರೆದಿದ್ದು ಹೀಗೆ…

    ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಪ್ರವಾಸದ ಮೊದಲನೇ ದಿನ ಗುಜರಾತಿನ ಸಬರಮತಿಯಲ್ಲಿರುವ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಚರಕವನ್ನು ತಿರುಗಿಸಿ, ಆಶ್ರಮವನ್ನು ಕಣ್ತುಂಬಿಕೊಂಡರು.

    ಈ ಅಸಾಧಾರಣ ವ್ಯಕ್ತಿ (ಗಾಂಧಿ)ಯ ಆಶ್ರಮಕ್ಕೆ ಬರಲು ಮತ್ತು ಜಗತ್ತನ್ನು ಸರಿಯಾದ ದಿಕ್ಕಿಗೆ ಬದಲಾಯಿಸಲು ಗಾಂಧಿ ಅವರು ಸತ್ಯ ಮತ್ತು ಅಹಿಂಸೆಯಂತಹ ಸರಳ ತತ್ವಗಳನ್ನು ಹೇಗೆ ಸಜ್ಜುಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಭೇಟಿ ಒಂದು ದೊಡ್ಡ ಸೌಭಾಗ್ಯವಾಗಿದೆ ಎಂದು ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಜಾನ್ಸನ್​ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಜಾನ್ಸನ್​ ಅವರು ಗುರುವಾರ ಬೆಳಗ್ಗೆ ಗುಜರಾತ್​ ರಾಜಧಾನಿ ಅಹಮದಾಬಾದ್​ಗೆ ಬಂದಿಳಿದರು. ಬಳಿಕ ವಿಮಾನ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಹೋಟೆಲ್ ಕರೆದೊಯ್ಯಲಾಯಿತು. ಈ ವೇಳೆ ದಾರಿಯುದ್ದಕ್ಕೂ ಜಾನ್ಸನ್​ ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ಜಾನ್ಸನ್​ ಅವರನ್ನು ವಿಮಾನ ನಿಲ್ದಾಣದಲ್ಲಿ ಗುಜರಾತ್​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ಮತ್ತು ರಾಜ್ಯಪಾಲ ಆಚಾರ್ಯ ದೇವ್ರಾತ್​ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಕೂಡ ಉಪಸ್ಥಿತರಿದ್ದರು.

    ವಿಮಾನ ನಿಲ್ದಾಣದಲ್ಲಿ ಮತ್ತು ರಸ್ತೆಯುದ್ದಕ್ಕೂ ಸಾಂಪ್ರದಾಯಿಕ ಗುಜರಾತಿ ನೃತ್ಯ ಮತ್ತು ಸಂಗೀತವನ್ನು ಪ್ರದರ್ಶಿಸುವ ಮೂಲಕ ಬ್ರಿಟಿಷ್ ಪ್ರಧಾನಿಯನ್ನು ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದ ಹೊರಗೆ ಆರಂಭವಾಗ ರೋಡ್​ಶೋ ದಫ್ನಾಲ್​ ಮತ್ತು ರಿವರ್​ಫ್ರಂಟ್​ ಮಾರ್ಗವಾಗಿ ಆಶ್ರಮ ರಸ್ತೆಯ ಮೂಲಕ ಹಾದು ಹೋಯಿತು.

    ಗುಜರಾತ್‌ನಲ್ಲಿ ದಿನವಿಡೀ ತಂಗಿರುವ ಬ್ರಿಟಿಷ್ ಪ್ರಧಾನಿ ಅವರು ರಾಜ್ಯದ ಪ್ರಮುಖ ಉದ್ಯಮಿಗಳೊಂದಿಗೆ ಸಭೆಯನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯುಕೆಯ ಎಡಿನ್‌ಬರ್ಗ್ ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಗಾಂಧಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗುಜರಾತ್ ಬಯೋಟೆಕ್ನಾಲಜಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಬ್ರಿಟಿಷ್ ಪ್ರಧಾನಿ ಭೇಟಿ ನೀಡಲಿದ್ದಾರೆ ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.

    ಜಾನ್ಸನ್ ಅವರು ಪ್ರವಾಸದ ಕೊನೆಯ ದಿನವಾದ ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. (ಏಜೆನ್ಸೀಸ್​)

    ವಿವಾದಿತ ಟ್ವೀಟ್​: ಗುಜರಾತಿನ ಕಾಂಗ್ರೆಸ್​ ಶಾಸಕ ಜಿಗ್ನೇಶ್​ ಮೇವಾನಿ ಬಂಧಿಸಿದ ಅಸ್ಸಾಂ ಪೊಲೀಸರು

    ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ… ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

    ಪಕ್ಕದ ರೂಮಲ್ಲಿ ಗಂಡ ಮಲಗಿದ್ರೂ ನಡೆದೇ ಹೋಯ್ತು ಘೋರ ದುರಂತ! ಬೆಳಗ್ಗೆ ಪತ್ನಿಯ ಕೋಣೆಗೆ ಹೋದವನಿಗೆ ಕಾದಿತ್ತು ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts