More

    ಬರೋಬ್ಬರಿ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಾವ-ಬಾಮೈದ..!

    ವಿಶಾಖಪಟ್ಟಣಂ: ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನುವ ಕಾಲಘಟ್ಟದಲ್ಲಿ ಮಾನವೀಯತೆಯು ಇನ್ನೂ ಮರೆಯಾಗಿಲ್ಲ ಎಂಬುದನ್ನು ಆಂಧ್ರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಬೀತು ಮಾಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿದ ಘಟನೆ ವಿಶಾಖಪಟ್ಟಣದಿಂದ ವರದಿಯಾಗಿದೆ.

    ಸಣ್ಣ ವ್ಯಾಪಾರಿ ಆಗಿರುವ ಅಂಬಾತಿ ಪೊಲಾ ರಾಜು ಮತ್ತು ಆತನ ಬಾಮೈದಾ ಥಾನಬಲಾ ಶ್ರೀನು ಶ್ರೀಕಾಕುಳಂನಿಂದ ವಿಶಾಖಪಟ್ಟಣಕ್ಕೆ ಪ್ರಯಾಣ ಮಾಡುವಾಗ ಆಂಧ್ರದ ಸರ್ಕಾರಿ ಸಾರಿಗೆ ಬಸ್​ನಲ್ಲಿ ಚಿನ್ನಾಭರಣ ಇರುವ ಬ್ಯಾಗ್​ ಒಂದು ಪತ್ತೆಯಾಗುತ್ತದೆ.

    ಬ್ಯಾಗ್​ ಅನ್ನು ತೆಗೆದುಕೊಳ್ಳುವ ಬಾವ-ಬಾಮೈದ ಒಂದು ಕ್ಷಣವೂ ಯೋಚಿಸದೇ ಬ್ಯಾಗ್​ನಲ್ಲಿರುವ ಮಾಹಿತಿಯನ್ನು ಆಧರಿಸಿ, ವಿಶಾಖಪಟ್ಟಣದ ಆರ್​ಟಿಸಿ ಕಾಂಪ್ಲೆಕ್ಸ್​ ತೆರಳುತ್ತಾರೆ. ಅಲ್ಲಿ ಬ್ಯಾಗ್​ ಮಾಲೀಕನನ್ನು ಹುಡುಕುತ್ತಾರೆ. ಆದರೆ, ಮಾಲೀಕನ ಪತ್ತೆ ಆಗುವುದಿಲ್ಲ.

    ಇದಾದ ಬಳಿಕ ಇಬ್ಬರು ಬ್ಯಾಗ್​ ತೆಗೆದುಕೊಂಡು ವಿಶಾಖಪಟ್ಟಣದ ಪಾಲೇಮ್​ ಪೊಲೀಸ್​ ಠಾಣೆಗೆ ತೆರಳಿ ಪೊಲೀಸರಿಗೆ ಬ್ಯಾಗ್​ ಅನ್ನು ಹಸ್ತಾಂತರಿಸುತ್ತಾರೆ. ನಂತರ ಬ್ಯಾಗ್​ ಅನ್ನು ಕಳೆದುಕೊಂಡ ಮಾಲೀಕರಿಗೆ ಪೊಲೀಸರು ಹಿಂತಿರುಗಿಸುತ್ತಾರೆ. ಸಿಕ್ಕ ಹಣವನ್ನು ತಂದುಕೊಟ್ಟು ಪ್ರಾಮಾಣಿಕತೆ ಮೆರೆದ ಅಂಬಾತಿ ಪೊಲಾ ರಾಜು ಮತ್ತು ಥಾನಬಲಾ ಶ್ರೀನುಗೆ ಸನ್ಮಾನ ಮಾಡಿ ಗೌರವಿಸಲಾಗಿದೆ. (ಏಜೆನ್ಸೀಸ್​)

    ಯಶಿಕಾ ಕಾರು ಅಪಘಾತ ಕೇಸ್​: ಸ್ನೇಹಿತೆ ಸಾವಿಗೆ ಕಾರಣ, ಯುವಕರಿಬ್ಬರ ಬಗ್ಗೆ ಮಾಹಿತಿ ಬಿಚ್ಚಿಟ್ಟ ಯಶಿಕಾ!

    ಬಂಧನದ ಬೆನ್ನಲ್ಲೇ ಆದೇಶ! ರಾಜ್​ ಕುಂದ್ರಾ ವಿರುದ್ಧ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅವರದೇ ಕಂಪನಿಯ ಉದ್ಯೋಗಿಗಳು

    ಅಸ್ಸಾಂ-ಮಿಜೋರಾಂ ಗಡಿ ವಿವಾದದ ಘರ್ಷಣೆಯಲ್ಲಿ ಅಸ್ಸಾಂನ ಐವರು ಪೊಲೀಸ್​ ಸಿಬ್ಬಂದಿಯ ದುರಂತ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts