More

    ದೇಶಿ ನಿರ್ಮಿತ ಪಿಸ್ತೂಲ್​ ಇಟ್ಟುಕೊಂಡು ಓಡಾಡ್ತಿದ್ದ ಶಿಕ್ಷಕಿಯ ಬಂಧನ

    ಮೈನ್​ಪುರಿ: ಶಿಕ್ಷಕಿಯೊಬ್ಬರ ಬಳಿ ದೇಶಿ ನಿರ್ಮಿತ ಪಿಸ್ತೂಲ್​ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮೈನ್​ಪುರಿಯಲ್ಲಿ ನಿನ್ನೆ (ಏ.13) ನಡೆದಿರುವುದಾಗಿ ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ.

    ಶಿಕ್ಷಕಿಯನ್ನು ಬಂಧಿಸಲಾಗಿದ್ದು, ಆಕೆಯನ್ನು ಕೃಷ್ಣಮಾ ಸಿಂಗ್​ ಯಾದವ್​ ಎಂದು ಗುರುತಿಸಲಾಗಿದೆ. ಈಕೆ ಫಿರೋಜಾಬಾದ್​ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಮೇಲೆ ನಿನ್ನೆ ಮೈನ್​ಪುರಿಗೆ ಬಂದಿರುವಾಗ ಪಿಸ್ತೂಲ್​ ಪತ್ತೆಯಾಗಿದೆ.

    ಮೈನ್​ಪುರಿಯ ಕೊಟ್ವಾಲಿ ಏರಿಯಾದಲ್ಲಿ ಮಹಿಳೆಯೊಬ್ಬಳು ಪಿಸ್ತೂಲ್​ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಳೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಪೊಲೀಸರು ಆಕೆಯನ್ನು ಹುಡುಕಾಡಿ ಪಿಸ್ತೂಲ್​ ಮತ್ತು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ನೀಲಿ ಬಣ್ಣದ ಜೀನ್ಸ್​ ಧರಿಸಿರುವ ಶಿಕ್ಷಕಿಯ ಜೇಬಿನಿಂದ 315 ಬೋರ್​ ದೇಶಿ ನಿರ್ಮಿತ ಪಿಸ್ತೂಲ್​ ಅನ್ನು ವಶಕ್ಕೆ ಪಡೆದುಕೊಂಡು ದೃಶ್ಯವಿದೆ.

    ಆರೋಪಿ ಶಿಕ್ಷಕಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್​ ಸಾಗಿಸುತ್ತಿದ್ದರ ಹಿಂದಿನ ಕಾರಣ ತಿಳಿಯಲು ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

    ಇದೇ ಕಾರಣಕ್ಕೆ ಬೋಯಿಂಗ್​ 737ವಿಮಾನದ 90 ಪೈಲೆಟ್​ಗಳಿಗೆ ನಿರ್ಬಂಧ!

    ಅಂದು ರಾಜ್ಯದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಯಶ್​ ಮೇಲೆ ಸೇಡು ತೀರಿಸಿಕೊಳ್ತೇ ತೆಲುಗು ಮೀಡಿಯಾ!

    ಭಾರತಕ್ಕೆ ಬರಲು ಅನುಮತಿ ಕೊಡಿ: ಪ್ರಧಾನಿ ಮೋದಿಗೆ ಪಿಒಕೆ ಗ್ಯಾಂಗ್​ರೇಪ್​ ಸಂತ್ರಸ್ತೆಯ ಕಣ್ಣೀರಿನ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts