More

    ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

    ಹೈದರಾಬಾದ್​: ಕಾಲಿವುಡ್​ ಹಿರಿಯ ನಟ ಶರತ್​ಕುಮಾರ್​ ಅವರ ಹಿರಿಯ ಪುತ್ರಿ 37 ವರ್ಷದ ನಟಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಪೂರ್ಣ ಪ್ರಮಾಣದ ನಾಯಕಿ ಅಲ್ಲದಿದ್ದರೂ, ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ವರು ತುಂಬಾ ಹೆಸರು ಮಾಡಿದ್ದಾರೆ.

    ಕ್ರ್ಯಾಕ್’ ಮತ್ತು ‘ನಾಂಧಿ’ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೆ, ಟಾಲಿವುಡ್​ನಿಂದ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ ಮತ್ತು ಪ್ರಸ್ತುತ ಸಮಂತಾ ನಟನೆಯ ‘ಯಶೋಧಾ’, ಸಂದೀಪ್ ಕಿಶನ್ ಅವರ ‘ಮೈಕೆಲ್’, ‘ಹನುಮಾನ್’ ಮತ್ತು ‘ಆದ್ಯ’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಹಿಟ್​ ಸಿನಿಮಾಗಳು ಮತ್ತು ಸಿಕ್ಕಾಪಟ್ಟೆ ಆಫರ್​ಗಳು ಬರುತ್ತಿರುವುದರಿಂದ ವರು ಇತ್ತೀಚೆಗಷ್ಟೇ ಚೆನ್ನೈ ಬಿಟ್ಟು ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

    ಇದರ ನಡುವೆ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡು ಮಾಲ್ಡೀವ್ಸ್​ ಬೀಚ್​​ನಲ್ಲಿ ವರು ಕಾಲ ಕಳೆದು ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಬಿಕಿನಿ ತೊಟ್ಟು ಕ್ಯಾಮೆರಾಗೆ ವರು ಪೋಸ್​ ನೀಡಿದ್ದು, ಇದೇ ಮೊದಲ ಬಾರಿಗೆ ವರು ಅವರನ್ನು ಬಿಕಿನಿಯಲ್ಲಿ ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 90 ಸಾವಿರಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ.

    ಅಂದಹಾಗೆ ವರು ನಟ ಸುದೀಪ್​ ಅಭಿನಯದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಕಳೆದ ಮಾರ್ಚ್​ 5ರಂದು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ವರು ಅಭಿನಯದ ಹನುಮಾನ್​ ಚಿತ್ರದ ವರು ಪೋಸ್ಟರ್​ ಅನ್ನು ಸುದೀಪ್​ ಅವರೇ ಬಿಡುಗಡೆ ಮಾಡಿ ಶುಭ ಕೋರಿದರು. (ಏಜೆನ್ಸೀಸ್​)

    ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಬಂಪರ್ ಆಫರ್​: 137 ವರ್ಷ ಇತಿಹಾಸ ಇರೋ ಪಕ್ಷಕ್ಕೆ ಇದೆಂಥಾ ದುರ್ಗತಿ ಎಂದ ಬಿಜೆಪಿ

    4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…

    ಪಾಕ್​ ಯುವತಿ ಜತೆ ಮದ್ವೆಯಾದ ಬೆನ್ನಲ್ಲೇ ಆತ್ಮಾಹುತಿ ದಾಳಿ ನಡೆಸಿದ ಕೇರಳದ M.Tech ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts