More

    ಜಾಲತಾಣದಲ್ಲಿ ಧೂಳೆಬ್ಬಿಸಿದ ಕಚ್ಚಾ ಬಾದಾಮ್​ ಹಾಡಿಗೆ ಭುಬನ್ ಪಡೆದ ಹಣದ ಮೊತ್ತ ಕೇಳಿದ್ರೆ ಅಚ್ಚರಿ ಖಂಡಿತ!

    ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್​ಚಲ್​ ಎಬ್ಬಿಸಿದ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್​ಬುಕ್​, ಟ್ವಿಟರ್​, ಯೂಟ್ಯೂಬ್​ ಮತ್ತು ಇನ್​ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್​ ರೀಮಿಕ್ಸ್​ ಹಾಡೇ ಕಣ್ಣು ಮುಂದೆ ಮೊದಲು ಬರುತ್ತಿದೆ. ಇದೇ ಹಾಡನ್ನು ಕೇಳಿ ಕೇಳಿ ಸುಸ್ತಾದ ಎಷ್ಟೋ ಮಂದಿ ಸಿಕ್ಕಾಪಟ್ಟೆ ಟ್ರೋಲ್​ ಕೂಡ ಮಾಡಿದ್ದಾರೆ. ಇದೀಗ ಈ ಹಾಡಿನ ಕುರಿತಾದ ಒಂದು ಇಂಟೆರೆಸ್ಟಿಂಗ್​ ಮಾಹಿತಿ ಹೊರಬಿದ್ದಿದೆ. ​

    ಈ ಕಚ್ಚಾ ಬಾದಾಮ್​ ಹಾಡಿನಿಂದ ಭುಬನ್​ ಬದ್ಯಕರ್​ ಭವಿಷ್ಯವೇ ಬದಲಾಗಿದೆ. ಅಂದಹಾಗೆ ಈ ಭಬನ್​ ಬದ್ಯಕರ್​ ಯಾರು ಗೊತ್ತಾ? ಆತ ಬೇರೆ ಯಾರು ಅಲ್ಲ ಕಚ್ಚಾ ಬಾದಾಮ್ ಅಥವಾ ಕಡಲೆಕಾಯಿ​ ಮಾರಾಟಗಾರ. ಈತ ಪಶ್ಚಿಮ ಬಂಗಾಳದ ಬಿರ್​ಭಮ್​ ನಿವಾಸಿ. ವೈರಲ್​ ಆಗಿರುವ ಹಾಡಿನಲ್ಲೂ ತಮ್ಮ ಕಂಠದ ಕರಾಮತ್ತನ್ನು ಈ ಭುಬನ್​ ಬದ್ಯಕರ್​ ತೋರಿದ್ದಾರೆ.

    ಕಚ್ಚಾ ಬಾದಾಮ್​ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದ ಭುಬನ್​ ಬದ್ಯಕರ್​ಗೆ ಅದೇ ಹಾಡು ಒಂದಲ್ಲ ಒಂದು ದಿನ ತನ್ನನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತದೆ ಎಂದು ಕಸನು ಮನಸ್ಸಲ್ಲೂ ತಿಳಿದಿರಲಿಲ್ಲ.

    ಇದೀಗ ಕಚ್ಚಾ ಬಾದಾಮ್​ ಹಾಡಿನ ಮೂಲಕ ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಬದ್ಯಕರ್​ ತನ್ನ ಹಾಡಿಗಾಗಿ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿಯಿಂದ 3 ಲಕ್ಷ ರೂಪಾಯಿ ಪಡೆದಿದ್ದಾರೆ. ಕಚ್ಚಾ ಬಾದಾಮ್​ ಒರಿಜಿನಲ್​ ಸಾಂಗ್​ ಅನ್ನು ರೀಮಿಕ್ಸ್​ ಮಾಡಲು ಸಂಭಾವನೆಯಾಗಿ ಹಾಡಿನ ಸೃಷ್ಟಿಕರ್ತ ಬದ್ಯಕರ್​ಗೆ ಗೌರವ ಧನವಾಗಿ 3 ಲಕ್ಷ ರೂ. ನೀಡಲಾಗಿದೆ.

    ಈ ಸಾಂಗ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದಾಗ ಭುಬನ್​ ಬದ್ಯಕರ್​ಗೆ ಹಣ ಸಿಕ್ಕಿರಬಹುದಾ ಅಥವಾ ದುರ್ಬಳಕೆ ಮಾಡಿಕೊಂಡಿರಬಹುದಾ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಾಡಿನ ಮೂಲ ಸೃಷ್ಟಿಕರ್ತ ಎಂಬ ಗೌರವ ಬದ್ಯಕರ್​ಗೆ ಸಿಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು.

    ಇದರ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಗೋಧುಲಿಬೆಲಾ ಮ್ಯೂಸಿಕ್​ ಕಂಪನಿ ಹೆಡ್​ ಗೋಪಾಲ್​ ಘೋಷ್​, ನಾವು ಭುಬನ್​ ಜತೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದೆವು ಮತ್ತು ಅದರಲ್ಲಿ ಅರ್ಧದಷ್ಟು ಮೊತ್ತ ಅಂದರೆ 1.5 ಲಕ್ಷದ ಹಣದ ಚೆಕ್​ ಅನ್ನು ನೀಡಿದ್ದೇವೆ. ಮುಂದಿನ ವಾರದಲ್ಲಿ ಉಳಿದ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

    ಈ ವೈರಲ್​ ಹಾಡನ್ನು ಕೇಳಿದ ಪಶ್ಚಿಮ ಬಂಗಾಳ ಪೊಲೀಸರು ಬದ್ಯಾಕರ್​ ಅವರನ್ನು ಸನ್ಮಾನಿಸಿದ್ದಾರೆ. ಅಲ್ಲದೆ, ದೇಶದೆಲ್ಲಡೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಸಹ ಕೇಳಿಬರುತ್ತಿವೆ. (ಏಜೆನ್ಸೀಸ್​)

    ನನಗೆ ಇಷ್ಟೊಂದು ವಯಸ್ಸಾ! ಸರಿಯಾದ ಮಾಹಿತಿ ಕೊಡಿ ಎಂದು ಮಾಧ್ಯಮ ವಿರುದ್ಧ ಹರಿಹಾಯ್ದ ಅನಸೂಯ

    ಉಡುಪಿ ವಕೀಲನಿಗೆ ಜೀವಾವಧಿ ಶಿಕ್ಷೆ: ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ಸಿಕ್ತು ನ್ಯಾಯ

    ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಬಚ್ಚನ್​ ಪಾಂಡೆ ಚಿತ್ರದ ಕ್ರೋಚ್ ಗ್ರ್ಯಾಬಿಂಗ್ ದೃಶ್ಯ! ಕಾರಣ ಹೀಗಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts