More

    ವಿಜಯಾನಂದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​: ನಾಲ್ಕು ಭಾಷೆಗಳಲ್ಲಿ 2 ಕೋಟಿಗೂ ಅಧಿಕ ವೀಕ್ಷಣೆ

    ಬೆಂಗಳೂರು: ಬಹುನಿರೀಕ್ಷಿತ ‘ವಿಜಯಾನಂದ’ ಚಿತ್ರದ ಟೀಸರ್​ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಟೀಸರ್ ನೋಡಿ ಜನ ಮೆಚ್ಚಿಕೊಂಡಿದ್ದು, ಯೂಟ್ಯೂಬ್​ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 2 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿದೆ.

    ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 2ರಂದು ‘ವಿಜಯಾನಂದ’ ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಿತ್ತು. ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ತಯಾರಾಗುತ್ತಿರುವ ‘ವಿಜಯಾನಂದ’ ಚಿತ್ರವನ್ನು ‘ಟ್ರಂಕ್’ ಖ್ಯಾತಿಯ ರಿಷಿಕಾ ಶರ್ಮಾ ನಿರ್ದೇಶಿಸುತ್ತಿದ್ದಾರೆ. ನಟ ನಿಹಾಲ್, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದು, ಅವರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ. ವಿಜಯ ಸಂಕೇಶ್ವರ ಅವರ ಮಾರ್ಗದರ್ಶಕರಾಗಿ ರವಿಚಂದ್ರನ್ ಅವರ ಪಾತ್ರಗಳು ಟೀಸರ್​ನಲ್ಲಿ ಗಮನ ಸೆಳೆಯುತ್ತವೆ.

    ಸದ್ಯ ಕನ್ನಡದಲ್ಲಿ 80 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದು. ತೆಲುಗಿನಲ್ಲಿ 50 ಲಕ್ಷ, ತಮಿಳಿನಲ್ಲಿ 50 ಲಕ್ಷ ಹಾಗೂ ಮಲಯಾಳಂನಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದಾರೆ. ನಾಲ್ಕೂ ಭಾಷೆಗಳಿಂದ ಬರೋಬ್ಬರಿ ಎರಡೂವರೆ ಲಕ್ಷಕ್ಕೂ ಲಕ್ಷ ಮಂದಿ ಲೈಕ್ ಮಾಡಿರುವುದು ವಿಶೇಷ. ವಿಆರ್​ಎಲ್ ಪ್ರೊಡಕ್ಷನ್ಸ್ ನಡಿ ಡಾ. ಆನಂದ ಸಂಕೇಶ್ವರ ಅವರು ನಿರ್ವಿುಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್, ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್ ಮುಂತಾದವರು ನಟಿಸಿದ್ದು, ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.

    ವಿಜಯಾನಂದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​: ನಾಲ್ಕು ಭಾಷೆಗಳಲ್ಲಿ 2 ಕೋಟಿಗೂ ಅಧಿಕ ವೀಕ್ಷಣೆ

    ಟೀಸರ್​ಗೆ ಸ್ಯಾಂಡಲ್​ವುಡ್​ ಸ್ಟಾರ್ಸ್​ ಫಿದಾ
    ಕಿಚ್ಚ ಸುದೀಪ್ ಸಹ ‘ವಿಜಯಾನಂದ’ ಟೀಸರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ಟೀಸರ್ ಲಿಂಕ್ ಹಾಕಿ ಟ್ವೀಟ್ ಮಾಡಿರುವ ನಟ ಸುದೀಪ್, ‘ಕಠಿಣ ಪರಿಶ್ರಮ ಮತ್ತು ಸ್ಥಿರತೆ ಉತ್ತಮ ಪ್ರತಿಫಲವನ್ನೇ ನೀಡುತ್ತದೆ. ಪ್ರತಿಯೊಬ್ಬರಿಗೂ ಡಾ. ವಿಜಯ ಸಂಕೇಶ್ವರ ಅವರು ಸ್ಪೂರ್ತಿ. ಬೇರೆಯವರಂತೆ ಯೋಚಿಸದೇ ಸ್ವತಂತ್ರವಾಗಿ ಆಲೋಚಿಸುವ ಸಾಧಕನ ಕಥೆ ಮತ್ತು ಪಯಣ. ಚಿತ್ರತಂಡದ ಪ್ರತಿಯೊಬ್ಬರಿಗೂ ಆಲ್ ದಿ ಬೆಸ್ಟ್’ ಎಂದು ಬರೆದುಕೊಂಡಿದ್ದಾರೆ. ನಟರಾದ ರಮೇಶ್ ಅರವಿಂದ್, ‘ನೆನಪಿರಲಿ’ ಪ್ರೇಮ್ ಅಜೇಯ್ ರಾವ್, ನಟಿ ಶರ್ವಿುಳಾ ಮಾಂಡ್ರೆ ಮತ್ತು ನಿರ್ದೇಶಕ ಚೇತನ್ ಕುಮಾರ್ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ‘ವಿಜಯಾನಂದ’ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

    ಕನ್ನಡ ಟೀಸರ್​

    ತೆಲುಗು ಟೀಸರ್​

    ತಮಿಳು ಟೀಸರ್​

    ಮಲಯಾಳಂ ಟೀಸರ್​

    ಮುರಿದುಬೀಳುತ್ತಾ ಪತಿ-ಪತ್ನಿ ಸಂಬಂಧ? ಡಿವೋರ್ಸ್ ವದಂತಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಧನಶ್ರೀ!

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್​: ಅರಮನೆಯ ಮೈದಾನದಲ್ಲಿ ನೆರವೇರಿತು ಅದ್ಧೂರಿ ವಿವಾಹ

    ಈ ಫೋಟೋದಲ್ಲಿರೋ ಬಾಲಕಿ ಯಾರೆಂದು ಗುರುತಿಸುವಿರಾ? ಇಂದು ದಕ್ಷಿಣ ಭಾರತದ ಸ್ಟಾರ್​ ನಟಿ ಈಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts