More

    ವಿಜಯಾನಂದ ಚಿತ್ರ ಕುರಿತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡ ಡಾ. ವಿಜಯ ಸಂಕೇಶ್ವರ

    ಹುಬ್ಬಳ್ಳಿ: ವಿಜಯಾನಂದ ಸಿನಿಮಾ ಬಿಡುಗಡೆಯಾದ ಬಳಿಕ ಕನ್ನಡದಲ್ಲೂ ಹಾಗೂ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡುತ್ತೇವೆ. ಮುಂಬರುವ ಸಿನಿಮಾಗಳ ಬಜೆಟ್ ಖಂಡಿತವಾಗಿಯೂ ದೊಡ್ಡದಿರುತ್ತದೆ. ಸಿನಿಮಾ ಇಂಡಸ್ಟ್ರಿಗೆ ಪರಿಚಿತರಿಲ್ಲದವರನ್ನು ಪರಿಚಯಸಬೇಕು ಅನ್ನೋದೆ ನಮ್ಮ ಸಂಸ್ಥೆಯ ಗುರಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.

    ಹುಬ್ಬಳ್ಳಿ ಸಮೀಪದ ವರೂರಿನ ವಿಆರ್​ಎಲ್​ ಕ್ಯಾಂಪಸ್​ನಲ್ಲಿ ತಮ್ಮ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿಂದು ಭಾಗವಹಿಸಿ ಮಾತನಾಡಿದರು.

    ಪ್ರಾಯಶಃ ಹುಬ್ಬಳ್ಳಿಯಲ್ಲಿ ಮೊದಲ ಕನ್ನಡ ಸಿನಿಮಾದ ಮಹೂರ್ತ ಆಗಿರೋದು ಇದೇ ಮೊದಲು ಅನಿಸುತ್ತದೆ. ಈ ಕಾರ್ಯಕ್ರಮಕ್ಕೆ ಆತ್ಮಿಯರಾದ ರವಿಚಂದ್ರನ್ ಹಾಗೂ ಗಣೇಶ್ ಅವರು ಶೂಟಿಂಗ್ ಬಿಟ್ಟು ಬಂದಿದ್ದಾರೆ. ಅವರ ಪ್ರೀತಿಗೆ ಹಾಗೂ ಮಾಧ್ಯಮದವರ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.

    ಹದಿನೇಳು ವರ್ಷದವನಿದ್ದಾಗ ಮನೆತನದ ಬಿಸಿನೆಸ್ ಬಿಟ್ಟು ಬೇರೆ ಬಿಸಿನೆಸ್ ಮಾಡಬೇಕು ಅಂತ ಹೇಳಿದ್ದೆ. ನಾನು ಬಿಸಿನೆಸ್ ಶುರು ಮಾಡಿದಾಗ ಒಬ್ಬರು ಹೇಳಿದ್ರು ಒಂದು ಲಾರಿ ಇಟ್ಟುಕೊಂಡು ಏನ್ ಮಾಡ್ತಿಯಾ ಅಂದಿದ್ರು. ಆಗ ನಾನು ನಾಲ್ಕು ಲಾರಿ ಮಾಡಬೇಕು ಅಂತಾ ಒಂದು ಗುರಿಯನ್ನು ಇಟ್ಟುಕೊಂಡೆ. ಸಾಯುವ ಮೊದಲು 4 ಟ್ರಕ್ ನಿಲ್ಲಿಸಿ ಸಾಯ್ತಿನಿ ಅಂತ ಚಾಲೆಂಜ್ ಮಾಡಿದ್ದೆ. ಅದಾದ ಕೆಲವೇ ವರ್ಷಗಳಲ್ಲಿ 5 ಟ್ರಕ್ ನಿಲ್ಲಿಸಿದೆ. ಆಗಲೇ ನಾನು ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ ಎಂದು ಹೇಳಿದರು.

    ನನಗೂ ಸಿನಿಮಾ ಹೀರೋ ಆಗಬೇಕು ಅಂತ ಕನಸಿತ್ತು. ಈ ಬಗ್ಗೆ ನಟ ರಮೇಶ್​ ಅರವಿಂದ ಅವರ ಬಳಿ ಹೇಳಿಕೊಂಡಿದ್ದೆ ಎಂದು ಹಿಂದಿನ ದಿನಗಳನ್ನು ಮೆಲಕು ಹಾಕಿದ ವಿಜಯ ಸಂಕೇಶ್ವರ ಅವರು ಬಿಸಿನೆಸ್ ಬೆಳದ ಹಾಗೆ ನನಗೆ ಗೊತ್ತಿಲ್ಲದೇ ಅಭಿಮಾನಿಗಳು ಹುಟ್ಟಿಕೊಂಡರು. ಇದು 46 ವರ್ಷದ ಪರಿಶ್ರಮ. ಕೊನೇ ಉಸಿರು ಇರುವವರೆಗೂ ಕಾಯಕ ಮಾಡುತ್ತೇನೆಂದು ಹೇಳಿದರು.

    ಆನಂದ ಸಂಕೇಶ್ವರ ಅವರು ನನ್ನ ಜತೆ ಜತೆಗೆ ಸಂಸ್ಥೆ ಕಟ್ಟುವಲ್ಲಿ, ಮುನ್ನಡೆಸುವಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ನಾನು ಅನಾರೋಗ್ಯವಾಗಿದ್ದಾಗ ನಾನು ಮಾಡಿದ ಸಾಲದ ಲಿಸ್ಟ್ ಕೊಟ್ಟೆ. ಆಗ ಆನಂದ ಸಂಕೇಶ್ವರ ಕೇವಲ 9 ವರ್ಷದವರಿದ್ದರು. ಕಳೆದ 15ವರ್ಷಗಳಿಂದ ಆನಂದ ಸಂಕೇಶ್ವರ ಅವರ ಮೇಲೆ ಕಂಪನಿಯ ಭಾರ ಹೆಚ್ಚಾಗಿದೆ. ಮೂವತ್ತು ವರ್ಷದಿಂದ ನನ್ನ ಮಗ ನಮ್ಮ ಕಂಪನಿಯಲ್ಲಿ ಇದ್ದಾರೆ. ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಚಿತ್ರೋದ್ಯಮದಲ್ಲಿಯೂ ಸಾಧನೆ ಮಾಡುತ್ತಾರೆ ಅನ್ನೊ ಭರವಸೆ ನನಗಿದೆ ಎಂದರು.

    ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ಬಳಿಕ ನಿರ್ದೇಶಕಿ ರಿಷಿಕಾ ಶರ್ಮಾ ನನ್ನನ್ನು ಭೇಟಿ ಮಾಡಿದರು. ಸಂದರ್ಶನ ಮಾಡಬೇಕು, ಸಿನಿಮಾ ಮಾಡ್ತಿನಿ ಅಂತ ಬಂದಿದ್ದರು. ಕಳೆದ ಮೂರು ವರ್ಷದಿಂದ ಸಂಶೋಧನೆ ಮಾಡಿದ್ದೇವೆಂದು ಹೇಳಿದರು. ಈ ಹುಡುಗಿ ಬಹಳ ಛಲವಂತೆ ಅಂತ ಗೊತ್ತಾಗಿ ಒಪ್ಪಿಗೆ ಕೊಟ್ಟೆ. ಬಳಿಕ ಆನಂದ ಸಂಕೇಶ್ವರ ಅವರಿಗೆ ಕರೆ ಮಾಡಿ ಹೇಳಿದೆ. ಬಳಿಕ ನಮ್ಮ ಬ್ಯಾನರ್ ಅಡಿಯಲ್ಲೇ ಚಿತ್ರ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು. ಆ ಬಳಿಕ ಹುಟ್ಟಿಕೊಂಡಿದ್ದೇ ವಿಜಯಾನಂದ ಫಿಲ್ಮ‌ ಪ್ರೊಡಕ್ಷನ್ಸ್ ಎಂದು ಸಿನಿಮಾ ಪ್ರಯಾಣ ಆರಂಭದ ಬಗ್ಗೆ ತಿಳಿಸಿದರು.

    ನಮ್ಮ ವಿಆರ್​ಎಲ್​ ಫಿಲ್ಮ್​ ಪ್ರೊಡಕ್ಷನ್ ಹೊಸ ಮುಖದ ಪ್ರತಿಭೆಗೆ ವೇದಿಕೆ ಆಗಲಿದೆ. ಒಳ್ಳೆ ಒಳ್ಳೆ ಪ್ರತಿಭೆಗಳು ನಮ್ಮ ಉತ್ತರ ಕರ್ನಾಟಕದಲ್ಲಿದ್ದಾರೆ. ಈ‌ ನಮ್ಮ ಸಂಸ್ಥೆ ಹೊಸ ಪ್ರತಿಭೆ, ಭಾರತೀಯ ಸಂಸ್ಕೃತಿ, ಸಂಸ್ಕಾರ ಸೇರಿದಂತೆ ವಿಭಿನ್ನ ರೀತಿಯಲ್ಲಿ ಅವಕಾಶ ಕಲ್ಪಿಸುತ್ತದೆ. ಸ್ಫರ್ಧೆ ಇದ್ದಾಗ ಮಾತ್ರ ಬೆಳೆಯಲು ಸಾಧ್ಯ. ಬೇರೆಯವರ ಜತೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳದೇ, ನಮ್ಮ ಸ್ಥಿತಿಯನ್ನು ಅಳೆದು ನೋಡುತ್ತಿರಬೇಕು. ಕೆಲಸದಲ್ಲಿ ತೊಡಗುವಿಕೆ ಇದ್ರೆ ಯಶಸ್ಸು ಖಂಡಿತ ಎಂದರು.

    ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲೇ ನಮ್ಮ ಬಗ್ಗೆ, ನಮ್ಮ ಸಂಸ್ಥೆಯ ಬಗ್ಗೆ ಅರಿತಿದ್ದಾರೆ. ಶ್ರೀನಗರದಲ್ಲಿ ನಮ್ಮ‌ ಕಚೇರಿ ಇರಲಿಲ್ಲ. ಮೋದಿ ಅವರ ಜತೆ ಶ್ರೀನರದಲ್ಲಿ ನಮ್ಮ ಶಾಖೆ ಆರಂಭಿಸುವ ಕನಸಿನ ಬಗ್ಗೆ ಹಂಚಿಕೊಂಡಿದ್ದೆ. ಸದ್ಯದಲ್ಲೇ ಆಗುತ್ತದೆ ಅಂತ ಭರವಸೆ ನೀಡಿದ್ರು. 15 ದಿನಗಳ ಹಿಂದೆ ಅಲ್ಲಿಗೆ ಹೋದಾಗ ಸಂತೋಷವಾಯ್ತು. ಇನ್ಮೊಂದು ವಾರದಲ್ಲೇ ಕಾಶ್ಮೀರದಲ್ಲಿ ವಿಆರ್​ಎಲ್​ ಶಾಖೆ ಆರಂಭಿಸಲಾಗುವುದು ಎಂದು ಹೇಳಿದರು.

    ಲಾಜಿಸ್ಟಿಕ್ ಬಿಜಿನಸ್ ಮಾಡೋದು ದೊಡ್ಡ ತ್ರಾಸಿನ ಕೆಲಸ. ಪ್ರತೀ ರಾಜ್ಯಕ್ಕೂ ತೆರಿಗೆ ನೀತಿಯಲ್ಲಿ ಬಹಳ ವ್ಯತ್ಯಾಸವಿದೆ. ಆದರೂ ವಿಆರ್​ಎಲ್​ ದೇಶದ ಅತೀ ದೊಡ್ಡ ಸಾರಿಗೆ ಉದ್ಯಮವಾಗಿ ಹೊರ ಹೊಮ್ಮಿದೆ. ನಮ್ಮ 19000 ಜನ ಕೆಲಸಗಾರರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. ಕಾರ್ಬನ್ ಕಾಪಿ ಆಗದಿದ್ದಕ್ಕೆ ನಾವು ಸಾಧನೆಯ ಹಾದಿಯಲ್ಲಿದ್ದೇವೆ. ಅದರ ಹೊರತಾಗಿ ಆನಂದ ಸಂಕೇಶ್ವರ ಅವರು ಅದ್ಭುತವಾಗಿ ಸುದ್ದಿವಾಹಿನಿಯನ್ನು ಆರಂಭಿಸಿದ್ರು. ಅದು ಕೂಡ ಯಶಸ್ಸಿನ ಹಾದಿಯಲ್ಲಿದೆ ಎಂದು ಪ್ರಶಂಸಿಸಿದರು.

    ವಿಜಯಾನಂದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ತಾರಾ ಮೆರಗು: ನಾಳೆಯಿಂದ ಶೂಟಿಂಗ್​ ಆರಂಭ

    ನಮ್ಮ ಲಸಿಕಾ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದೆ: ಪ್ರಧಾನಿ ಮೋದಿ

    ಹಿಂದೂ ಹೆಸರಲ್ಲಿ ಪ್ರೇಮದ ಬಲೆಬೀಸಿ ಮದುವೆಯಾದ ಯುವಕ- ಅಸಲಿಯತ್ತು ಗೊತ್ತಾದಾಗ ನಡೆಯಿತು ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts