More

    ಪೋರ್ನ್​ ಸೈಟಲ್ಲಿ ತಮ್ಮ ಖಾಸಗಿ ವಿಡಿಯೋಗಳನ್ನು ನೋಡಿ ಕೋರ್ಟ್​ ಮೆಟ್ಟಿಲೇರಿದ್ದ 80 ಮಹಿಳೆಯರಿಗೆ ಬಿಗ್​ ಶಾಕ್!​

    ಮ್ಯಾಡ್ರಿಡ್​: ಸ್ಪೇನ್​ನ ನ್ಯಾಯಾಲಯವೊಂದು ನೀಡಿರುವ ತೀರ್ಪು ಇದೀಗ ಭಾರೀ ಚರ್ಚೆಗೆ ಗುರಿಯಾಗಿದೆ. ಮಹಿಳಾ ಹಕ್ಕುಗಳ ಸಂಘಟನೆಗಳು ಕೋರ್ಟ್​ ನೀಡಿರುವ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿವೆ.

    ವಿವರಣೆಗೆ ಬರುವುದಾದರೆ, ಸುಮಾರು 80 ಮಹಿಳೆಯರು ಸ್ಪೇನ್​ನ ಸೆರ್ವೋ ನಗರದಲ್ಲಿ 2019ರಲ್ಲಿ ನಡೆದ ಮರುಕ್ಸೈನಾ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಹಿಳೆಯರು ಹೊರವಲಯದಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ಅಪರಿಚಿತ ವ್ಯಕ್ತಿಯೊಬ್ಬ ರಹಸ್ಯ ಕ್ಯಾಮೆರಾ ಮೂಲಕ ರೆಕಾರ್ಡ್​ ಮಾಡಿ ಪೋರ್ನ್​ ಸೈಟಿನಲ್ಲಿ ವಿಡಿಯೋಗಳನ್ನು ಅಪ್​ಲೋಡ್​ ಮಾಡಿದ್ದ. ಈ ಘಟನೆ ಇಡೀ ಸ್ಪೇನ್​ನಲ್ಲಿ ಭಾರೀ ಕೋಲಹಾಲ ಎಬ್ಬಿಸಿತ್ತು.

    ಪೋರ್ನ್​ ಸೈಟಿನಲ್ಲಿ ತಮ್ಮ ವಿಡಿಯೋಗಳನ್ನು ನೋಡಿದ ಸಂತ್ರಸ್ತ ಮಹಿಳೆರು 2020ರಲ್ಲಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ಕೋರ್ಟ್​ ಮೆಟ್ಟಿಲೇರಿದ್ದರು. ಅಂದಿನಿಂದ ಪ್ರಕರಣದ ವಿಚಾರಣೆ ನಡೆದುಕೊಂಡು ಬರುತ್ತಿದೆ. ಇದೀಗ ತೀರ್ಪು ಹೊರಬಿದ್ದಿದ್ದು, ಸಾರ್ವಜನಿಕ ಪ್ರದೇಶದಲ್ಲಿ ವಿಡಿಯೋ ರೆಕಾರ್ಡ್​ ಮಾಡಿರುವುದನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಜಡ್ಜ್​ ಪಬಲೋ ಮುನೋಜ್​ ವಾಕ್ಯೂಜ್​ ಆದೇಶ ಹೊರಡಿಸಿದ್ದಾರೆ.

    ತೀರ್ಪನ್ನು ಮರುಪರಿಶೀಲಿಸುವಂತೆ ಮಹಿಳಾ ಸಮಾನತೆಯ ರಾಷ್ಟ್ರೀಯ ಅಧ್ಯಕ್ಷೆ ಸುಸನ್ನಾ ಕ್ಯಾಮರೆರೊ ಅವರು ಲುಗೊ ಪ್ರಾಂತೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತೀರ್ಪಿನ ಬಗ್ಗೆ ಮಾತನಾಡಿರುವ ಸಂತ್ರಸ್ತೆ ಒಬ್ಬ, ನಮ್ಮ ವಿಡಿಯೋಗಳು ಪೋರ್ನ್​ ಸೈಟಿನಲ್ಲಿವೆ ಎಂಬುದನ್ನು ನಮ್ಮ ಫ್ರೆಂಡ್ಸ್​ ಮೂಲಕ ತಿಳಿದಾಗ ಭಾರೀ ಆಘಾತಕ್ಕೆ ಒಳಗಾದೆವು. ವಿಡಿಯೋ ನೋಡಿ ತುಂಬಾ ಅತ್ತಿದ್ದೇವೆ. ಇದೀಗ ಕೋರ್ಟ್​ನಿಂದ ಬಂದಿರುವ ತೀರ್ಪು ನಮ್ಮ ಮನಸ್ಸನ್ನು ಮತ್ತಷ್ಟು ಗಾಯಗೊಳಿಸಿದೆ ಎಂದು ನೋವು ತೋಡಿಕೊಂಡಿದ್ದಾರೆ.

    ಮಹಿಳೆಯ ಅನುಮತಿಯಿಲ್ಲದೇ ಫೋಟೋ ಅಥವಾ ವಿಡಿಯೋಗಳನ್ನು ತೆಗೆದುಕೊಂಡು ಪೋರ್ನ್​ ಸೈಟಿನಲ್ಲಿ ಅಪ್​ಲೋಡ್​ ಮಾಡುವುದು ಲೈಂಗಿಕ ದೌರ್ಜನ್ಯವಾಗಿದೆ ಎಂದು ಸ್ಪೇನ್​ನ ಮಹಿಳಾ ಸಚಿವೆ ಇರೆನೆ ಮೊಂಟೆರೋ ತಿಳಿಸಿದ್ದಾರೆ.

    ಇದೀಗ #Justice Maruxaina against the verdict given by the Lugo Provincial Court (ಲುಗೊ ಪ್ರಾಂತೀಯ ನ್ಯಾಯಾಲಯ ನೀಡಿದ ತೀರ್ಪನ್ನು ಮರುಪರಿಶೀಲಿಸಿ ಮರುಕ್ಸೈನಾಗೆ ನ್ಯಾಯ ಒದಗಿಸಿ) ಎಂಬ ಹ್ಯಾಷ್​ಟ್ಯಾಗ್​ ಮೂಲಕ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಮಹಿಳಾ ಸ್ವಾತಂತ್ರ್ಯವನ್ನು ಉಲ್ಲಂಘಿಸುವ ವೀಡಿಯೋಗಳನ್ನು ರೆಕಾರ್ಡ್​ ಮಾಡುವುದು “ಶಿಕ್ಷಾರ್ಹ” ಅಪರಾಧ ಎಂದು ತೀರ್ಪಿನ ವಿರುದ್ಧ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಅನಾ ಗಾರ್ಸಿಯಾ ಪ್ರತಿಭಟಿಸಿದ್ದಾರೆ. ಈ ತೀರ್ಪು ಮಹಿಳಾ ಸ್ವಾತಂತ್ರ್ಯಕ್ಕೆ ಮತ್ತಷ್ಟು ಧಕ್ಕೆ ತರುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)

    ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

    ಮೊಬೈಲ್​ ತಂದ ಆಪತ್ತು! ಮಲಗುವುದಾಗಿ ಹೇಳಿ ಬೆಡ್​ರೂಮ್​ಗೆ ಹೋದ ಮಗಳು ದುರಂತ ಸಾವು

    ನನ್ನ ಆಸೆ ಪೂರೈಸು ಇಲ್ದಿದ್ರೆ… ಕರೆ ಮಾಡಿದ ವಿವಾಹಿತನ ಮಾತು ಕೇಳಿ ಅಪ್ರಾಪ್ತೆ ನರ್ಸ್​ ದುರಂತ ಸಾವು

    ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆ ನಗದು ಬಹುಮಾನ: ಕೇಂದ್ರದ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts