More

    “ಆರ್​.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್​ಸ್ಪೆಕ್ಟರ್​ಗೆ ಹೇಳಿ…”

    ಬೆಂಗಳೂರು: ಡ್ರಗ್ಸ್ ಕೇಸ್​ ವಿಚಾರವಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಪಡೆದುಕೊಂಡಿದ್ದ ಆರ್​.ವಿ.ಯುವರಾಜ್​ ನಿಗದಿತ ಸಮಯಕ್ಕೂ ಒಂದೂ ಕಾಲು ಗಂಟೆ ಮುಂಚಿತವಾಗಿಯೇ ಸಿಸಿಬಿ ಕಚೇರಿ ತಲುಪಿದ್ದಾರೆ. ಅಲ್ಲಿ ಬಾಗಿಲ ಬಳಿ ನಿಂತಿದ್ದ ಸಿಸಿಬಿ ಸಿಬ್ಬಂದಿಗೆ, “ಆರ್​.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್ ಅವರಿ​ಗೆ ಹೇಳಿ…” ಎಂದು ಹೇಳಿದರು.

    ಸುಧಾಮನಗರದ ಮಾಜಿ ಕಾರ್ಪೊರೇಟರ್ ಆಗಿರುವ ಯುವರಾಜ್​ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಆರ್​.ವಿ.ದೇವರಾಜ್ ಅವರ ಪುತ್ರ. ಇಬ್ಬರು ಆಪ್ತರೊಂದಿಗೆ ಆಗಮಿಸಿದ ಯುವರಾಜ್​ ಮುಖದಲ್ಲಿ ಆತಂಕದ ಛಾಯೆ ಇದ್ದು, ಚಡಪಡಿಕೆ ಕಾಣುತ್ತಿತ್ತು. ಯುವರಾಜ್ ಪೇಜ್​ 3 ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದರು.

    ಇದನ್ನೂ ಓದಿ: ಭಾರತದಲ್ಲಿ ಸೈಬರ್ ಕ್ರೈಂ 500% ಹೆಚ್ಚಳ: ಎನ್​ಎಸ್​ಎ ಅಜಿತ್ ದೋವಲ್ ಕಳವಳ

    ಡ್ರಗ್​ ಪೆಡ್ಲರ್​ ಜತೆಗೆ ಯುವರಾಜ್​ಗೆ ಸಂಪರ್ಕ ಇರುವುದು ಫೋನ್ ಕರೆಗಳ ಮೂಲಕ ಸಾಬೀತಾಗಿದ್ದು, ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಈ ನಡುವೆ, ಇಂದು ಬೆಳಗ್ಗೆಯ ಆರ್​.ವಿ.ದೇವರಾಜ್ ಅವರ ಕುಟುಂಬ ಕಲಾಸಿಪಾಳ್ಯದ ತಮ್ಮ ನಿವಾಸದಿಂದ ಹೊರ ಹೋಗಿದೆ. ಆರ್.ವಿ.ದೇವರಾಜು ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)

    9 ಅಲ್​ಕೈದಾ ಉಗ್ರರ ಸೆರೆ- ಕೇರಳ, ಪಶ್ಚಿಮ ಬಂಗಾಳ ಸೇರಿ ವಿವಿಧೆಡೆ ಎನ್​ಐಎ ವಿಶೇಷ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts