More

    ಡ್ರೈವಿಂಗ್​ ವೇಳೆ ಬ್ಲ್ಯೂಟೂತ್​, ಇಯರ್​​ ಫೋನ್ ಬಳಸೋರಿಗೆ ಬೆಂಗ್ಳೂರು ಪೊಲೀಸರಿಂದ ಶಾಕಿಂಗ್​ ನ್ಯೂಸ್..!​

    ಬೆಂಗಳೂರು: ವಾಹನ ಚಾಲನೆ ಮಾಡುವಾಗ ಮೊಬೈಲ್​ ಫೋನ್​ ಬಳಕೆ ಮಾಡುವುದು ಕಾನೂನು ಬಾಹಿರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಆ ಕಾನೂನನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎಂಬುದೇ ಚರ್ಚಿತ ವಿಷಯವಾಗಿದೆ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಹ್ಯಾಂಡ್​​ಫ್ರೀ ಬ್ಲ್ಯೂಟೂತ್​ ಹಾಗೂ ಹೆಡ್​ಫೋನ್​ನಂತಹ ಸಾಧನಗಳನ್ನು ಡ್ರೈವಿಂಗ್ ವೇಳೆ​ ಬಳಸುವುದು ಸಾಮಾನ್ಯವಾಗಿದೆ. ಮೊಬೈಲ್​ ಫೋನ್​ ಬಳಕೆಯಿಂದ ಉಂಟಾಗಿರುವ ಅಪಘಾತಗಳಿಗಂತೂ ಲೆಕ್ಕವಿಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬೆಂಗಳೂರು ಪೊಲೀಸರು ಕಠಿಣ ನಿರ್ಧಾರವೊಂದನ್ನು ಮಾಡಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ.

    ವಾಹನ ಸವಾರರೇ ಎಚ್ಚರ ಇನ್ಮುಂದೆ ಮೊಬೈಲ್​ ಬಳಕೆಗೂ ಬೀಳಲಿದೆ ದಂಡ. ನೀವು ಮೊಬೈಲ್​ ಅನ್ನು ಕೈನಲ್ಲೇ ಹಿಡಿಕೊಳ್ಳಬೇಕು ಅಂಥೇನಿಲ್ಲ, ಇನ್ನು ಮುಂದೆ ಬ್ಲ್ಯೂಟೂತ್​ ಅಥವಾ ಹೆಡ್​ಫೋನ್​ ಬಳಸಿ ವಾಹನ ಚಾಲನೆ ಮಾಡಿದರೂ ಕೂಡ ದಂಡ ಕಟ್ಟಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ಪೊಲೀಸರು ಯಾವುದೇ ವಿಧದಲ್ಲೂ ಮೊಬೈಲ್​ ಫೋನ್​ ಬಳಸುವಾಗ ಇನ್ಮುಂದೆ ಪೊಲೀಸರ ಕೈಗೆ ಸಿಕ್ಕರೆ, ಅವರಿಗೆ 1000 ರೂಪಾಯಿಯ ದಂಡ ವಿಧಿಸಿ ರಶೀದಿ ನೀಡಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದೆ.

    ಹೆಡ್​ಫೋನ್​ ಧರಿಸಿ ಡ್ರೈವಿಂಗ್​ ಮಾಡಿದರೆ ಅಂಥವರನ್ನು ಹೆಲ್ಮೆಟ್​ ನಿಯಮ ಅಥವಾ ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಸೇರಿಸಿ, ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಹೆಲ್ಮೆಟ್​ ಧರಿಸಿ ಅದರಡಿಯಲ್ಲಿ ಇಯರ್​ ಫೋನ್​ ಹಾಕಿಕೊಂಡರು ಕೂಡ ಅದು ಕಾನೂನು ಬಾಹಿರ ಎಂದು ಹೇಳಿದ್ದಾರೆ.

    ಇನ್ನು ಬಹುತೇಕ ಕಡೆಗಳಲ್ಲಿ ಈಗಾಗಲೇ ನೋಡಿರುವಂತೆ ಹೆಲ್ಮೆಟ್​ ಅಡಿಯಲ್ಲಿ ಮೊಬೈಲ್​ ಫೋನ್​ ಇಟ್ಟುಕೊಂಡು ಮಾತನಾಡಿದರೂ ಕೂಡ ದಂಡ ತಪ್ಪಿದ್ದಲ್ಲ. ಅಲ್ಲದೆ, ಫೋನ್​ ಜೇಬಿನಲ್ಲಿಟ್ಟು ಬ್ಲ್ಯೂಟೂತ್​ ಡಿವೈಸ್​ ಮೂಲಕ ಮಾತನಾಡುವುದು ಕೂಡ ನಿಯಮ ಉಲ್ಲಂಘನೆಯಾಗಿದೆ. ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಒಳಿತು. ಇಲ್ಲವಾದಲ್ಲಿ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವುದರಲ್ಲಿ ಅನುಮಾನವೇ ಇಲ್ಲ.

    ಸಿಗ್ನಲ್​ನಲ್ಲಿ ನಿಂತು ಮಾತನಾಡುವಂತಿಲ್ಲ
    ಟ್ರಾಫಿಕ್​ನಲ್ಲಿ ರೆಡ್​ ಸಿಗ್ನಲ್​ ಬಿದ್ದಿದೆ ಒಂದೆರೆಡು ನಿಮಿಷ ಟೈಂ ಇದೆ ಆ ಗ್ಯಾಪ್​ ಅಲ್ಲಿ ಮಾತನಾಡೋಣ ಅಂತ ಮೊಬೈಲ್​ ತೆಗೆದು ಮಾತನಾಡಿದರೂ ಕೂಡ ನೀವು ದಂಡದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆ ರೀತಿ ಮಾತನಾಡುವುದರಿಂದ ಪಕ್ಕದ ಸವಾರರಿಗೆ ತೊಂದರೆ ಆಗಲಿದೆ ಎಂಬುದು ಕಾನೂನಿನ ವಾದ. ಅದೇ ರೀತಿ ಕಾರು ಚಾಲಕ ಆಧುನಿಕ ಸಾಧನದ ಮುಖಾಂತರ ಸಿಗ್ನಲ್​ನಲ್ಲಿ ಲೌಡ್​ ಸ್ಪೀಕರ್​ನೊಂದಿಗೆ ಮಾತನಾಡುವುದು ಕೂಡ ಕಾನೂನು ಬಾಹಿರ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.

    ಮ್ಯೂಸಿಕ್​ ಮತ್ತು ಗೂಗಲ್​ ಮ್ಯಾಪ್​ಗೂ ಕೆಲ ನಿಯಮ
    ಚಾಲನೆ ವೇಳೆ ಹೆಡ್​ಫೋನ್​ ಅಥವಾ ಬ್ಲ್ಯೂಟೂತ್​ ಡಿವೈಸ್​ ಬಳಸಿ ಮ್ಯೂಸಿಕ್​ ಕೇಳುವುದು ಮತ್ತು ಗೂಗಲ್​ ಮ್ಯಾಪ್​ ಬಳಸುವುದು ಕೂಡ ಕಾನೂನು ಬಾಹಿರ. ಆದಾಗ್ಯೂ, ಬೇರೆ ಸವಾರರಿಗೆ ತೊಂದರೆ ಆಗದಂತೆ ಕಾರಿನಲ್ಲಿ ಮ್ಯೂಸಿಕ್​ ಪ್ಲೇ ಮಾಡಲು ಅವಕಾಶ ಇದೆ. ಆದರೆ, ಬ್ಲ್ಯೂಟೂತ್​ ಬಳಸುವಂತಿಲ್ಲ.

    ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ಗೂಗಲ್​ ಪ್ಯಾಪ್​ಗಳನ್ನು ಬಳಸಬಹುದು ಎಂದು ಪೊಲೀಸರು ಹೇಳುತ್ತಾರೆ. ಆದಾಗ್ಯೂ, ನಕ್ಷೆಗಳನ್ನು ಬಳಸುವಾಗ ಸವಾರ ಫೋನ್ ಹಿಡಿದಿರಬಾರದು. ಬೈಕ್​ ಅಥವಾ ಕಾರಿಗಳಲ್ಲಿ ಫೋನ್ ಹೋಲ್ಡರ್ ಅಳವಡಿಸಿಕೊಂಡು ಮ್ಯಾಪ್‌ಗಳನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಚಾಲನೆ ಮಾಡುವಾಗ ಅಥವಾ ಸವಾರಿ ಮಾಡುವಾಗ ಫೋನ್ ಹಿಡಿದಿಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. (ಏಜೆನ್ಸೀಸ್​)

    ಐಸ್‌ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿನ್ಬೋದಾ? ಬೆಂಗಳೂರಿನ ಹೋಟೆಲ್‌ನಲ್ಲಿ ಇನ್ಮುಂದೆ ಅದೂ ಸಾಧ್ಯ!

    ನಟಿ ಸೌಜನ್ಯ ಸಾವು ಪ್ರಕರಣ: ಆರೋಪಿ ಮೊಬೈಲ್​ನಲ್ಲಿದ್ದ ಫೋಟೋ-ವಿಡಿಯೋಗಳ ಬೆನ್ನತ್ತಿದ ಪೊಲೀಸರು

    ಪತಿ ಜೈಲಿನಿಂದ ಬರುತ್ತಿದ್ದಂತೆಯೇ ಪ್ರೀತಿಯ ಬಗ್ಗೆ ಶಿಲ್ಪಾ ನಿಗೂಢ ಸಂದೇಶ- ತಲೆ ಕೆಡಿಸಿಕೊಂಡ ಅಭಿಮಾನಿಗಳು

    ರಿತೇಶ್​, ಪ್ರೀತಿ ಝಿಂಟಾರನ್ನು ಅಪ್ಪಿ, ಕೈಗೆ ಮುತ್ತಿಟ್ಟಾಗ ಕೊಟ್ಟ ಎಕ್ಸ್​ಪ್ರೆಷನ್ ಬಗ್ಗೆ ಜೆನಿಲಿಯಾ ಹೇಳಿದ್ದಿಷ್ಟು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts