More

    ಉತ್ತರ ಪ್ರದೇಶದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ: ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ಸಿಎಂ ಯೋಗಿ ಹೆಜ್ಜೆ

    ಲಖನೌ: 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವತ್ತ ಬಿಜೆಪಿ ಪಕ್ಷ ದಾಪುಗಾಲು ಹಾಕಿದೆ. ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಮತಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದು ಬಿಜೆಪಿ ಇದೀಗ ಸ್ಪಷ್ಟ ಬಹುಮತದತ್ತ ಸಾಗಿದ್ದು, ಮತ್ತೊಮ್ಮೆ ಗದ್ದುಗೆ ಏರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

    ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್​ ನಂಬರ್​ 202ರ ಅವಶ್ಯಕತೆ ಇದೆ. ಈಗಾಗಲೇ ಬಿಜೆಪಿ ಮ್ಯಾಜಿಕ್​ ನಂಬರ್​ ಅನ್ನು ದಾಟಿ 262 ಸ್ಥಾನಗಳೊಂದಿಗೆ ಮುನ್ನುಗುತ್ತಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಸರ್ಕಾರ ಮತ್ತೊಮ್ಮೆ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

    ಮತದಾನೋತ್ತರ ಸಮೀಕ್ಷೆಯಂತೆಯೇ ಉತ್ತರ ಪ್ರದೇಶದಲ್ಲಿ ಅಧಿಕಾರದ ಗದ್ದುಗೆ ಏರುವತ್ತ ಬಿಜೆಪಿ ಹೆಜ್ಜೆ ಹಾಕಿದೆ. ತಾವು ಸ್ಪರ್ಧಿಸಿರುವ ಗೋರಖ್​ಪುರ್​ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಅವರು ಭಾರೀ ಅಂತರದಲ್ಲಿ ಭರ್ಜರಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. (ಏಜೆನ್ಸೀಸ್​)

    ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

    ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts