More

    ಉ. ಪ್ರದೇಶದಲ್ಲಿ ಕಾಂಗ್ರೆಸ್​ಗೆ​ ಹೀನಾಯ ಸೋಲು: ಅತಿದೊಡ್ಡ ಪಕ್ಷದ ಹಿನ್ನಡೆಗೆ ಈ ಅಂಶಗಳೇ ಕಾರಣವಾಯ್ತಾ?

    ಲಕನೌ: ದಶಕಗಳ ಕಾಲ ದೇಶವನ್ನು ಆಳಿದ ಅತಿ ದೊಡ್ಡ ಪಕ್ಷ ಕಾಂಗ್ರೆಸ್​ ಪಂಚರಾಜ್ಯ (ಉತ್ತರ ಪ್ರದೇಶ, ಗೋವಾ, ಪಂಜಾಬ್​, ಮಣಿಪುರ, ಉತ್ತರಾಖಂಡ) ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಅದರಲ್ಲೂ ಉತ್ತರ ಪ್ರದೇಶದ ಮೇಲೆ ಕಾಂಗ್ರೆಸ್​ಗೆ ಭಾರೀ ಭರವಸೆ ಇತ್ತು. ಪ್ರಿಯಾಂಕಾ ಗಾಂಧಿ ವರ್ಚಸ್ಸಿನಡಿಯಲ್ಲಿ ಜನರು ಒಂದು ಅವಕಾಶ ನೀಡುತ್ತಾರೆಂದು ಭಾವಿಸಿದ್ದರು. ಆದರೆ, ಅವರ ಆಸೆ ನಿರಾಸೆಯಾಗಿದೆ. ಉತ್ತರ ಪ್ರದೇಶದಲ್ಲಿ ಎರಡಂಕಿಯನ್ನು ದಾಟದ ಕಾಂಗ್ರೆಸ್​ ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಮಯವಾಗಿದೆ.

    ಸಾಕಷ್ಟು ಸಮಾವೇಶಗಳನ್ನು ಹಮ್ಮಿಕೊಂಡಿದ್ದು, ಹಾಥರಸ್​ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್​ ನೀಡಿದ್ದು ಸೇರಿದಂತೆ ನಾನಾ ತಂತ್ರಗಳನ್ನು ಕಾಂಗ್ರೆಸ್​ ಹೆಣೆದರೂ ಕೂಡ ಯಾವುದೂ ಫಲಿಸಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಕೆಲವು ತಂತ್ರಗಾರಿಕೆಯ ತಪ್ಪುಗಳನ್ನು ಮಾಡಿದ್ದು, ಅವು ಯಾವುವು ಎಂಬುದನ್ನು ಒಮ್ಮೆ ನೋಡೋಣ.

    403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಒಂದು ಬಹು ದೊಡ್ಡ ರಾಜ್ಯ. ಇಂತಹ ರಾಜ್ಯದಲ್ಲಿ ಕಾಂಗ್ರೆಸ್​ ಯಾವೊಂದು ಪಕ್ಷದ ಜತೆ ಮೈತ್ರಿಯು ಇಲ್ಲದೇ ಏಕಾಂಗಿಯಾಗಿ ಸ್ಪರ್ಧಿಸಿದ್ದು ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಪ್ರಿಯಾಂಕಾ ಗಾಂಧಿ ಹೊರತುಪಡಿಸಿದರೆ ಪ್ರಬಲ ನಾಯಕರ ಕೊರತೆ ಕಾಂಗ್ರೆಸ್​ನಲ್ಲಿ ಎದ್ದು ಕಾಣುತ್ತಿದೆ. ಅಲ್ಲದೆ, ಪಕ್ಷದ ರಾಷ್ಟ್ರಮಟ್ಟದ ದೌರ್ಬಲ್ಯವು ಕೂಡ ಕಾಂಗ್ರೆಸ್​ ಅನ್ನು ಹತಾಶೆಗೆ ದೂಡಿದೆ.

    ಉತ್ತರ ಪ್ರದೇಶದ ಅಧಿಕಾರದಿಂದ ಬಹು ದೂರ ಉಳಿದಿರುವ ಕಾಂಗ್ರೆಸ್​ ಬೇರು ಮಟ್ಟದಲ್ಲಿ ದುರ್ಬಲವಾಗಿದೆ. ಎಷ್ಟೇ ಭರವಸೆಗಳನ್ನು ನೀಡಿದರೂ ಉತ್ತರ ಪ್ರದೇಶದ ಜನ ಕಾಂಗ್ರೆಸ್​ ಮೇಲೆ ನಂಬಿಕೆ ಇಡುತ್ತಿಲ್ಲ. ಅತಿಯಾದ ಆತ್ಮ ವಿಶ್ವಾಸವೂ ಕೂಡ ಕಾಂಗ್ರೆಸ್​ಗೆ ಮುಳುವಾಗಿದೆ. ಇನ್ನು ಪ್ರಿಯಾಂಕಾರ ಚರಿಷ್ಮಾ ಕೂಡ ಇಲ್ಲಿ ವರ್ಕ್​ ಆಗಲಿಲ್ಲ.

    ಪ್ರಿಯಾಂಕಾ ಗಾಂಧಿ ಹೋದ ಕಡೆ ಜನ ಸಾಗರ ಸೇರುತ್ತಿತ್ತು. ಉತ್ತರ ಪ್ರದೇಶಲ್ಲಿ ಭರ್ಜರಿ ಪ್ರಚಾರ ಮಾಡಿದ್ರೂ ಮತದಾರರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮನ್ನಣೆ ನೀಡಲಿಲ್ಲ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಷ್ಟೇ ಕಾಂಗ್ರೆಸ್​ಗೆ​ ಗೆಲುವಾಗಲಿದೆ. ಈಗಾಗಲೇ 270 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 2ನೇ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷಕ್ಕೆ 123 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್​)

    ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

    ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts