More

    ವಿಶ್ವದ ದೀರ್ಘಕಾಲಿಕ ಕರೊನಾ ರೋಗಿ ಈತ: 1 ವರ್ಷ ಕೋವಿಡ್​ನಿಂದ ಅನುಭವಿಸಿದ ನರಕಯಾತನೆ ಭಯಾನಕ!

    ಲಂಡನ್​: ಮಹಾಮಾರಿ ಕರೊನಾ ವೈರಸ್​ನಿಂದ ಬದುಕುಳಿದಿರುವ ಬ್ರಿಟನ್​ ಮೂಲದ ವ್ಯಕ್ತಿಯೊಬ್ಬ ವಿಶ್ವದ ದೀರ್ಘಕಾಲಿಕ ಕರೊನಾ ಸೋಂಕಿತ ಎಂದು ಕರೆಯಲಾಗಿದೆ. ಸುಮಾರು 1 ವರ್ಷಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿರುವ ಸೋಂಕಿತ ಇದೀಗ ಗುಣಮುಖನಾಗಿದ್ದಾನೆ.

    ಜಾಸನ್​ ಕೆಲ್ಕ್​ (49) ಒಂದು ವರ್ಷದ ಬಳಿಕ ಕರೊನಾದಿಂದ ಗುಣಮುಖರಾದ ಸೋಂಕಿತ. ಈತ ಇಂಗ್ಲೆಂಡ್​​ನ ಲೀಡ್ಸ್​ ಮೂಲದವನು. ಕಳೆದ ಏಪ್ರಿಲ್​ನಲ್ಲಿ ಎದೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅದು ಕರೊನಾಗೆ ತಿರುಗಿತ್ತು.

    ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ಕೆಲ್ಕ್​, ಕಳೆದ ಏಪ್ರಿಲ್​ನಿಂದ ಆಸ್ಪತ್ರೆಯಲ್ಲಿ ಉಳಿದಿದ್ದರು. ಅವರಿಗೆ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರನ್ನು ವೆಂಟಿಲೇಟರ್​ನಿಂದ ತೆಗೆದು ಕೇವಲ 48 ಗಂಟೆಗಳು ಮಾತ್ರ ಕಳೆದಿವೆ. ಆದರೆ, ವೈರಸ್​ ಹೊಟ್ಟೆ ಮಾಡಿರುವ ಹಾನಿಯಿಂದ ಗ್ಯಾಸ್ಟ್ರೋಪ್ಯಾರೆಸಿಸ್​ ಆಗಿದ್ದು, ಇದರ ಪರಿಣಾಮ ಕೆಲ್ಕ್​, ದಿನನಿತ್ಯದ ವಾಂತಿಯಿಂದ ಬಳಲುತ್ತಿದ್ದಾರೆ. ಅಲ್ಲದೆ, ಕೆಲ್ಕ್​ಗೆ ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿಲ್ಲ.

    ಇನ್ನು ಕೆಲ್ಕ್​, ವಿಶ್ವದ ಅತಿ ಹೆಚ್ಚು ಕಾಲ ಬಳಲುತ್ತಿರುವ ಕರೊನಾ ವೈರಸ್ ರೋಗಿಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಲೀಡ್ಸ್ ಲೈವ್ ಅವರಿಗೆ ಈ ಹೆಸರನ್ನು ನೀಡಿದೆ. ದೀರ್ಘಕಾಲಿಕವಾಗಿ ಕೋವಿಡ್​ನಿಂದ ಬಳಲಿದ ಕೆಲ್ಕ್​ ತನ್ನ ಆಸ್ಪತ್ರೆಯ ಅವಧಿಯಲ್ಲಿ ಸಹಜವಾಗಿಯೇ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಇದನ್ನು ಹೊರತುಪಡಿಸಿ, ಮೆದುಳು ನೋವು, ಸ್ನಾಯು ಹಿಡಿತ ಸೇರಿದಂತೆ ಇನ್ನು ಅನೇಕ ತೊಂದರೆಗಳನ್ನು ಅವರು ಎದುರಿಸಿದ್ದಾರೆ. ಆತನ ಕಿಡ್ನಿ ಮತ್ತು ಶ್ವಾಸಕೋಶ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.

    ಎನ್‌ಎಚ್‌ಎಸ್ ಇಂಗ್ಲೆಂಡ್‌ನ ವೆಬ್‌ಸೈಟ್ ಹೇಳುವಂತೆ ಆಹಾರವು ಹೊಟ್ಟೆಯಿಂದ ಸರಿಯಾಗಿ ಖಾಲಿಯಾಗದೇ ಇರುವುದರಿಂದ ವಾಂತಿಗೆ ಕಾರಣವಾಗುತ್ತದೆ. ಹೀಗಾಗಿ ಕರೊನಾ ವೈರಸ್​ ಜೀರ್ಣ ವ್ಯವಸ್ಥೆಗೂ ಹಾನಿ ಮಾಡಲಿದೆ ಎಂದು ತಿಳಿದುಬಂದಿದೆ. ಇದೀಗ ಕೊಂಚ ಗುಣಮುಖರಾಗಿರುವ ಕೆಲ್ಕ್​ ಮನೆಗೆ ಹಿಂದಿರುಗಲು ಎದುರು ನೋಡುತ್ತಿದ್ದಾರೆ. ವೈರಸ್​ ತಗುಲುವ ಮುನ್ನ ಕೆಲ್ಕ್​ ಅವರು ಎರಡು ರೀತಿಯ ಮಧುಮೇಹದಿಂದ ಬಳಲುತ್ತಿದ್ದರು. ಹೀಗಾಗಿ ಕರೊನಾದಿಂದ ಹೆಚ್ಚು ಪರಿಣಾಮ ಎದುರಿಸಿದ್ದಾರೆ. (ಏಜೆನ್ಸೀಸ್​)

    ಕಾಂಗ್ರೆಸ್‌ಗೆ ಭರವಸೆದಾಯಕ ಎನಿಸದ ಸಮೀಕ್ಷೆ: ಐದು ರಾಜ್ಯಗಳ ಎಕ್ಸಿಟ್‌ ಪೋಲ್

    ಅತಿಯಾಗಿ ಆಲೋಚಿಸುವುದನ್ನು ನಿಲ್ಲಿಸುವುದು ಹೇಗೆ?

    ಹೆಣ್ಣು ಮಕ್ಕಳು ಮದುವೆಯಾದ ಬಳಿಕ ಹೆಚ್ಚು ಆಕರ್ಷಿತರಾಗಿ ಕಾಣುವುದಕ್ಕೆ ಇದೇ ಕಾರಣನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts