ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

blank

ಕೊಯಿಕ್ಕೋಡ್​: ದೇಶದ ಅತಿ ಕಿರಿಯ ಮೇಯರ್​ ಹಾಗೂ ಕೇರಳದ ಅತಿ ಕಿರಿಯ ಶಾಸಕರ ನಡುವಿನ ಮದುವೆಗೆ ದಿನಾಂಕ ಫಿಕ್ಸ್​ ಆಗಿದೆ. ದೇಶದಲ್ಲೇ ವಿನೂತನ ಮದುವೆ ಸಂಭ್ರಮಕ್ಕೆ ದೇವರ ನಾಡು ಕೇರಳ ಸಾಕ್ಷಿಯಾಗಲಿದೆ.

ತಿರುವನಂತಪುರದ ಮೇಯರ್​ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್ ದೇವ್​​​ (28) ಅವರ ವಿವಾಹ ಸಮಾರಂಭವು ಸೆಪ್ಟೆಂಬರ್​ 4ರಂದು ಬೆಳಗ್ಗೆ 11 ಗಂಟೆಗೆ ಎಕೆಜಿ ಹಾಲ್​ನಲ್ಲಿ ಅದ್ಧೂರಿಯಾಗಿ ನೆರವೇರಲಿದೆ. ಕಳೆದ ಮಾರ್ಚ್​ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆದಿದೆ.

ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಸಚಿನ್​ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಎಸ್​ಎಫ್​ಐ ಸಂಘಟನೆಯ ಅಖಿಲ ಭಾರತೀಯ ಜಂಟಿ ಕಾರ್ಯದರ್ಶಿಯಾಗಿರುವ ಶಾಸಕ ಸಚಿನ್​ ದೇವ್ ಕೊಯಿಕ್ಕೋಡ್​ನ ನೆಲ್ಲಿಕೋಡ್​ ಮೂಲದವರು. ಎಸ್​ಎಫ್​ಐನ ರಾಜ್ಯ ಕಾರ್ಯದರ್ಶಿ ಆಗಿದ್ದ ಸಮಯದಲ್ಲಿ ಬಲುಸ್ಸೆರಿ ವಿಧಾನಸಭೆ ಚುನಾವಣೆಯಿಂದ ಸ್ಪರ್ಧಿಸಿದ್ದರು. ಸಚಿನ್​ ಅವರು ಕೊಯಿಕ್ಕೂಡ್​ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್​ ಸಾಹಿತ್ಯದಲ್ಲಿ ಪದವಿ ಶಿಕ್ಷಣ ಮತ್ತು ಕೊಯಿಕ್ಕೋಡ್​ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದಾರೆ.

ಆರ್ಯಾ ರಾಜೇಂದ್ರನ್​ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರ ಮದುವೆ ಫಿಕ್ಸ್​ ಆಗಿದ್ದು, ವಿನೂತನ ಮದುವೆಗೆ ಕೇರಳ ರಾಜ್ಯ ಸಾಕ್ಷಿಯಾಗಲಿದೆ. (ಏಜೆನ್ಸೀಸ್​)

ಚಾಮರಾಜಪೇಟೆ ಬಂದ್​ಗೆ ಉತ್ತಮ ಪ್ರತಿಕ್ರಿಯೆ: ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿದ ಮಾಲೀಕರು

ತೆಲಂಗಾಣದಲ್ಲಿ ಮೀನಿನ ಮಳೆ ಕಂಡು ಹೌಹಾರಿದ ಜನರು! ಈ ಮೀನುಗಳು ತಿನ್ನಲು ಯೋಗ್ಯವೇ? ಇಲ್ಲಿದೆ ಉತ್ತರ…

ಅತ್ತೆ-ಸೊಸೆಯೆಂಬ ವಿರುದ್ಧ ದಿಕ್ಕು; ಕೂಡಿ ಬಾಳಿದರೆ ಮನೆ-ಮನ ಆರೋಗ್ಯ ಪೂರ್ಣ

Share This Article

Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?

Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…

Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?

Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…

ಚಳಿಗಾಲದಲ್ಲಿ ಸೀಬೆಹಣ್ಣನ್ನು ಹೇಗೆ ತಿಂದರೆ ಆರೋಗ್ಯಕ್ಕೆ ಪ್ರಯೋಜನಕಾರಿ; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಸೀಬೆಹಣ್ಣು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ತಲೆಯಿಂದ ಕಾಲ್ಬೆರಳು ಉಗುರುಗಳವರೆಗೆ ಆರೋಗ್ಯಕರವಾಗಿರಲು ಇದು ಕಿತ್ತಳೆಗಿಂತ ಹೆಚ್ಚು…