More

    ಸಚಿವ ಮಾಧುಸ್ವಾಮಿ ಆಡಿಯೋ ವೈರಲ್​ ಬೆನ್ನಲ್ಲೇ ಹೊಸದೊಂದು ಬಾಂಬ್ ಸಿಡಿಸಿದ ಕೆ.ಎನ್.ರಾಜಣ್ಣ

    ತುಮಕೂರು: ಸರ್ಕಾರ ನಡೆಯುತ್ತಿಲ್ಲ ಮ್ಯಾನೇಜ್​ ಮಾಡುತ್ತಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

    ರಾಜಣ್ಣ ಅವರ ಮಾತು ಕೇಳಿದರೆ, ತುಮಕೂರು ಜಿಲ್ಲೆಯ ಇಬ್ಬರು ಪ್ರಭಾವಿ ಬಿಜೆಪಿ ನಾಯಕರು ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರಾ ಅನ್ನೋ ಪ್ರಶ್ನೆ ಕಾಡ ತೊಡಗಿದೆ. ಸಚಿವ ಮಾಧುಸ್ವಾಮಿ ಸೇರಿದಂತೆ ಮತ್ತೊಬ್ಬ ನಾಯಕನ ವಿಚಾರವನ್ನು ರಾಜಣ್ಣ ಪ್ರಸ್ತಾಪಿಸಿದ್ದಾರೆ.

    ಸರ್ಕಾರ ನಡೆಯುತ್ತಿಲ್ಲ ಎಂಬ ಹೇಳಿಕೆ ನೀಡಿ ಸಚಿವ ಮಾಧುಸ್ವಾಮಿ ಸುದ್ದಿಯಾಗಿದ್ದರೆ, ಸಿಎಂ ಬದಲಾವಣೆಯ ಮಾತುಗಳನ್ನಾಡಿ ಬಿಜೆಪಿ ಸರ್ಕಾರದ ವಲಯದಲ್ಲಿ ಸುರೇಶ್​ ಗೌಡ ಬಿರುಗಾಳಿ ಎಬ್ಬಿಸಿದ್ದಾರೆ. ಈ ಇಬ್ಬರ ಹೇಳಿಕೆಯ ಹಿಂದೆ ಪಕ್ಷ ತೊರೆಯುವ ಉದ್ದೇಶವಿದೆಯಾ? ಸರ್ಕಾರಕ್ಕೆ ಡ್ಯಾಮೇಜ್ ಮಾಡಿ, ಆನಂತರ ಪಕ್ಷ ತೊರೆಯುವ ಆಲೋಚನೆಯಲ್ಲಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಇಂಥದ್ದೊಂದು ಅನುಮಾನವನ್ನು ರಾಜಣ್ಣ ಅವರ ಹೇಳಿಕೆ ಹುಟ್ಟಿಸಿದೆ.

    ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಮಾಧುಸ್ವಾಮಿ ಅವರು ನನ್ನನ್ನು ಕೇಳಿದರು. ತಿಪಟೂರಲ್ಲಿ ಸೀಟ್​ ಕೊಡಿಸಿ, ನಾನು ಕಾಂಗ್ರೆಸ್​ಗೆ ಬರ್ತೀನಿ ಅಂದಿದ್ದರು. ಅವರು ಕಾಂಗ್ರೆಸ್​ಗೆ ಬಂದರೆ ನಾನು ಸ್ವಾಗತ ಮಾಡುತ್ತೇನೆ. ಮಂತ್ರಿ ಇದ್ದಾಗಲೇ ನನ್ನತ್ರ ಈ ಬಗ್ಗೆ ಮಾತನಾಡಿದರು ಎಂದು ಹೇಳಿದ್ದಾರೆ.

    ಮಾಜಿ ಶಾಸಕ ಸುರೇಶ್ ಗೌಡ ಕೂಡ ಕಾಂಗ್ರೆಸ್ ಕದ ತಟ್ಟಿದರು. ಅವರದೊಂದು ಕೇಸ್ ಇದೆ. ಆ ಕೇಸ್ ಇತ್ಯರ್ಥ ಆದ ಮೇಲೆ ಕಾಂಗ್ರೆಸ್​ಗೆ ಬರುತ್ತೇನೆ ಅಂದಿದ್ದರು. ಆ ನಂತರ ಸುರೇಶ್ ಗೌಡ ನನ್ನ ಕೈಗೆ ಸಿಕ್ಕಿಲ್ಲ. ಈಗ ಏನು ಬದಲಾವಣೆ ಆಗಿದೆಯೋ ಗೊತ್ತಿಲ್ಲ ಎಂದು ತುಮಕೂರಿನಲ್ಲಿ ಕೆ.ಎನ್. ರಾಜಣ್ಣ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

    ಡೆಹ್ರಾಡೂನ್​​ನಲ್ಲಿ ಮೇಘಸ್ಫೋಟ: ಸ್ಥಳಕ್ಕೆ ವಿಪತ್ತು ನಿರ್ವಹಣಾ ಪಡೆ ದೌಡು, ರಕ್ಷಣಾ ಕಾರ್ಯಾಚರಣೆ ಜೋರು

    ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ರಾಹುಲ್​ ನಡೆದುಕೊಂಡ ರೀತಿಗೆ ನೆಟ್ಟಿಗರ ಬಹುಪರಾಕ್​: ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts