More

    ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚ: ಸಂಸತ್ತಿಗೆ ಸಾರಿಗೆ ಸಚಿವರು ಬಂದಿಳಿದ ಹೈಡ್ರೋಜನ್​ ಕಾರಿನ ವಿಶೇಷತೆ ಹೀಗಿದೆ..

    ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಕೇಂದ್ರ ಸರ್ಕಾರ ಹೆಚ್ಚಿನ ಉತ್ತೇಜನ ನೀಡತೊಡಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಟೊಯೊಟಾ ಮಿರೈ ಕಾರಿನಲ್ಲಿ ಆಗಮಿಸಿ ಗಮನಸೆಳೆದರು. ಇದನ್ನು ಅವರು ಕೂ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

    ಜಲಜನಕ ಆಧಾರಿತ ಫ್ಯೂಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ (ಎಫ್​ಸಿಇವಿ)ನಲ್ಲಿ ಮೂರು ಹೈಡ್ರೋಜನ್ ಟ್ಯಾಂಕ್​ಗಳಿವೆ. ಅಂದಾಜು ಐದೇ ನಿಮಿಷದಲ್ಲಿ ಇಂಧನ ಮರುಭರ್ತಿ ಮಾಡುವುದಕ್ಕೂ ಸಾಧ್ಯವಿದೆ. 1.24kWh ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಇದರಲ್ಲಿದೆ. 182 ಎಚ್​ಪಿ ಎಲೆಕ್ಟ್ರಿಕ್ ಮೋಟಾರನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ. ಟೊಯೊಟಾ ಮಿರೈನಂತೆ ಹೋಂಡಾದ ಕ್ಲಾರಿಟಿ, ಹ್ಯುಂಡೈನ ನೆಕ್ಸೋ ಕೂಡ ಹೈಡ್ರೋಜನ್ ಗ್ಯಾಸ್ ಅನ್ನು ಇಂಧನವಾಗಿ ಬಳಸುತ್ತದೆ.

    ದೇಶದ ಮೊದಲ ಎಫ್​ಸಿಇವಿ: ಟೊಯೊಟಾ ಮಿರೈ ದೇಶದ ಮೊದಲ ಗ್ರೀನ್ ಹೈಡ್ರೋಜನ್ ಕಾರು. ವಾಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಇದು ಮುನ್ನುಡಿ ಬರೆಯಲಿದೆ. ಆತ್ಮನಿರ್ಭರ ಭಾರತಕ್ಕೆ ಪೂರಕ ವಿದ್ಯಮಾನಗಳು ನಡೆಯುತ್ತಿವೆ. ಈ ಯೋಜನೆಗಾಗಿ ಸರ್ಕಾರ 3,000 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.

    ದೇಶದಲ್ಲಿ ಗ್ರೀನ್​ ಹೈಡ್ರೋಜನ್ ಉತ್ಪಾದನೆ ಪ್ರಾರಂಭವಾಗುತ್ತದೆ. ಆಮದುಗಳಿಗೆ ಕಡಿವಾಣ ಹಾಕಲಾಗುವುದು ಮತ್ತು ಹೊಸ ಉದ್ಯೋಗಾವಕಾಶಳು ಕಾಣಿಸಿಕೊಳ್ಳಲಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

    ಒಮ್ಮೆ ಫುಲ್​ ಟ್ಯಾಂಕ್​ ಮಾಡಿದರೆ 600 ಕಿ.ಮೀ ಚಲಿಸಬಹು. ಫುಲ್​ ಟ್ಯಾಂಕ್​ ಮಾಡಲು ಕೇವಲ ಐದು ನಿಮಿಷ ಸಾಕು. ಅಲ್ಲದೆ, ಕಾರಿನ ಹೈಡ್ರೋಜನ್ ಟ್ಯಾಂಕ್ ತುಂಬುವುದು ಸಹ ಸುಲಭವಾಗಿದೆ ಮತ್ತು ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚವಾಗುತ್ತದೆ. ಇದರ ಇಂಜಿನ್ ವಿದ್ಯುಚ್ಛಕ್ತಿಯಿಂದ ಚಾಲಿತವಾಗಿದ್ದು, ವಾತಾವರಣಕ್ಕೆ ಬಿಡುಗಡೆಯಾಗುವ ಇದರ ನೀರಿನ ಆವಿಯು ಹಾನಿಕಾರಕವಲ್ಲ. ಅಲ್ಲದೆ, ಮಾಲಿನ್ಯಕಾರಕ ಹೊರಸೂಸುವಿಕೆಯ ಇರುವುದಿಲ್ಲ.

    ಹೈಡ್ರೋಜನ್ ಭೂಮಿಯಲ್ಲಿ ಅತ್ಯಂತ ಸುಲಭವಾಗಿ ಲಭ್ಯವಿರುವ ಅಂಶವಾಗಿದೆ. ಇದನ್ನು ಹೊರತೆಗೆಯಬಹುದು ಮತ್ತು ಇದು ಶಕ್ತಿಯ ಪರಿಪೂರ್ಣ ಮೂಲವಾಗಿದ್ದು, ಇದು ಭವಿಷ್ಯದಲ್ಲಿ ಶೂನ್ಯ-ಇಂಗಾಲದ ಪರಿಕಲ್ಪನೆಗೆ ಜಗತ್ತಿಗೆ ಸಹಾಯ ಮಾಡುತ್ತದೆ. ಹೈಡ್ರೋಜನ್​ ಶಾಖ ಮತ್ತು ಶಕ್ತಿಯ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವುದರಿಂದ ಇಂಗಾಲದ ಅಂಶ ಇರುವುದಿಲ್ಲ. ಹೀಗಾಗಿ ಪರಿಸರ ಸ್ನೇಹಿ ಎಂದು ಪರಿಗಣಿಸಲಾಗಿದೆ. (ಏಜೆನ್ಸೀಸ್​)

    ಪೆಟ್ರೋಲ್ 40 ರೂ.ಗೆ ಸಿಗುತ್ತೇ ಅಂದಿದ್ರಿ: ಪತ್ರಕರ್ತನ ಪ್ರಶ್ನೆಗೆ ಬಾಬಾ ರಾಮ್​ದೇವ್​ ಉತ್ತರ ಹೀಗಿತ್ತು…

    ಕಚ್ಚಾ ಬಾದಾಮ್​ ಹಾಡಿಗೆ ಸೊಂಟ ಬಳುಕಿಸಿದ ಶಾಸಕಿ ರೋಜಾ: ವಿಡಿಯೋ ವೈರಲ್​!

    ನನ್ನ ಸಾವು ನನ್ನ ಮುಗ್ಧತೆಯನ್ನು ನಿರೂಪಿಸುತ್ತದೆ: ಆತ್ಮಹತ್ಯೆ ಮಾಡ್ಕೊಂಡ ವೈದ್ಯೆಯ ನೋವಿನ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts