More

    ಹೆಲ್ಮೆಟ್​ ಧರಿಸಿಲ್ಲ ಅಂತ ದಂಡ ವಿಧಿಸಿದ ಪೊಲೀಸರು: ಲೈನ್​ಮ್ಯಾನ್​ ಸೇಡಿನಿಂದಾಗಿ ಮಹಿಳಾ ಸಿಬ್ಬಂದಿಗೆ ಪರದಾಟ!​

    ಲಖನೌ: ಹೆಲ್ಮೆಟ್​ ಧರಿಸಿಲ್ಲ ಅಂತ ಭಾರಿ ದಂಡ ವಿಧಿಸಿದ್ದಕ್ಕೆ ಪೊಲೀಸ್​ ಠಾಣೆಯ ವಿದ್ಯುತ್​ ಸಂಪರ್ಕವನ್ನು ಕಡಿತಗೊಳಿಸುವ ಮೂಲಕ ಪೊಲೀಸರ ವಿರುದ್ಧ ಲೈನ್​ಮ್ಯಾನ್​ ಸೇಡು ತೀರಿಸಿಕೊಂಡ ವಿಚಿತ್ರ ಘಟನೆ ಉತ್ತರ ಪ್ರದೇಶದ ಶಾಮ್ಲಿ ಏರಿಯಾದಲ್ಲಿ ನಡೆದಿದೆ. ​

    ಥಾನಾ ಭವನ್​ ಪೊಲೀಸ್​ ಠಾಣೆಯಲ್ಲಿ ಈ ಘಟನೆ ನಡೆದಿದೆ. ಹಲವು ತಿಂಗಳುಗಳ ಸುಮಾರು 56 ಸಾವಿರ ರೂ. ವಿದ್ಯುತ್​ ಬಿಲ್​ ಅನ್ನು ಪೊಲೀಸ್​ ಠಾಣೆ ಬಾಕಿ ಉಳಿಸಿಕೊಂಡಿದೆ. ಪೊಲೀಸರು ಲೈನ್​ಮ್ಯಾನ್​ ಬೈಕ್​ ಹಿಡಿದು ಹೆಲ್ಮೆಟ್​ ಹಾಕಿಲ್ಲ ಅಂತ 6 ಸಾವಿರ ರೂ. ದಂಡ ವಿಧಿಸಿದರು. ಆದರೆ, ಸಾಮಾನ್ಯ ದಂಡದ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದ್ದಕ್ಕೆ ಆಕ್ರೋಶಗೊಂಡ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಲೈನ್​ಮ್ಯಾನ್​ ವಿದ್ಯುತ್​ ಸಂಪರ್ಕ ಕಡಿತಗೊಳಿಸಿ ತನ್ನ ಸೇಡು ತೀರಿಸಿಕೊಂಡಿದ್ದಾನೆ.

    ವಿದ್ಯುತ್​ ಸಂಪರ್ಕ ಕಡಿತಗೊಂಡಿರುವುದು ಗೊತ್ತಾದ ಬಳಿಕ ಠಾಣೆಯ ಮಹಿಳಾ ಸಿಬ್ಬಂದಿ ವಿದ್ಯುತ್​ ಕಂಬವೇರಿ ವಿದ್ಯುತ್​ ಸಮಸ್ಯೆ ಪರಿಹರಿಸಲು ಪರದಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕಳೆದ ಜೂನ್​ ತಿಂಗಳಲ್ಲೂ ಇದೇ ರೀತಿಯ ಘಟನೆ ಬರೇಲಿಯಲ್ಲಿ ನಡೆದಿತ್ತು. ಪೊಲೀಸರು ಭಗವಾನ್​ ಸ್ವರೂಪ್ ಎಂಬ ಲೈನ್​ಮ್ಯಾನ್​ ಒಬ್ಬರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು.

    ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದ ಲೈನ್​ಮ್ಯಾನ್​, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ಹೇಳಿದ್ದ. (ಏಜೆನ್ಸೀಸ್​)

    ವೇಗವಾಗಿ ಬಂದು 25 ಅಡಿ ಆಳಕ್ಕೆ ಬಿದ್ದ ಕಾರು: ಅಪಘಾತದ ಬೆನ್ನಲ್ಲೇ ಟಾಟಾ ಮೋಟರ್ಸ್​ಗೆ ನೆಟ್ಟಿಗರ ಬಹುಪರಾಕ್​!

    ಬಲ್ಕಿಸ್ ಬಾನು ಗ್ಯಾಂಗ್​ ರೇಪ್​ ಅಪರಾಧಿಗಳ ಬಿಡುಗಡೆ: ಗುಜರಾತ್​ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೋಟಿಸ್​

    ಬಿಜೆಪಿ ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಪ್ರಿಯಾಂಕ್ ಖರ್ಗೆ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts