ಮುಂಬೈ: ಬಾಲಿವುಡ್ ಅದ್ಭುತ ಕಲಾವಿದರಾದ ಆದಿಲ್ ಹುಸೇನ್ ಮತ್ತು ರಾಧಿಕಾ ಆಪ್ಟೆ, ಲೀನಾ ಯಾದವ್ ನಿರ್ದೇಶನದ ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದಿರುವ “ಪಾರ್ಚ್ಡ್” ಚಿತ್ರದಲ್ಲಿ ಸಹ ಕಲಾವಿದರಾಗಿ ನಟಿಸಿದ್ದಾರೆ.
ಈ ಚಿತ್ರವನ್ನು ವಿಶ್ವದಾದ್ಯಂತ ಅನೇಕ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶಿಸಲಾಯಿತು ಮತ್ತು ಎಲ್ಲರ ಗಮನವನ್ನು ಸೆಳೆಯಿತು. ಅದರಲ್ಲೂ ಆದಿಲ್ ಮತ್ತು ರಾಧಿಕಾ ನಡುವೆ ಸೆಕ್ಸ್ ದೃಶ್ಯ ಭಾರಿ ಚರ್ಚೆಗೀಡಾಯಿತು.
ಈ ಬಗ್ಗೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಆದಿಲ್ ಹುಸೇನ್ ಮುಕ್ತವಾಗಿ ಮಾತನಾಡಿದ್ದಾರೆ. ಶೂಟಿಂಗ್ ಮುನ್ನ ರಾಧಿಕಾ ಮತ್ತು ಆದಿಲ್ ನಡುವೆ ನಡೆದ ಮಾತುಕತೆ ಏನೆಂಬುದನ್ನು ಆದಿಲ್ ತಿಳಿಸಿದ್ದಾರೆ.
ಮೊದಲಿಗೆ ನಟಿ ರಾಧಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆದಿಲ್, ಇದುವರೆಗೂ ಅವರು ಭೇಟಿ ಮಾಡಿದವರಲ್ಲಿ ನಟಿ ರಾಧಿಕಾ, ಅತ್ಯಂತ ಸಮರ್ಪಿತ ಮತ್ತು ಪ್ರಾಮಾಣಿಕ ಕಲಾವಿದರಲ್ಲಿ ಒಬ್ಬರು ಎಂದಿದ್ದಾರೆ.
ರಾಧಿಕಾ ಅವರು ಸಂಪೂರ್ಣವಾಗಿ ಕಲೆಗೆ ಬದ್ಧರಾಗಿದ್ದಾರೆ ಮತ್ತು ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು. ರಾಧಿಕಾ ಮತ್ತು ನನ್ನಂತವರಿಗೆ ಮುಖ್ಯವಾದುದು ಕಲೆಯೇ ಹೊರತು, ಜನರು ಏನು ಹೇಳುತ್ತಾರೆಂಬುದಲ್ಲ ಎಂದು ಟೀಕಿಸುವ ಮಂದಿಗೆ ಆದಿಲ್ ತಿರುಗೇಟು ನೀಡಿದರು.
ಸೆಕ್ಸ್ ದೃಶ್ಯಕ್ಕೂ ಮುನ್ನ ಆಕೆಯ ಬಾಯ್ಫ್ರೆಂಡ್ ಬಗ್ಗೆ ನಾನು ಪ್ರಶ್ನಿಸಿದೆ. ಅದಕ್ಕೆ ಅವರು ಮದುವೆ ಆಗಿದೆ ಎಂದು ಉತ್ತರಿಸಿದರು. ಬಳಿಕ ನನ್ನ ಪತ್ನಿಯ ಬಗ್ಗೆ ಕೇಳಿದರು. ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದೆ. ನನ್ನ ಪತ್ನಿ ನನ್ನ ಕಲೆಗೆ ಗೌರವ ನೀಡುತ್ತಾಳೆಂದು ತಿಳಿಸಿದೆ ಎಂದು ಆದಿಲ್ ಸಂದರ್ಶನದಲ್ಲಿ ಹೇಳಿದರು.
ಮಾತು ಮುಂದುವರಿಸಿದ ಆದಿಲ್, ಬರ್ಬರ ಹತ್ಯೆ ಮಾಡುವಂತಹ ದೃಶ್ಯಗಳಲ್ಲೇ ಕಲಾವಿದರಾಗಿ ನಾವು ಹೇಸಿಗೆ ಪಟ್ಟುಕೊಳ್ಳುವುದಿಲ್ಲ. ಅಂತಹುದರಲ್ಲಿ ಸರಸ ಸಲ್ಲಾಪದ ದೃಶ್ಯಗಳನ್ನು ಚಿತ್ರೀಕರಿಸುವಾಗ ನಾವೇಕೆ ಹೇಸಿಗೆ ಪಟ್ಟುಕೊಳ್ಳಬೇಕೆಂದು ಪ್ರಶ್ನಿಸಿದರು. ದೂರ ಸರಿಯುವುದರ ಹಿಂದಿನ ತರ್ಕ ಏನು? ನಾವು 1.3 ಬಿಲಿಯನ್ ಜನರ ಭಾಗವಲ್ಲವೇ? ಮತ್ತು ಇದು ಕಾಮಸೂತ್ರ ಹುಟ್ಟಿದ ಭೂಮಿ ಅಲ್ಲವೇ? ಎಂದು ಆದಿಲ್ ಮರು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)
ಬಡತನದ ಪಾತ್ರಗಳನ್ನು ಕಾಜೋಲ್ ರಿಜೆಕ್ಟ್ ಮಾಡೋದ್ಯಾಕೆ?
ರಜನಿಕಾಂತ್, ವಿಕ್ರಮ್, ವಿಜಯ್ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?
ಡಿಸ್ನಿ ಹಾಟ್ಸ್ಟಾರ್ ಪ್ಲಸ್ ಒಟಿಟಿಗೆ ಕೋಟಿ ಕೋಟಿ ಮೊತ್ತಕ್ಕೆ ಮಾರಾಟವಾಯ್ತು ಹಂಗಾಮಾ 2!