More

    ಸಾವು-ಬದುಕಿನ ಮಧ್ಯೆ ನರಳಾಡ್ತಿದ್ರು ದಂಡ ಪಾವತಿಸುವವರೆಗೆ ಕಾರು ಬಿಡದ ಪೊಲೀಸರು: ಮಗು ದುರಂತ ಸಾವು

    ಜನಗಾಂವ್​: ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಪೊಲೀಸರ ಅತಿಯಾದ ಕರ್ತವ್ಯ ಶ್ರದ್ಧೆ ಮಗುವಿನ ಪ್ರಾಣ ಕಸಿದುಕೊಂಡ ಮನಕಲಕುವ ಘಟನೆ ತೆಲಂಗಾಣದ ಜನಗಾಂವ್​ ಜಿಲ್ಲೆಯಲ್ಲಿ ನಡೆದಿದೆ.

    ಅನಾರೋಗ್ಯ ಪೀಡಿತ ಮಗುವನ್ನು ಸಾಗಿಸುತ್ತಿದ್ದ ಕಾರನ್ನು ತಡೆದ ಪೊಲೀಸರು ಬಾಕಿ ದಂಡವನ್ನು ಕಟ್ಟುವಂತೆ ಮಗುವಿನ ಪಾಲಕರನ್ನು ಪಟ್ಟು ಹಿಡಿದಿದ್ದರು. ಸರ್​ ಬಾಲಕನ ಸ್ಥಿತಿ ತುಂಬಾ ಗಂಭೀರವಾಗಿದೆ. ಆಸ್ಪತ್ರೆಗೆ ಹೋಗಬೇಕು ಬಿಟ್ಟು ಬಿಡಿ ಎಂದು ಎಷ್ಟೇ ಗೋಗರೆದರು ಪೊಲೀಸರ ಮನಸ್ಸು ಮಾತ್ರ ಕರಗಲೇ ಇಲ್ಲ. ಬಾಕಿ ಉಳಿದಿದ್ದ ದಂಡದ ಮೊತ್ತವನೆಲ್ಲ ವಸೂಲಿ ಮಾಡಲು ಸುಮಾರು 45 ನಿಮಿಷಗಳ ಕಾಲ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಇತ್ತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅಸುನೀಗಿದೆ. ಮಗುವನ್ನು ಕಳೆದುಕೊಂಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸರ ಕಿರುಕುಳದಿಂದಲೇ ನನ್ನ ಮಗ ಮೃತಪಟ್ಟಿದ್ದಾನೆಂದು ಪಾಲಕರು ಆರೋಪ ಮಾಡಿದ್ದಾರೆ.

    ಜನಗಾಂವ್​ ಜಿಲ್ಲೆಯ ಮಚ್ಚಮಲ್ಲೇಶಂ ಸರಸ್ವತಿ ದಂಪತಿಯ ಮೂರು ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಜನಗಾಂವ್​ ವೈದ್ಯರು ಹೈದರಾಬಾದ್​ನ ನಿಲೋಫರ್​ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಬಳಿಕ ಮಗುವಿನ ಪಾಲಕರು ಕಾರು ಮಾಡಿಕೊಂಡು ಹೈದರಾಬಾದ್​ಗೆ ತೆರಳುತ್ತಿದ್ದರು. ಕಾರು ಭುವನೇಶ್ವರ ಜಿಲ್ಲೆಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ಯಾದ್ರಾದ್ರಿಯ ವಂಗಪಲ್ಲಿ ಎಂಬಲ್ಲಿ ಅಡ್ಡಗಟ್ಟಿ ತಡೆದಿದ್ದಾರೆ. ಕಾರಿನ ಸೀಟ್​ ಬೆಲ್ಟ್​ ಧರಿಸಿಲ್ಲದಿದ್ದರಿಂದ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ಅನೇಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಕಾರಿನ ಮೇಲಿರುವುದು ಕಂಡುಬಂದಿದೆ. ಬಳಿಕ ದಂಡ ಪಾವತಿಸುವವರೆಗೂ ನಮ್ಮನ್ನು ಬಿಡಲಿಲ್ಲ ಎಂದು ಮಗುವಿನ ಪಾಲಕರು ಆರೋಪ ಮಾಡಿದ್ದಾರೆ.

    ಮಗುವಿನ ಆರೋಗ್ಯ ತೀವ್ರ ಗಂಭೀರವಾಗಿದೆ ಎಂದು ಕೇಳಿಕೊಂಡರು ಬಿಡಲಿಲ್ಲ. ಸುಮಾರು 45 ನಿಮಿಷಗಳ ಕಾಲ ಕಾರನ್ನು ತಡೆದು ನಿಲ್ಲಿಸಿದ್ದರು. ಬಹಳ ಅಮಾನವೀಯವಾಗಿ ನಡೆದುಕೊಂಡರು. ಕೊನೆಗೆ ಆಸ್ಪತ್ರೆಗೆ ತರುವಷ್ಟರಲ್ಲಿ ನಮ್ಮ ಮಗು ಮೃತಪಟ್ಟಿತು ಎಂದು ಪಾಲಕರು ಕಣ್ಣೀರಾಕಿದ್ದಾರೆ.

    ತಪಾಸಣೆ ವೇಳೆ ಕಾರಿನಲ್ಲಿ ಅಸ್ವಸ್ಥ ಬಾಲಕನಿರುವುದನ್ನು ಮತ್ತು ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ನಮಗೆ ತಿಳಿಸಲೇ ಇಲ್ಲ ಎಂದು ಪೊಲೀಸರು ತಮ್ಮ ವಿರುದ್ಧದ ಆರೋಪವನ್ನು ಅಲ್ಲಗೆಳೆದಿದದ್ದಾರೆ. (ಏಜೆನ್ಸೀಸ್​​)

    ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆಗೆ ಎದುರಾಯ್ತು ಭಾರೀ ಸಂಕಷ್ಟ!

    ಪಾಲಕರ ವಿರೋಧದ ನಡುವೆಯೂ ಮದ್ವೆಯಾದ ಮರುಗಳಿಗೆಯೇ ನವವಿವಾಹಿತೆಗೆ ಶಾಕ್​ ಕೊಟ್ಟ ಪಾಲಕರು!

    ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts