More

    ನಾನು “ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾ ನೋಡಲ್ಲ: ಸಿದ್ದರಾಮಯ್ಯ ಕೊಟ್ಟ ಕಾರಣ ಕೇಳಿ ಅವರೆಲ್ಲ ನಗಾಡಿದರು!

    ಬೆಂಗಳೂರು: ದೇಶದೆಲ್ಲಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ”ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾವನ್ನು ಕರ್ನಾಟಕದ ಸಚಿವರು, ಶಾಸಕರು ಕೂಡ ವೀಕ್ಷಣೆ ಮಾಡಲಿದ್ದಾರೆ. ಅದಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಮಾಡಿದ್ದಾರೆ. ಈ ಬಗ್ಗೆ ಸ್ಪೀಕರ್ ಅವರು ಸದನದಲ್ಲಿ ಘೋಷಣೆ ಮಾಡಿದ್ದಾರೆ.

    ಇಂದು (ಮಾ.15 ರಂದು) ಸಂಜೆ 6.45ಕ್ಕೆ ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಸಚಿವರು, ಶಾಸಕರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನೋಡಲು ವಿಧಾನಸಭೆ ಸಚಿವಾಲಯದಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರವನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅವರು ಕಾರಣವನ್ನು ನೀಡಿದ್ದಾರೆ.

    ಸಿದ್ದರಾಮಯ್ಯ ಅವರು ವಿಧಾನಸಭೆಯಿಂದ ಹೊರಗಡೆ ಬಂದಾಗ ಅಲ್ಲಿದ್ದವರು ದಿ ಕಾಶ್ಮೀರ ಫೈಲ್ಸ್​ ಚಿತ್ರಕ್ಕೆ ನೀವು ಹೋಗುವುದಿಲ್ಲವೇ ಸರ್​ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು ನಾನು ಹೋಗುವುದಿಲ್ಲ ಎಂದರು. ಯಾಕೆ ಹೋಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಹೆಚ್ಚಾಗಿ ಸಿನಿಮಾ ನೋಡುವುದಿಲ್ಲ. ನಾನು ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಷ್ಟೋ ವರ್ಷಗಳಾಗಿವೆ. ಮೊನ್ನೆ ಪ್ರೇಮ್​ ನಿರ್ದೇಶನದ ಏಕ್​ ಲವ್​ ಯಾ ಸಿನಿಮಾವನ್ನು ಪ್ರೇಮ್​ ಮನವಿಯ ಮೇರೆಗೆ ನೋಡಿದೆ. ಆದರೆ, ಪೂರ್ತಿ ನೋಡಲಿಲ್ಲ. ಅರ್ಧಕ್ಕೆ ಎದ್ದು ಬಂದೆ ಎಂದರು. ಕೊನೆಗೆ ನನಗೆ ಹಿಂದಿ ಅರ್ಥವಾಗುವುದಿಲ್ಲ, ಅದಕ್ಕೆ ಸಿನಿಮಾ ನೋಡುವುದಿಲ್ಲ ಎಂದು ಹೇಳಿ ಹೊರಟರು. ಈ ಮಾತನ್ನು ಕೇಳಿ ಅಲ್ಲಿದ್ದವರು ನಕ್ಕರು.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಕಥೆಯನ್ನು ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆಯೇ ಸದ್ಯ ಇಡೀ ಭಾರತ ದೇಶದಲ್ಲಿ ಮಾತುಕತೆ ನಡೆಯುತ್ತಿದೆ. ಈ ಸಿನಿಮಾ ತೆರೆಗಪ್ಪಳಿಸಿದ ಎರಡೇ ದಿನಕ್ಕೆ ದೇಶಾದ್ಯಂತ ಹಲವು ದಾಖಲೆಗಳನ್ನು ಮುರಿದಿದೆ. ಹೌದು, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಸದ್ಯ ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು ಬಹುತೇಕ ಸಿನಿತಾರೆಯರು, ಸೆಲೆಬ್ರಿಟಿಗಳು, ಜನಸಾಮಾನ್ಯರು, ಸಿನಿ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆನ್ನೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರವನ್ನು ವೀಕ್ಷಸಿ ದಿಲ್ ಖುಷ್ ಆಗಿರುವ ಸಿಎಂ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ನಮ್ಮ ರಾಜ್ಯದ ಚಿತ್ರಮಂದಿರಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

    ಕೇವಲ ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಹರಿಯಾಣ, ಮಧ್ಯಪ್ರದೇಶದ ರಾಜ್ಯಗಳಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಶನಿವಾರ (ಮಾ.12 ರಂದು) ಸಂಜೆ ”ದಿ ಕಾಶ್ಮೀರ್ ಫೈಲ್ಸ್” ನೋಡಿ ಚಿತ್ರತಂಡಕ್ಕೆ ಪ್ರಧಾನಿ ಮೋದಿ ಅವರೂ ಮೆಚ್ಚುಗೆ ಸೂಚಿಸಿದ್ದರು. (ದಿಗ್ವಿಜಯ ನ್ಯೂಸ್​)

    ಬಾಲಕಿ ಪರ ಹೈಕೋರ್ಟ್ ನೀಡಿದ ತೀರ್ಪಿಗೆ ಹೆದರಿ ಮೇಲ್ಮನವಿಯಲ್ಲಿ ಅಳಲು ತೋಡಿಕೊಂಡ ಕೇರಳ ಸರ್ಕಾರ!

    ಸಿಎಂ ಬೊಮ್ಮಾಯಿ ಅವರನ್ನು ಎಂ.ಎಸ್​. ಧೋನಿಗೆ ಹೋಲಿಸಿ ಸಂಸದೆ ಸುಮಲತಾ ಕೊಟ್ಟ ಕಾರಣ ಹೀಗಿದೆ…

    ಸಕಾಲಕ್ಕೆ ಸಿಗದ ಸಿಂಧುತ್ವ, ಸರ್ಕಾರಿ ನೌಕರರು ಅತಂತ್ರ: ಜಾರಿ ನಿರ್ದೇಶನಾಲಯ ವರದಿ ಕಡ್ಡಾಯ ಸೃಷ್ಟಿಸಿದ ಗೊಂದಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts