More

    ತಾಯಿಯು ಅನಾರೋಗ್ಯದಿಂದ ನರಳುವುದನ್ನು ನೋಡಲಾಗದೇ ಮನನೊಂದು ಸಾವಿನ ಹಾದಿ ಹಿಡಿದ ಮಗಳು

    ಹೈದರಾಬಾದ್​: ತಾಯಿ ಅನಾರೋಗ್ಯದಿಂದ ನರಳುವುದನ್ನು ಸಹಿಸಲಾಗದೇ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಅಲ್ವಾಲ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

    ಪೊಲೀಸ್​ ಮೂಲಗಳ ಪ್ರಕಾರ ಅಲ್ವಾಲದ ಭೂದೇವಿ ನಗರದ ನಿವಾಸಿ ಲತಾ ಎಂಬಾಕೆ ತನ್ನ ಮಗಳು ರೇವತಿ (28) ಎಂಬಾಕೆಯನ್ನು ಮಲ್ಕಜ್​ಗಿರಿ ಮೂಲದ ಕಿರಣ್​ ಎಂಬಾತನ ಜತೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ರೇವತಿ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹಿನ್ನೆಲೆಯಲ್ಲಿ ಇದೇ ತಿಂಗಳ 16ರಂದು ತವರಿಗೆ ಬಂದಿದ್ದಳು.

    ಈ ವೇಳೆ ತಾಯಿಯು ಅನಾರೋಗ್ಯದಿಂದ ಬಳಲುತ್ತಿರುವುದನ್ನು ನೋಡಿದ ರೇವತಿ, ತಕ್ಷಣ ಅಳುತ್ತಾ ಕೊಠಡಿ ಒಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಳು. ತುಂಬಾ ಹೊತ್ತಿನವರೆಗೂ ರೇವತಿ ಮರಳಿ ಬಾರದಿದ್ದನ್ನು ನೋಡಿದ ಕುಟುಂಬಸ್ಥರು ಬಾಗಿಲು ಮುರಿದು ನೋಡಿದಾಗ ಆಕೆ ನೇಣು ಬಿಗಿದುಕೊಂಡು ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

    ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬಸ್ಥರ ಹೇಳಿಕೆ ಪಡೆದಿದ್ದು ತನಿಖೆ ಆರಂಭಿಸಿದ್ದಾರೆ. ಮದುವೆಯಾದ ಆರೇ ತಿಂಗಳಲ್ಲಿ ರೇವತಿ ದುರಂತ ಸಾವಿಗೀಡಾಗಿದ್ದು, ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

    ಸತಿ-ಪತಿಗಳಾದ ಮೂಕ ವಧು-ವರ! ಮೈಸೂರಲ್ಲಿ ಮೂಡಿದ ಪ್ರೇಮ, ವಿಜಯಪುರದಲ್ಲಿ ವಿವಾಹ

    ಯೂಕ್ರೇನ್​ ಬಿಕ್ಕಟ್ಟು: ವಿಶ್ವಸಂಸ್ಥೆ ಭದ್ರತಾ ಮಂಡಳಿ ತುರ್ತುಸಭೆಯಲ್ಲಿ ರಷ್ಯಾ ನಡೆ ಖಂಡಿಸಿದ ಸದಸ್ಯ ರಾಷ್ಟ್ರಗಳು

    ಮಗುವನ್ನು ದತ್ತು ಪಡೆಯಲು ಮದುವೆ ಪ್ರಮಾಣ ಅಗತ್ಯವಿಲ್ಲ ಎಂದ ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts