More

    ಈ ಒಂದು ವಿಷಯದಲ್ಲಿ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದ ತೆಲಂಗಾಣ!

    ಹೈದರಾಬಾದ್​​: ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ತೆಲಂಗಾಣ ರಾಜ್ಯವೂ ಕುಖ್ಯಾತಿ ಪಾತ್ರವಾಗಿದೆ. ಮದ್ಯಪಾನ ಮತ್ತು ವೇಗದ ಚಾಲನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದಾಗಿ ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತಿವೆ. ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡರು ಕೂಡ ಅಪಘಾತಗಳ ಸಂಖ್ಯೆ ಇಳಿಯುತ್ತಿಲ್ಲ. 2021ರಲ್ಲಿ ತೆಲಂಗಾಣದಾದ್ಯಂತ 6690 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

    ಅಪಘಾತದ ಪ್ರಕರಣದಲ್ಲಿ ತೆಲಂಗಾಣ ಚೀನಾ, ಜಪಾನ್​ ಮತ್ತು ಜರ್ಮನಿಯನ್ನು ಮೀರಿಸಿದೆ ಎಂದು ಸುಪ್ರಿಂಕೋರ್ಟ್​ ಮಾಜಿ ನ್ಯಾಯಮೂರ್ತಿ ಹಾಗೂ ರಸ್ತ ಸುರಕ್ಷತಾ ಸಮಿತಿಯ ಮುಖ್ಯಸ್ಥರಾದ ಅಭಯ್​ ಮನೋಹರ್​ ಸಪ್ರೆ ಅವರು ಹೇಳಿದ್ದಾರೆ.

    ಶನಿವಾರ ಶಮ್ಶಬಾದ್​ನ ಹೋಟೆಲ್​ನಲ್ಲಿ ನಡೆದ ರಸ್ತೆ ಅಪಘಾತಗಳು ಮತ್ತು ಸುರಕ್ಷತಾ ಮಾನದಂಡಗಳ ಪರಿಶೀಲನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮನೋಹರ್​ ಸಪ್ರೆ ಅವರು ಮಾತನಾಡಿದರು.

    ಶೇ. 91ರಷ್ಟು ಅಪಘಾತಗಳು ವೇಗದ ಚಾಲನೆಯಿಂದಲೇ ಸಂಭವಿಸುತ್ತಿವೆ. ಹೀಗಾಗಿ ವಾಹನ ಸವಾರರು ಶೇ. 100ರಷ್ಟು ಹೆಲ್ಮೆಟ್​ ಮತ್ತು ಸೀಟ್​ ಬೆಲ್ಟನ್ನು ಧರಿಸಬೇಕು. ಅಲ್ಲದೆ, ಸರ್ಕಾರ ಅಪಘಾತದ ಕೇಂದ್ರಗಳನ್ನು ಪತ್ತೆ ಹಚ್ಚಿ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸಬೇಕು. ಅಪಘಾತಗಳನ್ನು ತಡೆಯಲು ಉತ್ತಮ ಮಾನದಂಡಗಳನ್ನು ರಚಿಸಬೇಕಿದೆ ಎಂದು ಮನೋಹರ್​ ಸಪ್ರೆ ಹೇಳಿದರು. (ಏಜೆನ್ಸೀಸ್​)

    ವೈಯಕ್ತಿಕ ದ್ವೇಷಕ್ಕಾಗಿ ಕೀಳುಮಟ್ಟಕ್ಕಿಳಿದ ಎಸ್​ಐ: ಅಪ್ರಾಪ್ತ ಮಗಳ ದುರ್ಬಳಕೆ, ತನಿಖೆಯಲ್ಲಿ ಕಟ್ಟುಕತೆ ಬಯಲು

    ಗಂಡ ಬೇಡ ಎಂದಾಕೆಯನ್ನು 5 ತಿಂಗಳು ಅಕ್ರಮವಾಗಿ ಕೂಡಿಟ್ಟ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಎದುರಾಯ್ತು ಸಂಕಷ್ಟ!

    ಮಹಿಳಾ ಪೊಲೀಸ್​ ಬೆನ್ನಿಗೆ ನಿಂತ ಸರ್ಕಾರದ ವಿರುದ್ಧವೇ ಗೆದ್ದು ಬೀಗಿದ 8ರ ಬಾಲೆಯ ಈ ಕೆಲ್ಸ ನಿಜಕ್ಕೂ ಶ್ಲಾಘನೀಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts