More

    ಮತದಾನ ನಡೆದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಕಾಂಗ್ರೆಸ್​ ಅಭ್ಯರ್ಥಿ ಕರೊನಾಗೆ ಬಲಿ..!

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್​ ಅಭ್ಯರ್ಥಿ ಮತದಾನ ನಡೆದ ಕೆಲವೇ ದಿನಗಳಲ್ಲಿ ಮಹಾಮಾರಿ ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ. 234 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.

    ಮೃತರನ್ನು ಪಿಎಸ್​ಡಬ್ಲ್ಯು ಮಾಧವ ರಾವ್​ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಕರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಅಸುನೀಗಿದ್ದಾರೆ. ವಿರುಧನಗರ ಜಿಲ್ಲೆಯ ಶ್ರಿವಿಲ್ಲಿಪುಥೂರ್​ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಮತದಾನದ ಬೆನ್ನಲ್ಲೇ ಮೃತಪಟ್ಟಿದ್ದು, ಒಂದು ವೇಳೆ ಮಾಧವ ರಾವ್​ ಗೆದ್ದರೆ ಮರು ಚುನಾವಣೆ ನಡೆಯಲಿದೆ.

    ಇದನ್ನೂ ಓದಿರಿ: ರೇವ್ ಪಾರ್ಟಿ ಮೇಲೆ ದಾಳಿ: ನೂರಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು!

    ಮಾಧವ ರಾವ್ ನಿಧನದ ಬೆನ್ನಲ್ಲೇ ಟ್ವೀಟ್​ ಮಾಡಿರುವ ತಮಿಳುನಾಡು ಮತ್ತು ಪುದುಚೇರಿ ಎಐಸಿಸಿ ಕಾರ್ಯದರ್ಶಿ,​ ತಮಿಳುನಾಡಿದ ಕಾಂಗ್ರೆಸ್​ ನಾಯಕ ಮತ್ತು ಶ್ರಿವಿಲ್ಲಿಪುಥೂರ್​ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಾಧವ್​ ರಾವ್ ಕರೊನಾದಿಂದ​ ನಿಧನರಾದರು ಎಂಬ ಸುದ್ದಿ ಕೇಳಿ ತೀವ್ರ ದುಃಖವಾಯಿತು,. ದುಃಖ ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲು. ಇಂತಹ ದುಃಖದ ಸಮಯದಲ್ಲಿ ನಮ್ಮ ಪಕ್ಷ ಅವರ ಪರವಾಗಿ ನಿಲ್ಲಲಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

    ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಮತದಾನ ನಡೆದಿದ್ದು, ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಮೊದಲ ರಾತ್ರಿ ರಕ್ತ ಕಾಣಿಸಿಲ್ಲ ಎಂದು ಡಿವೋರ್ಸ್​ ನೀಡಿದ ಪತಿ ಮಹಾಶಯ ₹10 ಲಕ್ಷ ಬೇಡಿಕೆ ಇಟ್ಟ!

    ಸೋಲಿನ ಬೆನ್ನಲ್ಲೇ ಸಿಎಸ್​ಕೆ ತಂಡಕ್ಕೆ ಮತ್ತೊಂದು ಶಾಕ್​: ನಾಯಕ ಧೋನಿಗೆ 12 ಲಕ್ಷ ರೂ. ದಂಡ

    ರಾತ್ರಿ ಊಟ ಮಾಡ್ಕೊಂಡು ಮಲಗಿದ ಮೂವರು ಸಹೋದರಿಯರು ಬೆಳಗಾಗುವಷ್ಟರಲ್ಲಿ ನಾಪತ್ತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts