More

    ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು

    ಕಾಬುಲ್​: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಪ್ರತಿನಿತ್ಯ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದಾರೆ. ಆಫ್ಘಾನ್​ನ ಮಹಿಳಾ ಪೊಲೀಸ್​ ಅಧಿಕಾರಿಯನ್ನು ಆಕೆಯ ಮಕ್ಕಳ ಮುಂದೆಯೇ ಗುಂಡಿಟ್ಟು ಕೊಂದು ಮುಖವನ್ನು ವಿರೂಪಗೊಳಿಸಿ ವಿಕೃತಿ ಮೆರೆದಿದ್ದಾರೆಂದು ವರದಿಯಾಗಿದೆ.

    ಆಫ್ಘಾನ್​ನ ಘೋರ್​ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್​ನಲ್ಲಿ ಘನ ಘೋರ ಕೃತ್ಯ ನಡೆದಿದೆ. ಮಹಿಳಾ ಅಧಿಕಾರಿಯನ್ನು ಬಾನು ನೆಗರ್​ ಎಂದು ಗುರುತಿಸಲಾಗಿದೆ. ತಾಲಿಬಾನಿಗಳ ಹಲ್ಲೆಯಿಂದ ಆಕೆಯ ಮುಖ ತುಂಬಾ ವಿರೂಪಗೊಂಡಿದೆ. ಸ್ಥಳೀಯ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ನೆಗರ್​ 8 ತಿಂಗಳ ಗರ್ಭಿಣಿಯಾಗಿದ್ದರು ಎಂದು ತಿಳಿದುಬಂದಿದೆ.

    ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್​ ಅಧಿಕಾರಿ ನೆಗರ್​ನನ್ನು ಅವರ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ. ಅಲ್ಲಿನ ಸ್ಥಳೀಯ ತಾಲಿಬಾನ್ ಈ ಘಟನೆಯನ್ನು “ತನಿಖೆ ನಡೆಸುವ ಭರವಸೆ ನೀಡಿದೆ” ಎಂದು ಕುಟುಂಬ ಹೇಳಿದೆ.

    ಅಫ್ಘಾನಿಸ್ತಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ತಾಲಿಬಾನ್‌ಗಳು ತಮ್ಮನ್ನು ತಾವು ತಿಳಿದಿರುವುದಕ್ಕಿಂತ ಹೆಚ್ಚು ಸಹಿಷ್ಣು ಮತ್ತು ಉದಾರವಾದಿಗಳೆಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದಾಗ್ಯೂ, ಕಾಬುಲ್‌ನಲ್ಲಿ ಉಗ್ರರ ಗುಂಪು ಪುನರುತ್ಥಾನಗೊಂಡ ದೇಶದಲ್ಲಿ ಕ್ರೌರ್ಯ ಮತ್ತು ದಮನದ ನೀತಿಯನ್ನು ಅನುಸರಿಸಿದ್ದು, ರಕ್ತಪಿಪಾಸುಗಳಂತೆ ತಮ್ಮ ವಿರೋಧಿಗಳ ಮಾರಣಹೋಮ ಮಾಡುತ್ತಿರುವುದಲ್ಲದೆ, ಅಮಾಯಕರನ್ನು ಬಲಿ ಕೊಡುತ್ತಿದ್ದಾರೆ. (ಏಜೆನ್ಸೀಸ್​)

    ಅಫ್ಘನ್​ನಲ್ಲಿ ಪವರ್ ಫೈಟ್; ಸರ್ಕಾರ ರಚನೆಗೆ ಕಸರತ್ತು

    ಕನ್ನಡ ಚಿತ್ರದಲ್ಲಿ ಹಿಂದಿಯ ಗೋವಿಂದ?; ಪ್ರಜ್ವಲ್ ಸಿನಿಮಾದಲ್ಲಿ ಅಭಿನಯ..

    ಮೂರೂವರೆ ಲಕ್ಷ ಪಡಿತರ ಚೀಟಿ ಅನರ್ಹ; ಆಹಾರ ಇಲಾಖೆ ಸ್ಪಷ್ಟನೆ, ಆರ್ಥಿಕ ಸಬಲರು ಯೋಜನೆಯಿಂದ ಹೊರಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts