ಅಫ್ಘನ್​ನಲ್ಲಿ ಪವರ್ ಫೈಟ್; ಸರ್ಕಾರ ರಚನೆಗೆ ಕಸರತ್ತು

ಕಾಬುಲ್: ಅಫ್ಘಾನಿಸ್ತಾನದಲ್ಲಿ ಉಗ್ರ ಸಂಘಟನೆಗಳ ನಡುವೆ ‘ಒಮ್ಮತ’ ಮೂಡದ ಕಾರಣ ಎಲ್ಲರಿಗೂ ‘ಸಮ್ಮತ’ವಾಗುವ ಸರ್ಕಾರ ರಚನೆಗೆ ಈಗ ಕಸರತ್ತು ನಡೆಯುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಮತ ಏರ್ಪಟ್ಟ ಕಾರಣ, ಸಭೆಯಲ್ಲೇ ಗುಂಡಿನ ಚಕಮಕಿ ನಡೆದಿದೆ. ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ಲ ಘನಿ ಬರದಾರ್ ಗಾಯಾಳುವಾಗಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಪಾಕ್ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಹಕ್ಕಾನಿ ನೆಟ್​ವರ್ಕ್ ಕಾಬುಲನ್ನು ಹಿಡಿತದಲ್ಲಿರಿಸಿಕೊಂಡಿದೆ. ಇಲ್ಲಿ ಏನಿದ್ದರೂ ಕಟ್ಟಾ ಸಂಪ್ರದಾಯವಾದಿ ಸುನ್ನಿ ಪಶ್ತೂನ್ ಸರ್ಕಾರವೇ ರಚನೆಯಾಗಬೇಕು ಎಂಬುದು ಹಕ್ಕಾನಿ … Continue reading ಅಫ್ಘನ್​ನಲ್ಲಿ ಪವರ್ ಫೈಟ್; ಸರ್ಕಾರ ರಚನೆಗೆ ಕಸರತ್ತು