More

    ದಿನಕ್ಕೆ 12 ಸ್ಯಾನಿಟರಿ ಪ್ಯಾಡ್​ ಬಳಸ್ತಿದ್ದೆ! ನೋವಿನಿಂದಲೇ ಸಾವಿನ ಕದ ತಟ್ಟಿದವಳ ಕರುಣಾಜನಕ ಕತೆಯಿದು

    ತಿರುವನಂತಪುರಂ: ಕೇರಳದ ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಅನನ್ಯ ಕುಮಾರಿ ಅಲೆಕ್ಸ್ ಅವರು ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನನ್ಯ ಅವರು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಅನಾರೋಗ್ಯದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ. ಇದರ ನಡುವೆ ಹಿಂದೊಮ್ಮೆ ಅನನ್ಯ ಮಾಧ್ಯಮಗಳ ಮುಂದೆ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದ ನೋವಿನ ವಿಡಿಯೋ ಮುನ್ನೆಲೆಗೆ ಬಂದಿದೆ.

    ಪ್ರತಿದಿನ 8 ರಿಂದ 12 ಸ್ಯಾನಿಟರಿ ಪ್ಯಾಡ್​ ಬದಲಾವಣೆ ಮಾಡುತ್ತಿದ್ದೆ. ಅಲ್ಲದೆ, ದಿನವೊಂದಕ್ಕೆ 4 ರಿಂದ 5 ಬಾರಿ ಕರುಳಿನ ಚಲನೆಯಾಗುತ್ತಿತ್ತು. ನನ್ನ ಹೊಟ್ಟೆ ತುಂಬೆಲ್ಲ ಗಾಯಗಳಾಗಿವೆ. ಗುಪ್ತಾಂಗವನ್ನು ಮಾಂಸದಂತೆ ಕತ್ತರಿಸಲಾಗಿದೆ ಎಂದು ಅನನ್ಯ ಅವರು ಕಳೆದ ವರ್ಷ್​ ಜೂನ್​ ತಿಂಗಳಲ್ಲಿ ಆರು ಬಾರಿ ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದ ನೋವಿನ ಮಾತುಗಳಿವು.

    ಕೊಚ್ಚಿಯಲ್ಲಿರುವ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನನ್ಯ ಅವರ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಕಳೆದ ಒಂದು ವರ್ಷದಿಂದ ಅನನ್ಯ ಕುಮಾರಿ ಅವರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತನ್ನ ಅನಾರೋಗ್ಯದ ಕುರಿತು ತನ್ನ ಫ್ರೆಂಡ್ಸ್​ ಬಳಿ ಅನನ್ಯ ಹಿಂದೊಮ್ಮೆ ಹೇಳಿಕೊಂಡಿದ್ದರು.

    ಅನನ್ಯ ಅವರಿಗೆ ಡಾ. ಅರ್ಜುನ್​ ಅಶೋಕನ್​ ಎಂಬುವರು ಸರ್ಜರಿ ಮಾಡಿದರಂತೆ. ಅರ್ಜುನ್​ ಅವರು ರೆನಾಯಿ ಮೆಡಿಸಿಟಿ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್​ ಸರ್ಜನ್​ ಆಗಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಅವರ ಪತ್ನಿ ಡಾ. ಸುಜಾ ಸುಕುಮಾರ್​ ಅಂತಃಸ್ರಾವಶಾಸ್ತ್ರಜ್ಞರಾಗಿದ್ದಾರೆ. ಹಾರ್ಮೋನ್​ ಚಿಕಿತ್ಸೆ ಮತ್ತು ಹಾರ್ಮೋನ್​ ಥೆರಪಿಗೆ ಸುಜಾ ಅವರೇ ಉಸ್ತುವಾರಿ ಆಗಿದ್ದರು. 2020ರ ಜೂನ್​ 14ರಂದು ಸರ್ಜರಿ ಆಯಿತು. ನನ್ನ ಮೇಲೆ ನಡೆದ ಚಿಕಿತ್ಸೆಯನ್ನು ಕೊಲನ್​ ವೆಜಿನೋಪ್ಲಾಸ್ಟಿ ಎಂದು ಕರೆಯಲಾಗುತ್ತದೆ. ಕೊಲೊನ್ ವಿಭಾಗವನ್ನು ಬೇರ್ಪಡಿಸಿ ಯೋನಿಯಾಗಿ ಮಾರ್ಪಡಿಸುವುದೇ ಈ ಚಿಕಿತ್ಸೆಯ ಪ್ರಕ್ರಿಯೆಯಾಗಿತ್ತು ಎಂದು ಅನನ್ಯ ಹೇಳಿಕೊಂಡಿದ್ದರು.

    ಸರ್ಜರಿ ನಡೆದ ಆರು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದೆ. ನನ್ನ ಅಂದಾಜಿಗಿಂತ ಹೆಚ್ಚಿನ ಬಿಲ್​ ಆಗಿತ್ತು. ಸುಮಾರು 2.55 ಲಕ್ಷ ರೂ. ಬಿಲ್​ ಆಗಿತ್ತು. ಡಿಸ್ಚಾರ್ಜ್​ ಆದ ನಂತರವೇ ವಾಕರಿಕೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಶುರುವಾದವು. ಮನೆಗೆ ಹೋದ ನಾಲ್ಕ ಗಂಟೆಯ ಬೆನ್ನಲ್ಲೇ ನಾನು ತೀವ್ರ ಅನಾರೋಗ್ಯಕ್ಕೀಡಾದೆ. ಅದೇ ದಿನ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾದೆ. ಜುಲೈ 2 ರಂದು ಡಿಸ್ಚಾರ್ಜ್​ ಮತ್ತೆ ಆದೆ. ಟ್ಯೂಬ್​ ಅಳವಡಿಸಿದ್ದರಿಂದ ಆಸ್ಪತ್ರೆಯ ದಿನಗಳಲ್ಲಿ ಕುಡಿಯಲು, ತಿನ್ನಲು ಆಗುತ್ತಿರಲಿಲ್ಲ. ಸರ್ಜರಿಯಲ್ಲಾಗಿರುವ ಎಡವಟ್ಟಿನಿಂದಾಗಿ ಕೊಲನ್​ ಒಳಗಡೆ ಆರು ಭಾಗದಲ್ಲಿ ಗ್ಯಾಸ್​ ಟ್ರಬಲ್​ ಸೃಷ್ಟಿಯಾಗಿರುವುದು ಸ್ಕ್ಯಾನಿಂಗ್​ ವರದಿಯಲ್ಲಿ ಖಚಿತವಾಯಿತು. ನನ್ನ ಅನುಮತಿಯನ್ನು ಪಡೆಯದೇ ಅವರು ಮತ್ತೊಂದು ಸರ್ಜರಿಯನ್ನು ನಡೆಸಿದರು ಎಂದು ಅನನ್ಯ ಆರೋಪಿಸಿದ್ದರು.

    ಜುಲೈ 3ರಂದು ನಾನು ಮನೆಗೆ ಮರಳಿದೆ. ತಿಂಗಳು ಅಥವಾ ವರ್ಷವಲ್ಲ ಈಗಲೂ ಯೋನಿ ದೇಹದ ಚೂರು ಚೂರು ಭಾಗ ಎಂದೆನಿಸುತ್ತದೆ. ಯೋನಿಯು ಕುರುಪಗೊಂಡಿದ್ದ ಸಾಮಾನ್ಯವಂತೆ ಕಾಣುತ್ತಿರಲಿಲ್ಲ. ಲಿಂಗ ಪುನರ್ವಿತರಣೆ ಶಸ್ತ್ರಚಿಕಿತ್ಸೆ ವೇಳೆ ಸರಿಯಾದ ಯೋನಿ ರಚನೆ ಸಾಧ್ಯವಿತ್ತು. ವೈದ್ಯ ಅರ್ಜುನ್ ಅವರು ಪರಿಣಿತರು ಎಂದು ಹೇಳಿದ ಬಳಿಕವಷ್ಟೇ ನಾನು ಸರ್ಜರಿಗೆ ಒಳಗಾಗಲು ನಿರ್ಧಾರ ಮಾಡಿದೆ. ಸರ್ಜರಿಯಾದ ಬಳಿಕ ಸಮಸ್ಯೆಗಳು ಹೆಚ್ಚಾದವು. ದಿನಕ್ಕೆ 8 ರಿಂದ 12 ಪ್ಯಾಡ್​ಗಳು ಬೇಕಾಗಿತ್ತು. ಸರಿಯಾಗಿ ಮೂತ್ರ ವಿಸರ್ಜನೆ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಬ್ಲ್ಯಾಡರ್​ ನಿಯಂತ್ರಣ ಕಳಪೆಯಾಗಿತ್ತು. ವೈದ್ಯರನ್ನೂ ಸಂಪರ್ಕಿಸಿದೆ. ಆದರೆ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ವಿಭಾಗ ಸರಿಯಾಗಿ ಸ್ಪಂದಿಸಲಿಲ್ಲ ಎಂದಿದ್ದರು.

    ಒಂದು ದಿನ ತೀವ್ರ ಅನಾರೋಗ್ಯಕ್ಕೀಡಾದೆ. ಈ ವೇಳೆ ಮತ್ತೆ ಆಸ್ಪತ್ರೆಗೆ ಹೋದೆ. ಈ ವೇಳೆ ಆಸ್ಪತ್ರೆಯ ಬಿಲ್​ನಲ್ಲಿ ಪ್ರಮುಖ ಅಕ್ರಮಗಳು ನಡೆದಿರುವುದನ್ನು ಕಂಡುಕೊಂಡೆ. ಈ ಸಂಬಂಧ ಪೊಲೀಸರಿಗೆ ದೂರು ಸಹ ನೀಡಿದೆ. ಇದೇ ವೇಳೆ ಓರ್ವ ತೃತೀಯಲಿಂಗಿ ಸ್ತನ ತೆಯುವಿಕೆ ಚಿಕಿತ್ಸೆಗೆ ಒಳಗಾಗಿದ್ದರು. ಸರ್ಜರಿಯ ನಂತರ ಅವರ ಎದೆಯು ವಿಕಾರವಾಗಿ ಗಾಯಗಳಿಂದ ಕೂಡಿತ್ತು. ಶೇ. 98ರಷ್ಟು ಮಂದಿ ಆಸ್ಪತ್ರೆಯಲ್ಲಿ ಸರ್ಜರಿಯ ನಂತರ ಸಮಸ್ಯೆಯನ್ನು ಎದುರಿಸಿದ್ದಾರೆಂದು ಅನನ್ಯ ಆರೋಪಿಸಿದ್ದರು.

    ನನ್ನ ಯೋನಿ ಕತ್ತರಿಸಿದ ಮಾಂಸದಂತಾಗಿತ್ತು. ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೆ. ಮತ್ತೊಮ್ಮೆ ಮರು ಸರ್ಜರಿ ಮಾಡುವುದಾಗಿ ಹೇಳಿದರು. ಆದರೆ, ಇನ್ನೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಾನು ಹೇಗೆ ತಾನೇ ಧೈರ್ಯ ಮಾಡಬೇಕು ನೀವೇ ಹೇಳಿ? ನನಗೆ ತುಂಬಾ ಕರುಳು ಬೇನೆ ಮತ್ತು ದೇಹದ ಎಲ್ಲ ಭಾಗಗಳಲ್ಲೂ ಗಾಯಗಳಿವೆ ಎಂದು ಅನನ್ಯ ನೋವು ತೋಡಿಕೊಂಡಿದ್ದರು. ಅಲ್ಲದೆ, ಕೇರಳದಂತಹ ಸಾಕ್ಷರತಾ ರಾಜ್ಯದಲ್ಲೇ ಇದು ನಡೆದಿದ್ದು ತುಂಬಾ ದುರದೃಷ್ಟಕರ ಎಂದು ಅನನ್ಯ ಬೇಸರ ವ್ಯಕ್ತಪಡಿಸಿದ್ದರು.

    ಆರೋಪ ಅಲ್ಲಗೆಳೆದಿರುವ ಆಸ್ಪತ್ರೆ
    ಅನನ್ಯ ಮೆಡಿಕಲ್​ ಸರ್ಜರಿಯಲ್ಲಿ ಎಡವಟ್ಟಾಗಿದೆ ಎಂಬುದನ್ನು ರೆನಾಯಿ ಮೆಡಿಸಿಟಿ ಆಸ್ಪತ್ರೆಯ ಆಡಳಿತ ಮಂಡಳಿ ತಳ್ಳಿಹಾಕಿದೆ. ಆಪ್ತ ಸಮಾಲೋಚನೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಅನನ್ಯ ಸರ್ಜರಿಯಲ್ಲಿ ಪಾಲಿಸಿದ್ದೇವೆಂದು ಪತ್ರಿಕಾ ಪ್ರಕಟಣೆಯಲ್ಲಿ ಸಮಜಾಯಿಷಿ ನೀಡಿದೆ. (ಏಜೆನ್ಸೀಸ್​)

    ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಆತ್ಮಹತ್ಯೆ: ಈ ನಿರ್ಧಾರವೇ ಮುಳುವಾಯ್ತಾ?

    ರಾಜ್​ ಕುಂದ್ರಾ ಕೇಸ್​: ಪೋರ್ನ್​ ವಿಡಿಯೋ ತಯಾರಿ-ವೀಕ್ಷಣೆ ಬಗ್ಗೆ ಭಾರತ-ಯುಕೆ ಕಾನೂನು ಏನು ಹೇಳುತ್ತೆ?

    ಎಟಿಎಂನಿಂದ ಹಣ ವಿತ್‌ಡ್ರಾ: ಆಗಸ್ಟ್‌1 ರಿಂದ ಬದಲಾಗಲಿದೆ ನಿಯಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts