More

    ಮುಸ್ಕಾನ್ ತನಿಖೆ ತಪ್ಪಲ್ಲ: ಉರಿವ ಬೆಂಕಿಗೆ ತುಪ್ಪ ಸುರಿವ ಕೆಲಸ ಆಗಬಾರದೆಂದ ಸಂಸದೆ ಸುಮಲತಾ

    ಬೆಂಗಳೂರು: ಮಂಡ್ಯದ ಮುಸ್ಕಾನ್​ಳ ತನಿಖೆ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್​ ಹೇಳಿದರು.

    ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಿಖೆ ಆಗಿ ನಿಜ ಹೊರಗೆ ಬರಬೇಕು. ಮಂಡ್ಯ ಹಾಗೂ ರಾಜ್ಯದಲ್ಲಿ ವಾತಾವರಣ ಶಾಂತಿಯುತವಾಗಿದೆ. ರಾಜಕೀಯವಾಗಿ ಮಾತಾಡಿ ವಾತಾವರಣ ಕೆಡೆಸುವ ಕೆಲಸ ಮಾಡಬಾರದು ಎಂದರು.

    ಈ ಸಂದರ್ಭದಲ್ಲಿ ಎಲ್ಲ ಸಮಾಜಗಳು ಒಂದಾಗಿ ಈ ಸಮಸ್ಯೆ ಬಗೆಹರಿಸಬೇಕು. ಉರಿಯೋ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಯಾರೋ ಹೇಳಿಕೆಯಿಂದ ಬಲಿಪಶು ಆಗೋದು ಬಡವರು. ಈ ರೀತಿ ಯಾರು ಕೂಡ ಮಾಡಬಾರದು ಎಂದು ಪ್ರತಿಕ್ರಿಸಿದರು.

    ಬಿಜೆಪಿ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಚುನಾವಣೆಗೆ ಸ್ಪರ್ಧಿಸಿದಾಗಿನಿಂದ ಈ ಮಾತು ಕೇಳಿಬರ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ ಇದೆ. ಜಿಲ್ಲೆಯ ಜನ ಹೇಗೆ ಹೇಳ್ತಾರೆ ಹಾಗೆ ನಡೆದುಕೊಳ್ಳುತ್ತೇನೆ. ಒಂದು ಪಕ್ಷ ಸೇರೋದಿಕ್ಕೆ ಮಂಡ್ಯದ ಜನ ಹೇಳ್ಬೇಕೇ ಹೊರತು ನಾನಾಗಿ ನಾನು ನಿರ್ಧಾರ ತಗೊಳ್ಳಕ್ಕಾಗಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ. ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಸಿ ಅಂತಿದ್ದಾರೆ ಜನ. ಆದರೆ, ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್​ಗೆ ಬಿಟ್ಟಿದ್ದು ಎಂದು ಹೇಳಿದರು.

    ಸುಮಲತಾ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸುಮಲತಾ ಅವರು ತಮ್ಮ ತಂಗಿಯ ಮಗಳ ವಿವಾಹ ಆಮಂತ್ರಣ ಕೊಡಲು ಬಂದಿದ್ದರು ಎಂದು ಹೇಳಿದರು.

    ಜೀವನದ ಬಹುದೊಡ್ಡ ಕನಸು ನನಸಾದ ಬೆನ್ನಲ್ಲೇ ಸಿನಿಮಾ, ಟಿವಿ ಶೋಗಳಿಗೆ ಗುಡ್​ಬೈ ಹೇಳಿದ ನಟಿ ರೋಜಾ!

    ಹೇಗಿದೆ ಕೆಜಿಎಫ್​ ಚಾಪ್ಟರ್​ 2? ಸಿನಿಮಾದ ಮೊದಲ ವಿಮರ್ಶೆ ಓದಿದ್ರೆ ನೀವು ಥ್ರಿಲ್​ ಆಗೋದು ಖಂಡಿತ!

    16ರ ಹುಡುಗಿಗೆ ಅರಿವಿತ್ತು, ಆರೋಪಿಯು ಕಾಂಡೋಮ್​ ಬಳಸಿದ್ದ ಎಂದು ಬಾಂಬೈ ಹೈಕೋರ್ಟ್​ನಿಂದ ಜಾಮೀನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts