More

    ಸಬ್ ರಿಜಿಸ್ಟ್ರಾರ್ ಸರ್ವರ್ ಡೌನ್: ಒಂದು ವಾರದಿಂದ ದಿನನಿತ್ಯದ ಕೆಲಸಕ್ಕೆ ತೊಂದರೆ, ನಿಖರ ಕಾರಣ ತಿಳಿದಿಲ್ಲ

    ಬೆಂಗಳೂರು: ರಾಜ್ಯದ ಉಪ ನೋಂದಣಿ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಬಗೆಹರಿಸುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಒಂದು ವಾರದಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಉಂಟಾಗಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸರ್ಕಾರದ ಬೊಕ್ಕಸ ತುಂಬಿಸುವ ಪ್ರಮುಖ ಮೂಲವಾದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಅಂತ್ಯ ಇಲ್ಲದಂತಾಗಿದೆ. ಕಳೆದ ಒಂದು ವಾರದಿಂದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಇಲ್ಲದೆ, ದಾಖಲೆ ನೋಂದಣಿ, ದೃಢೀಕರಣ ಪತ್ರ, ಇಸಿ ಇನ್ನಿತ್ತರ ಸೇವೆಗಳಿಗೆ ತೊಂದರೆ ಉಂಟಾಗುತ್ತಿದೆ.

    ಆಷಾಢ ಮಾಸ ಬರಲಿದೆ ಎಂಬ ಕಾರಣಕ್ಕೆ ತಿಂಗಳ 3ನೇ ವಾರದಲ್ಲಿ ಹೆಚ್ಚು ಜನರು ಕ್ರಯ, ಒಪ್ಪಂದ ಇನ್ನಿತ್ತರ ನೋಂದಣಿ ಪ್ರಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಸರ್ವರ್ ಸಮಸ್ಯೆ ಇಂದಾಗಿ ನಿಗದಿ ಸಮಯದಲ್ಲಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೆ ತೊಂದರೆಗೆ ಸಿಲುಕಿದರು.

    ಇದಲ್ಲದೆ, ಇಸಿ ಮತ್ತು ದೃಢೀಕರಣ ಪ್ರಮಾಣ ಪತ್ರ ಸಿಗದೆ ಗೃಹ ಸಾಲ, ಕೃಷಿ ಸಾಲ ಪಡೆಯುವಲ್ಲಿ ವಿಳಂಬವಾಗಿ ರೈತರು, ಉದ್ಯೋಗಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿದಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದು ದಿನವೀಡಿ ಕಾದು ಕಾಗದ ಪತ್ರಗಳು ಸಿಗದೆ ಸಾರ್ವಜನಿಕರು ಸಂಜೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ ಮನೆ ಕಡೆ ಮುಖ ಮಾಡುತ್ತಿದ್ದಾರೆ.

    ಈ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಿರಿಯ ಅಧಿಕಾರಿಗಳು ಸಂಪರ್ಕ ಮಾಡಿದಾಗ ‘ಕಳೆದ 1 ವಾರದಿಂದ ಸರ್ವರ್ ಸಮಸ್ಯೆ ಇರುವುದು ನಿಜ. ಸರಿಪಡಿಸಲು ನಿರಂತರವಾಗಿ ತಾಂತ್ರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆಗೆ ನಿಕರ ಕಾರಣ ಏನೆಂಬುದು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೂ ಎರಡು ದಿನಗಳ ಸಮಸ್ಯೆ ಇರಲಿದೆ’ ಎಂದು ವಿಜಯವಾಣಿಗೆ ತಿಳಿಸಿದ್ದಾರೆ.

    ಹಳೇ ಸರ್ವರ್, ಹಳೇ ಸಮಸ್ಯೆ :
    ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಳೆಯ ಸರ್ವರ್ ಸಿಸ್ಟಮ್ ಇರುವ ಕಾರಣ ಸಮಸ್ಯೆ ಬಗೆಹರಿದಿಲ್ಲ. ಸಿಸ್ಟಮ್‌ಗಳನ್ನು ಬದಲಾಯಿಸಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಸಮಸ್ಯೆ ದೂರವಾಗಲಿದೆ. ಸಾರ್ವಜನಿಕರಿಗೂ ವೇಗದಲ್ಲಿ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳ ಅಭಿಪ್ರಾಯವಾಗಿದೆ.

    ನಟಿ ಮೀನಾ ಪತಿ ವಿದ್ಯಾಸಾಗರ್ ಅಕಾಲಿಕ​ ಸಾವಿಗೆ ನಿಖರ ಕಾರಣ ತಿಳಿಸಿದ ತಮಿಳುನಾಡು ಆರೋಗ್ಯ ಸಚಿವ

    ತಿಂಡಿ ತಿನ್ನೋ ನೆಪದಲ್ಲಿ ಮಹಿಳೆಯ ಹೋಟೆಲ್​ಗೆ ಬಂದ ಕಾನ್ಸ್​ಟೇಬಲ್​ನಿಂದ ನೀಚ ಕೃತ್ಯ: ತುಮಕೂರಿನಲ್ಲಿ ಘಟನೆ​

    ಮತ್ತೆ ಬೆಲೆಯೇರಿಕೆ ಬರೆ: ತೆರಿಗೆ ಭಾರ ಹೆಚ್ಚಿಸಿದ ಜಿಎಸ್​ಟಿ; ಮಂಡಳಿ 47ನೇ ಸಭೆಯಲ್ಲಿ ನಿರ್ಧಾರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts