More

    25 ಅಥವಾ 26ರಂದು ರಾಜ್ಯಕ್ಕೆ ಹಿಂಗಾರು ಪ್ರವೇಶ? ಮುಂದಿನ 4 ದಿನ ಭಾರಿ ಮಳೆ

    ಬೆಂಗಳೂರು: ರಾಜ್ಯಕ್ಕೆ ಅ.25 ಅಥವಾ 26ರಂದು ಈಶಾನ್ಯ ಮುಂಗಾರು ಕಾಲಿಟ್ಟುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ವಿಜಯವಾಣಿಗೆ ಹೇಳಿದ್ದಾರೆ.

    ವಾಡಿಕೆಯಂತೆ ಅ.15ಕ್ಕೆ ನೈಋತ್ಯ ಮುಂಗಾರು ಮುಗಿದು ಈಶಾನ್ಯ ಮುಂಗಾರು ಆಗಮಿಸಬೇಕಿತ್ತು. ಆದರೆ, ಈ ಬಾರಿ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ತೇವಾಂಶ ಭರಿತ ಮೋಡಗಳು ಇನ್ನೂ ಇರುವುದರಿಂದ ಮುಂದಿನ ನಾಲ್ಕೈದು ದಿನಗಳು ಮುಂಗಾರು ಮಳೆ ಬೀಳಲಿದೆ. ಕಳೆದ 2 ದಿನಗಳಲ್ಲಿ ಬಿಸಿಲಿನ ವಾತಾವರಣ ಇತ್ತು. ಕೆಲ ಭಾಗಗಳಲ್ಲಿ ಮಾತ್ರ ಮಳೆಯಾಗಿತ್ತು. ಈಗಾಗಲೇ ಈಶಾನ್ಯ ಮಾರುತಗಳು ಸೃಷ್ಟಿಯಾಗುವ ಲಕ್ಷಣಗಳಿವೆ. ಹಿಂಗಾರು ಶುರುವಾದರೆ ಈಶಾನ್ಯ ದಿಕ್ಕಿನಿಂದ ಪಶ್ಚಿಮ ದಿಕ್ಕಿನತ್ತ ಗಾಳಿ ಬೀಸಲಾರಂಭಿಸಲಿದೆ ಎಂದರು.

    4 ದಿನ ಭಾರಿ ಮಳೆ: 2-3 ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಹೆಚ್ಚಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ 4 ದಿನ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ.ಗ್ರಾಮಾಂತರ. ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅ.21,22 ಮತ್ತು 24ರಂದು ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

    ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಅ.22ರಿಂದ ಅ.24ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರದಲ್ಲಿ ಅ.22, 24ರಂದು ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

    ಬೆಂಗ್ಳೂರು ನಿವಾಸಿಗಳೇ ಎಚ್ಚರ…. ರಾಜಧಾನಿಗೆ ಮತ್ತೆ ಮಳೆ ಭೀತಿ

    ಕಿರುತೆರೆ ನಟಿ ಸವಿ ಮಾದಪ್ಪ ಸಾವಿನ ಪ್ರಕರಣ: ಮರಣೋತ್ತರ ವರದಿ ಬಿಚ್ಚಿಟ್ಟ ರಹಸ್ಯವಿದು..!

    ಎಂದೂ ಮುಗಿಯದ ಕತೆಯಾಗಬಾರದು! ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts