ಬೆಂಗಳೂರು: ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತಪಟ್ಟ ಒಂದೂವರೆ ತಿಂಗಳ ಬಳಿಕ ಮೃತ ನರ್ಸ್ ಮೊಬೈಲ್ನಿಂದಾಗಿ ಸ್ಫೋಟಕ ಮಾಹಿತಿ ಬಯಲಾಗಿದೆ.
ಯುವತಿಯ ಮೊಬೈಲ್ನಲ್ಲಿ ಸಿಕ್ಕ ಹಸಿಬಿಸಿ ಪೊಟೋಗಳಿಂದ ಆಕೆಯ ಪಾಲಕರಲ್ಲಿ ಅನುಮಾನ ಮೂಡಿದ್ದು, ಮಗಳದ್ದು ಆತ್ಮಹತ್ಯೆಯಲ್ಲ, ಹತ್ಯೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯ ಮಾಡಿದ್ದು, ದೇವನಹಳ್ಳಿಯ ಖಾಸಗಿ ಆಸ್ವತ್ರೆ ಮುಂದೆ ಮೃತ ಯುವತಿಯ ಪಾಲಕರು ಕಣ್ಣೀರಿಟ್ಟಿದ್ದಾರೆ.
ಘಟನೆ ಹಿನ್ನೆಲೆ ಏನು ಅಂತಾ ನೋಡುವುದಾದರೆ, ಕಳೆದ ಆಗಸ್ಟ್ 17 ರಂದು ಶ್ವೇತಾಂಜಲಿ (23 ) ಎಂಬಾಕೆ ಆತ್ಮಹತ್ಯೆ ಪ್ರಯತ್ನ ಮಾಡಿ, 27 ರಂದು ಮೃತಪಟ್ಟಿದ್ದಳು. ಈ ವೇಳೆ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ, ಪೊಲೀಸರು ಮತ್ತು ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನು ಮಣ್ಣು ಮಾಡಿಸಿದ್ದರು.
ಇದೀಗ ಯುವತಿಯ ಮೊಬೈಲ್ನಲ್ಲಿ ಆಸ್ವತ್ರೆಯಲ್ಲಿ ಕೆಲಸ ಮಾಡ್ತಿದ್ದ ಗಿರೀಶ್ ಎಂಬುವನು ಜತೆ ಹಸಿಬಿಸಿಯಾಗಿ ತೆಗೆದುಕೊಂಡ ಪೊಟೋಗಳು ಪತ್ತೆಯಾಗಿವೆ. ಫೋಟೋ ಪತ್ತೆ ಹಿನ್ನೆಲೆ ಲೈಂಗಿಕವಾಗಿ ಬಳಸಿಕೊಂಡು ಮಗಳನ್ನ ಗಿರೀಶ್ ಕೊಲೆ ಮಾಡಿದ್ದಾನೆಂದು ಶ್ವೇತಾಂಜಲಿ ಪಾಲಕರು ಆರೋಪ ಮಾಡಿದ್ದಾರೆ.
ಆಸ್ವತ್ರೆಯ ಐಸಿಯುನಲ್ಲಿ ಕೆಲಸ ಮಾಡ್ತಿದ್ದ ಗಿರೀಶ್ ಮತ್ತು ಹಲವರಿಂದ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆಂಧ್ರ ಮೂಲದ ಶ್ವೇತಾಂಜಲಿ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದಳು. ಇದರ ನಡುವೆ ಸಂಬಂಧಿಯೋರ್ವನ ಜತೆ ಆಕೆಗೆ ಮದುವೆನೂ ನಿಗದಿಯಾಗಿತ್ತು. ಆದರೆ, ಗಿರೀಶ್ ವಿವಾಹಿತನಾಗಿದ್ರು ಕೂಡ ಶ್ವೇತಾಂಜಲಿಯನ್ನು ತನ್ನ ಬಲೆಗೆ ಬೀಳಿಸಿಕೊಂಡು ಆಕೆಯ ಜತೆ ಲೈಂಗಿಕ ಸಂಪರ್ಕ ಬೆಳೆಸಿ ಕೊಲೆ ಮಾಡಿದ್ದಾನೆಂದು ಪಾಲಕರು ಆರೋಪಿಸಿದ್ದಾರೆ.
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ದೇವನಹಳ್ಳಿ ಪೊಲೀಸರ ವಿರುದ್ದ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್)
ಒಂದು ವರ್ಷದ ಹಿಂದೆ ಇದೇ ದಿನ ಸಮಂತಾ ಆಡಿದ್ದ ಮಾತು ಇಷ್ಟು ಬೇಗ ಸುಳ್ಳಾಗಿ ಹೋಯಿತಾ..?!
ಸಮಂತಾ ಡಿವೋರ್ಸ್ ಹಿಂದಿರುವ ವ್ಯಕ್ತಿ ಈತನೇನಾ? ಅನುಮಾನ ಹುಟ್ಟುಹಾಕಿದೆ ಈ ವೈರಲ್ ಫೋಟೋ..!
ಮದುವೆಗೂ ಮುನ್ನವೇ ಒಪ್ಪಂದವೊಂದಕ್ಕೆ ಸಹಿ ಹಾಕಿ ತನ್ನ ಹಕ್ಕನ್ನು ಕಳೆದುಕೊಂಡರಾ ನಟಿ ಸಮಂತಾ?