More

    ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕನ ವಿರುದ್ಧ ಗಂಭೀರ ಆರೋಪ ಮಾಡಿದ ರಾಸ್​ ಟೇಲರ್​

    ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ “ಬ್ಲ್ಯಾಕ್​ ಅಂಡ್​ ವೈಟ್​” ಶೀರ್ಷಿಕೆಯುಳ್ಳ ತಮ್ಮ ಆತ್ಮಚರಿತ್ರೆಯಲ್ಲಿ ನ್ಯೂಜಿಲೆಂಡ್​ ತಂಡದ ಮಾಜಿ ಕ್ರಿಕೆಟಿಗ ರಾಸ್​ ಟೇಲರ್ ಅವರು ಶಾಕಿಂಗ್​ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.​

    ಐಪಿಎಲ್​ನಲ್ಲಿ ಒಮ್ಮೆ ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡ ನೀಡಿದ್ದ ಗುರಿ ಬೆನ್ನತ್ತಿದಾಗ ಆ ಪಂದ್ಯದಲ್ಲಿ ನಾನು ಡಕೌಟ್​ ಆಗಿದ್ದಕ್ಕೆ ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕ ನನ್ನ ಕಪಾಳಕ್ಕೆ ಬಾರಿಸಿದ್ದರು ಎಂದು ಆರೋಪಿಸಿದ್ದಾರೆ.

    ಮೊಹಾಲಿಯಲ್ಲಿ ಪಂಜಾಬ್​ ಮತ್ತು ರಾಜಸ್ಥಾನ ನಡುವಿನ ಪಂದ್ಯದ ನಡೆಯುತ್ತಿತ್ತು. 195 ರನ್​ ಚೇಸ್​ ಮಾಡಬೇಕಾಗಿತ್ತು. ಆದರೆ, ನಾನು ಶೂನ್ಯಕ್ಕೆ ಔಟ್​ ಆದೆ. ಪಂದ್ಯದ ಬಳಿಕ ತಂಡ, ಸಹಾಯಕ ಸಿಬ್ಬಂದಿ ಮತ್ತು ಮ್ಯಾನೇಜ್​ಮೆಂಟ್​ ಹೋಟೆಲ್​ ಒಂದರ ಟಾಪ್​ ಫೋರ್​ನಲ್ಲಿ ಇದ್ದರು. ಲೀಸ್​ ಹರ್ಲಿ ಜೊತೆ ವಾರ್ನೆ ಇದ್ದರು. ಈ ವೇಳೆ ರಾಜಸ್ಥಾನ ರಾಯಲ್ಸ್​ ತಂಡದ ಮಾಲೀಕರಲಿ ಒಬ್ಬರು ನನ್ನತ್ತ ಬಂದು, ರಾಸ್​, ನೀವು ಡಕ್​ ಆಗಲೆಂದು ನಾವು ನಿಮಗೆ ಮಿಲಿಯನ್​ ಡಾಲರ್​ ಪಾವತಿ ಮಾಡಲಿಲ್ಲ ಎಂದು ಹೇಳುತ್ತಲೇ ನನ್ನ ಕಪಾಳಕ್ಕೆ 3 ರಿಂದ 4 ಬಾರಿ ಬಾರಿಸಿದರು ಎಂದು ರಾಸ್​ ಟೇಲರ್​ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

    ಈ ವೇಳೆ ಅವರು ನಗುತ್ತಿದ್ದರು ಮತ್ತು ಅವರ ಹೊಡೆತ ಗಟ್ಟಿಯಾದ ಹೊಡೆತವಾಗಿರಲಿಲ್ಲ. ಆದರೂ, ಅವರು ನಟಿಸುತ್ತಿದ್ದಾರೆ ಎಂದು ನನಗೆ ಅನಿಸಲಿಲ್ಲ. ನಾನದನ್ನು ದೊಡ್ಡ ಸಮಸ್ಯೆಯಾಗಿ ಮಾಡಲು ಹೋಗಲಿಲ್ಲ. ಆದರೆ, ಅನೇಕ ವೃತ್ತಿಪರ ಕ್ರೀಡಾ ಪರಿಸರದಲ್ಲಿ ಈ ರೀತಿ ನಡೆಯುತ್ತಿದೆ ಎಂದು ನಾನು ಊಹಿಸಲು ಸಾಧ್ಯವಾಗಲಿಲ್ಲ ಎಂದು ರಾಸ್​ ಟೇಲರ್​ ಬೇಸರ ಹೊರಹಾಕಿದ್ದಾರೆ.

    38 ವರ್ಷದ ಟೇಲರ್ ಐಪಿಎಲ್​ನಲ್ಲಿ 2008 ರಿಂದ 2010 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದರು. ನಂತರ 2011 ರಲ್ಲಿ ರಾಜಸ್ಥಾನ ರಾಯಲ್ಸ್​ನೊಂದಿಗೆ ಸೇರಿದರು. (ಏಜೆನ್ಸೀಸ್​)

    ಅಶ್ಲೀಲ ಮೆಸೇಜ್​ ಮೂಲಕ ನೈನಾ ಜೈಸ್ವಾಲ್​ಗೆ ನಿತ್ಯವು ಕಿರುಕುಳ ನೀಡ್ತಿದ್ದ ಕಿಡಿಗೇಡಿಯ ಬಂಧನ

    ಹೃದಯಾಘಾತದಿಂದ ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್​ವಾಲಾ ವಿಧಿವಶ ​

    ಮಲ್ಟಿಫ್ಲೆಕ್ಸ್​ಗಳಲ್ಲಿ ಪಾಪ್​ಕಾರ್ನ್​ ದುಬಾರಿ ಏಕೆ? PVR ಮುಖ್ಯಸ್ಥ ಅಜಯ್​ ಬಿಜ್ಲಿ ಕೊಟ್ಟ ಕಾರಣವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts