More

    ಗಡಿಯಲ್ಲಿ ಚೀನಾ ಮೂಲಸೌಕರ್ಯ ನಿರ್ಮಿಸುತ್ತಿದ್ದು, ಯಾವುದೇ ಸಂದರ್ಭಕ್ಕೂ ನಾವು ಸಿದ್ಧವಾಗಿದ್ದೇವೆ: ಸೇನಾ ಮುಖ್ಯಸ್ಥ

    ನವದೆಹಲಿ: ಪೂರ್ವ ಲಡಾಖ್‌ನ ಮುಂದುವರಿದ ಪ್ರದೇಶಗಳ ಭದ್ರತಾ ಪರಿಶೀಲನೆ ನಡೆಸುತ್ತಿರುವ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ, ಚೀನಾ ವಾಸ್ತವ ನಿಯಂತ್ರಣ ರೇಖೆಯ ಇನ್ನೊಂದು ಬದಿಯಲ್ಲಿ ಗಣನೀಯ ಮೂಲಸೌಕರ್ಯಗಳನ್ನು ನಿರ್ಮಿಸಿದೆ. ಆದರೆ, ಭಾರತೀಯ ಪಡೆಗಳು ಯಾವುದೇ ಸಂದರ್ಭಕ್ಕೂ ಸಿದ್ಧವಾಗಿವೆ ಎಂದು ಹೇಳಿದರು.

    ಅತಿ ಹೆಚ್ಚಿನ ಸೇನಾ ಪಡೆಗಳನ್ನು ನಿಯೋಜಿಸಿ ಚೀನಾ ತನ್ನ ಗಡಿ ಪ್ರದೇಶದಲ್ಲಿ ಹೆಚ್ಚು ಮೂಲ ಸೌಕರ್ಯಗಳನ್ನು ನಿರ್ಮಿಸುತ್ತಿದೆ. ನಾವು ಅದನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡುತ್ತಿದ್ದು, ಯಾವುದೇ ಸಂದರ್ಭದಲ್ಲೂ ಪ್ರತಿಕ್ರಿಯಿಸಲು ಸಿದ್ಧವಾಗಿದ್ದೇವೆ. ನಾವು ಕೂಡ ಸುಧಾರಿತ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಂಡಿದ್ದೇವೆ. ನಾವು ಕೂಡ ಬಲಿಷ್ಠವಾಗಿದ್ದೇವೆ. ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿದ್ದೇವೆ ಎಂದು ಸೇನಾ ಮುಖ್ಯಸ್ಥ ನರವಣೆ ತಿಳಿಸಿದ್ದಾರೆ.

    ಪೂರ್ವ ಲಡಾಖ್​ ಭಾಗಗಳಿಗೆ ನರವಣೆ ಅವರು ಎರಡು ದಿನಗಳ ಕಾಲ ಭೇಟಿ ನೀಡಿದ್ದಾರೆ. ಚೀನಾದೊಂದಿಗಿನ ತನ್ನ ದೀರ್ಘಕಾಲದ ಸೇನಾ ಸಂಘರ್ಷದ ಹೊಂದಿರುವ ಭಾರತ ಗಡಿಯಲ್ಲಿ ತನ್ನ ಕಾರ್ಯಾಚರಣೆಯ ಸಿದ್ಧತೆಯನ್ನು ಹೇಗೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಸೇನಾ ಮುಖ್ಯಸ್ಥರು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್​)

    ಪ್ರವಾಸಿ ಸ್ವರ್ಗ ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ: ಇನ್​ಸ್ಟಾಗ್ರಾಂನಲ್ಲಿ ಸುಳಿವು ಬಿಟ್ಟುಕೊಟ್ಟ ನಟಿ!

    ಬ್ಯೂಟಿ ಕಿಂಗ್‌, ಮದ್ಯಪ್ರಿಯ, ಪ್ರಶಸ್ತಿಗಳ ಸರದಾರ 21 ಕೋಟಿ ರೂ. ಬೆಲೆಯ ಸುಲ್ತಾನ್‌ ಹೃದಯಾಘಾತದಿಂದ ಸಾವು

    ನಟಿ ಸೌಜನ್ಯ ಸಾವು ಪ್ರಕರಣ: ಕಿರುತೆರೆ ನಟಿಯ ಲಾಸ್ಟ್​ ಕಾಲ್​ ಸೀಕ್ರೆಟ್​ ಮೇಲೆ ಪೊಲೀಸರ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts