More

    ಅದಕ್ಕೆಲ್ಲ ನಾನು ಜವಾಬ್ದಾರನಲ್ಲ: ವೈರಲ್​ ಟ್ವೀಟ್​ ಬಗ್ಗೆ ಸಮಂತಾರ ಮಾಜಿ ಲವರ್ ನಟ ಸಿದ್ಧಾರ್ಥ್​ ಸ್ಪಷ್ಟನೆ..!

    ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ನಟ ಸಿದ್ಧಾರ್ಥ್​ ಟ್ವೀಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ಟ್ವಿಟರ್​​ನಲ್ಲಿ ಟ್ರೆಂಡ್​ ಕೂಡ ಆಗಿತ್ತು.

    ನಾನು ಶಿಕ್ಷಕರಿಂದ ಕಲಿತ ಮೊದಲ ಪಾಠವೆಂದರೆ ಮೋಸಗಾರರು ಎಂದಿಗೂ ಏಳಿಗೆ ಆಗುವುದಿಲ್ಲ ಎಂದು ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದಾರೆ. ಸಮಂತಾ ಡಿವೋರ್ಸ್​ ಘೋಷಣೆ ಬೆನ್ನಲ್ಲೇ ಟ್ವೀಟ್​ ಮಾಡಿದ್ದರಿಂದ ಅವರನ್ನೇ ಗುರಿಯಾಗಿರಿಸಿ ಸಿದ್ಧಾರ್ಥ್​ ಟ್ವೀಟ್​ ಮಾಡಿದ್ದಾರೆ ಎಂದು ಚರ್ಚೆ ಆಗಿತ್ತು. ಟ್ವೀಟ್​ ವೈರಲ್​ ಆಗಲು ಕಾರಣವೂ ಇದೆ. ಏನೆಂದರೆ, ಒಂದು ಕಾಲದಲ್ಲಿ ಸಮಂತಾ, ನಟ ಸಿದ್ಧಾರ್ಥ ಮಾಜಿ ಲವರ್​. ಈ ಕಾರಣದಿಂದ ಅವರು ಮಾಡಿದ್ದ ಟ್ವೀಟ್​ ಭಾರೀ ಸದ್ದು ಮಾಡಿತ್ತು.

    ಇದೀಗ ಆ ಟ್ವೀಟ್​ಗೆ ಸಿದ್ಧಾರ್ಥ್​ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರನ್ನು ಗುರಿಯಾಗಿರಿಸಿಕೊಂಡು ಆ ಟ್ವೀಟ್​ ಮಾಡಿಲ್ಲ. ನನ್ನ ಮನಸ್ಸಿಗೆ ಏನು ತೋಚುತ್ತದೆಯೋ ಅದನ್ನು ನಾನು ಪ್ರತಿದಿನ ಟ್ವೀಟ್​ ಮಾಡುತ್ತೇನೆ. ಒಂದು ವೇಳೆ ನಾನು ಬೀದಿನಾಯಿಗಳ ಬಗ್ಗೆ ಟ್ವೀಟ್ ಮಾಡಿದರೆ, ಅದು ಅವರಿಗೆ ಅನ್ವಯಿಸುತ್ತದೆ ಎಂದು ಜನರು ಭಾವಿಸಿದರೆ, ಅದಕ್ಕೆಲ್ಲ ನಾನು ಜವಾಬ್ದಾರನಾಗಿರುವುದಿಲ್ಲ ಎಂದಿದ್ದಾರೆ. ತಮ್ಮ ಮುಂದಿನ ಮಹಾ ಸಮುದ್ರಂ ಸಿನಿಮಾದ ಪ್ರಮೋಷನ್​ ವೇಳೆ ಮಾಧ್ಯಮದವರು ಪ್ರಶ್ನಿಸಿದಾಗ ಈ ರೀತಿ ಉತ್ತರ ನೀಡಿದ್ದಾರೆ.

    ನನ್ನ ಜೀವನದಲ್ಲಿ ಬೇಡದ ಜನರಿಗಿಂತ ನನ್ನ ಜೀವನದ ಬಗ್ಗೆ ನಾನು ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ಮಾಧ್ಯಮಗಳ ವದಂತಿಗಳ ಬಗ್ಗೆಯು ಕೂಡ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಸಿದ್ಧಾರ್ಥ್​ ಓರ್ವ ಅದ್ಭುತ ನಟ. ತಮ್ಮ ಮುಂದಿನ ಮಹಾ ಸಮುದ್ರಂ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಸಿದ್ಧಾರ್ಥ್​ ಕಮ್​ಬ್ಯಾಕ್​ ಮಾಡಿದ್ದಾರೆ. ಇನ್ನು ಸಿದ್ಧಾರ್ಥ್​ ಅವರ ವೈಯಕ್ತಿಕ ಜೀವನವು ಕೂಡ ಹೆಚ್ಚು ಸುದ್ದಿ ಮಾಡಿದೆ. ಏಕೆಂದರೆ, ಭಾರತೀಯ ಸಿನಿ ರಂಗದ ಅನೇಕ ನಟಿಯರ ಜತೆಯಲ್ಲಿ ಸಿದ್ಧಾರ್ಥ್​ ಹೆಸರು ಕೇಳಿಬಂದಿದೆ.

    2003ರಲ್ಲಿ ಸಿದ್ಧಾರ್ಥ್​ ಮೇಘನಾ ಎಂಬುವರನ್ನು ಮದುವೆ ಆಗಿದ್ದರು. ಆದರೆ, ಅವರು ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿ ಜೀವಿಸುವ ಮೂಲಕ 2007ರಲ್ಲಿ ವಿಚ್ಛೇದನ ಪಡೆದುಕೊಂಡರು. ರಂಗ್​ ದೇ ಬಸಂತಿ ಸಹ ನಟಿ ಸೋಹಾ ಅಲಿ ಖಾನ್​ ಜತೆ ಲವ್​ ಅಫೇರ್​ ಇತ್ತು ಎನ್ನಲಾಗಿದೆ. ಆಕೆಯೊಂದಿಗೆ ಬ್ರೇಕ್​ ಮಾಡಿಕೊಂಡ ಬಳಿಕ ನಟಿ ಶ್ರುತಿ ಹಾಸನ್​ ಜತೆ ಸಿದ್ಧಾರ್ಥ್​ ಹೆಸರು ತಳುಕು ಹಾಕಿಕೊಂಡಿತ್ತು.

    ಸುಮಾರು ಅರ್ಧ ವರ್ಷ ಪ್ರೇಮ ಸಂಬಂಧದಲ್ಲಿದ್ದ ಸಿದ್ಧಾರ್ಥ ಮತ್ತು ಶ್ರುತಿ ನಂತರದಲ್ಲಿ ಸಂಪರ್ಕ ಕಡಿದುಕೊಂಡಿದ್ದರು. ಇದಾದ ಬಳಿಕ ಸಮಂತಾ ಜತೆ ಸಿದ್ಧಾರ್ಥ್​ ಪ್ರೀತಿ ಕಂಡುಕೊಂಡಿದ್ದರು ಎನ್ನಲಾಗಿದೆ. ತೆಲುಗು ಸಿನಿಮಾ ಜಬರ್​ದಸ್ತ್​ ಸಿನಿಮಾ ಸೆಟ್​ನಲ್ಲಿ ಭೇಟಿಯಾಗಿದ್ದ ಇಬ್ಬರ ನಡವೆ ಗಾಢವಾದ ಪ್ರೀತಿ ಬೆಳೆದಿತ್ತಂತೆ. ಅಲ್ಲದೆ, ಸಮಂತಾ, ಸಿದ್ಧಾರ್ಥ್​ ಜತೆ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರಂತೆ. ಆದರೆ, ನಂತರದ ದಿನಗಳಲ್ಲಿ ಇಬ್ಬರು ದೂರಾಗಿದ್ದರು. (ಏಜೆನ್ಸೀಸ್​)

    ನಾನು ಕಲಿತ ಮೊದಲ ಪಾಠ.. ಸಮಂತಾ ಡಿವೋರ್ಸ್ ಬೆನ್ನಲ್ಲೇ ಮಾಜಿ ಲವರ್​ ಸಿದ್ಧಾರ್ಥ್​ ಟ್ವೀಟ್​ ವೈರಲ್​

    ಈ ಸಮಾಜ ಮಹಿಳೆಯರನ್ನು ಮಾತ್ರ ಪ್ರಶ್ನಿಸುತ್ತದೆ, ಪುರುಷರನ್ನೇಕೆ ಪ್ರಶ್ನಿಸುವುದಿಲ್ಲ: ಸಮಂತಾ ಪೋಸ್ಟ್​ ವೈರಲ್​

    ‘ಸಮಂತಾಗೆ ಅಫೇರ್ಸ್​ ಇತ್ತು, ಮಕ್ಕಳನ್ನು ಬಯಸಿರಲಿಲ್ಲ, ಗರ್ಭಪಾತ ಆಗಿತ್ತು..’ ಎಂಬೆಲ್ಲ ಆರೋಪಗಳಿಗೆ ಅವರಿಂದಲೇ ಬಂತು ದಿಟ್ಟ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts