More

    ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

    ಹಾಸನ: ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ. ಆದರೆ, ಅದು ಅಪಪ್ರಚಾರ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

    ಮಳೆಹಾನಿ ಪ್ರದೇಶಗಳ ವೀಕ್ಷಣೆ ಹಿನ್ನೆಲೆ ನಿನ್ನೆ (ಆ.19) ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ನಡೆಸಿದ ಸಿದ್ದರಾಮಯ್ಯ, ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೂ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಶ್ರೀಗಳ ಬಳಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಯಿತು.

    ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹಾಸನದಲ್ಲಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ, ನಾನೇನು ಪಶ್ಚತಾಪ ಪಟ್ಟಿಲ್ಲ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ವೀರಶೈವ ಧರ್ಮ ಮಾಡಿ ಅಂತ ಶ್ಯಾಮನೂರು ಶಿವಶಂಕರಪ್ಪ ಅವರು ಒಂದು ಅರ್ಜಿ ಕೊಟ್ಟರು. ಅಂದಿನಿಂದ ಇದೆಲ್ಲ ಶುರುವಾಯ್ತು ಅಷ್ಟೇ ಎಂದರು.

    ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಕೋಮುವಾದ ಅಜೆಂಡಾ ಇಟ್ಟುಕೊಂಡು ಎಲ್ಲವನ್ನೂ ಮಾಡ್ತಾ ಇದ್ದಾರೆ. ಹಿಂದೂ ರಾಷ್ಟ್ರ ಮಾಡಬೇಕೆಂಬುದು ಅವರ ಅಜೆಂಡಾ, ಅದನ್ನು ಮಾಡಲು ಹೋಗ್ತಾ ಇದ್ದಾರೆ. ಆದರೆ ಸಂವಿಧಾನದಲ್ಲಿ ಎಲ್ಲ ಧರ್ಮವನ್ನು ಸಮಾನಾಗಿ ಕಾಣಬೇಕು, ಸಮಾನಾಗಿ ಗೌರವಿಸಬೇಕು, ಎಲ್ಲರಿಗೂ ಕೂಡ ಕಾನೂನು ರಕ್ಷಣೆ ಕೊಡಬೇಕು ಮತ್ತು ತಾರತಮ್ಯ ಮಾಡಬಾರದು ಅಂತಿದೆ. ಆದರೆ ಬಿಜೆಪಿಯವರು ತಾರತಮ್ಯ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

    ಮುಖ್ಯಮಂತ್ರಿಯವರು ಮಂಗಳೂರಿಗೆ ಪ್ರವೀಣ್ ನೆಟ್ಟರ್ ಮನೆಗೆ ಹೋಗಿದ್ದರು. ಹೋಗಬೇಕು ಪರಿಹಾರವನ್ನು ಕೊಡಬೇಕು ನಿಜ. ಆದರೆ, ಇನ್ನಿಬ್ಬರು ಮುಸಲ್ಮಾನರು ಸತ್ತಿದ್ದಾರಲ್ಲ ಅವರ ಮನೆಗೂ ಹೋಗಬೇಕು, ಪರಿಹಾರವನ್ನು ಕೊಡಬೇಕಲ್ವಾ? ತೆರಿಗೆ ಹಣದಲ್ಲಿ ಸರ್ಕಾರದಿಂದ ಪರಿಹಾರ ಕೊಡ್ತಾ ಇದ್ದಾರೆ, ಎಲ್ಲರಿಗೂ ಕೊಡಬೇಕು. ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಹಿಂದೂ ಇನ್ಯಾರೆ ಇರಲಿ ಎಲ್ಲರಿಗೂ ಪರಿಹಾರ ಕೊಡಬೇಕು ಎನ್ನುವ ಮೂಲಕ ರಾಜ್ಯ ಸರ್ಕಾರದ ನಡೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

    ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವಿಡಿಯೋ ಚಿತ್ರೀಕರಣ: ಈತನ ದುಷ್ಕೃತ್ಯದ ಹಿಂದಿದ್ದ ದುರುದ್ದೇಶವಿದು

    ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ರಾಹುಲ್​ ನಡೆದುಕೊಂಡ ರೀತಿಗೆ ನೆಟ್ಟಿಗರ ಬಹುಪರಾಕ್​: ವಿಡಿಯೋ ವೈರಲ್​

    ಮರು ಪರಿಷ್ಕೃತ ಪಠ್ಯ ರೆಡಿ, ವೆಬ್​ಸೈಟ್​ನಲ್ಲಿ ಸಾಫ್ಟ್ ಕಾಪಿ: ಮುದ್ರಣದ ಕಾರ್ಯ ಪ್ರಗತಿ, 3 ವಾರದ ಬಳಿಕ ಶಾಲೆಗಳಿಗೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts