More

    ಈ ದೇಶದ ರಾಷ್ಟ್ರ ಭಾಷೆ ಹಿಂದಿ ಅನ್ನೋದು ಎಲ್ಲರಿಗೂ ಗೊತ್ತಿದೆ: ಸಿದ್ದರಾಮಯ್ಯಗೆ ಬಿ.ಸಿ. ಪಾಟೀಲ್​ ತಿರುಗೇಟು

    ಚಿತ್ರದುರ್ಗ: ದೇಶದಲ್ಲಿ ಹಿಂದಿ ಭಾಷೆ ಹೇರಿಕೆ ಅನ್ನೋದು ಸಾಂಸ್ಕೃತಿಕ ಭಯೋತ್ಪಾದನೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ. ಪಾಟೀಲ್, ಈ ದೇಶದ ರಾಷ್ಟ್ರ ಭಾಷೆ ಹಿಂದಿ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

    ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಷ್ಟ್ರೀಯ ಭಾಷೆ ಪಾಲನೆ ಮಾಡಿ ಅನ್ನೊದು ನನಗೆ ತಪ್ಪು ಅನ್ನಿಸಲ್ಲ. ಅದು ಸಾಂಸ್ಕೃತಿಕ ಭಯೋತ್ಪಾದನೆ ಅಂದ್ರೆ ಅರ್ಥವೇನು? ಅವರಿಗೆ ಎಲ್ಲಾ ದೃಷ್ಟಿಯಲ್ಲೂ ಭಯೋತ್ಪಾದನೆಯೇ ಮೊದಲು ಎನಿಸಿದೆ. ಅವರು ಭಯೋತ್ಪಾದಕರ ನೆರಳಲ್ಲಿ ಬದುಕ್ತಿರೋದ್ರಿಂದ ಎಲ್ಲವೂ ಭಯೋತ್ಪಾದನೆಯಾಗಿ ಕಾಣ್ತಿದೆ ಎಂದು ಕಿಡಿಕಾರಿದರು.

    ಹಿಂದಿಯನ್ನು ಅಳವಡಿಸಿಕೊಂಡ್ರೆ ತಪ್ಪೇನಿಲ್ಲ. ಹಿಂದಿಯೊಂದಿಗೆ ನಮ್ಮ ನಾಡುಭಾಷೆ, ಆಡು ಭಾಷೆ ಕನ್ನಡ ಸಹ ಇರುತ್ತದೆ. ಬ್ರಿಟೀಷರ ಇಂಗ್ಲಿಷ್ ಮೇಲೆ ಪ್ರೀತಿ ಇದೆ, ಹಿಂದಿ ಭಾಷೆ ಮೇಲೆ ಪ್ರೀತಿ ಇಲ್ವಾ? ನಿಮಗೆ ಅಲ್ ಖೈದಾ ಪ್ರೀತಿ ಇದೆ. ಭಾರತೀಯ ಸಂಸ್ಕ್ರತಿ ಮೇಲೆ ಪ್ರೀತಿ ಇಲ್ವಾ? ಎನ್ನುವ ಮೂಲಕ ಸಿದ್ದರಾಮಯ್ಯಗೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್​)

    ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?

    ತರಗತಿ ಒಳಗೆ ಯುವತಿಯರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಐವರಿಗೆ ಬಿಗ್​ ಶಾಕ್!​

    ಸರ್ಕಾರದ ವಿರುದ್ಧ ಲಾರಿ ಮಾಲೀಕರ ಆಕ್ರೋಶ; 15 ವರ್ಷ ಹಳೆಯ ವಾಹನ ನಿಷೇಧ ಹಿಂಪಡೆಯಲು 30 ದಿನಗಳ ಗಡುವು

    ಮುಂಜಾನೆವರೆಗೂ ನಶೆಯಲ್ಲಿ ತೇಲಾಡ್ತಿದ್ದ ಯುವಕ-ಯುವತಿಯರಿಗೆ ಶಾಕ್​ ಕೊಟ್ಟ ಸಿಸಿಬಿ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts