More

    ಕೆಎಫ್​ಸಿ ಚಿಕನ್​ ಖರೀದಿಸಿದ ಗ್ರಾಹಕರೊಬ್ಬರು ಬಾಯಿ ಚಪ್ಪರಿಸಿ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​!

    ಲಂಡನ್​: ಕೆಎಫ್​ಸಿ ಚಿಕನ್​ ಅಂದ್ರೆ ಬಹುತೇಕರಿಗೆ ಬಲುಪ್ರಿಯ. ಏಕೆಂದರೆ, ಬಹಳ ರುಚಿ ಹಾಗೂ ಗರಿಗರಿಯಾಗಿರುತ್ತದೆ. ಹಾಗಂತ ಹಿಂದು-ಮುಂದು ನೋಡದೆ ಕೆಎಫ್​ಸಿ ಚಿಕನ್​ ಬಾಯಿಗಿಳಿಸಿಕೊಂಡರೆ ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಂತಿದೆ.

    ಬಹುತೇಕರು ಚಿಕನ್​ ಖರೀದಿಸುವಾಗ ಕೋಳಿ ತಲೆಯನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಬಹುತೇಕರಿಗೆ ಕೋಳಿ ತಲೆಮಾಂಸ ಇಷ್ಟವಾಗುವುದಿಲ್ಲ. ನಾನ್​ವೆಜ್​ ಹೋಟೆಲ್​ಗಳಲ್ಲಿ ಮಾಂಸದ ಜತೆಯಲ್ಲಿ ಕೋಳಿ ತಲೆಯಿದ್ದರೆ ತಕ್ಷಣ ಜಗಳಕ್ಕೆ ಬೀಳುತ್ತಾರೆ. ಹೀಗಾಗಿಯೇ ಎಲ್ಲ ಹೋಟೆಲ್​ಗಳಲ್ಲಿ ಹಾಗೂ ಚಿಕನ್​ ಸ್ಟಾಲ್​ಗಳಲ್ಲಿ ಕೋಳಿ ತಲೆಯನ್ನು ಪ್ರತ್ಯೇಕವಾಗಿ ಇಡುತ್ತಾರೆ. ಇದನ್ನು ತಿನ್ನುವರು ಬೆರಳಣಿಕೆ ಮಂದಿಯಷ್ಟೇ. ಆದರೆ, ಕುರಿ ತಲೆ ಮಾಂಸಕ್ಕೆ ಬಹುಬೇಡಿಕೆ ಇದೆ.

    ಈಗ ಅಸಲಿ ವಿಚಾರಕ್ಕೆ ಬರೋಣ. ಅದೇನಾಯ್ತು ಅಂದರೆ, ಯುಕೆಯಲ್ಲಿ ಕೆಎಫ್​ಸಿ ಗ್ರಾಹಕರೊಬ್ಬರು ಚಿಕನ್​ ಖರೀದಿಸಿದ್ದರು. ಬಳಿಕ ಬಾಯಿ ಚಪ್ಪರಿಸಿ ತಿನ್ನುವಾಗ ಅವರಿಗೆ ಆಘಾತವೊಂದು ಕಾದಿತ್ತು. ಏಕೆಂದರೆ, ಗರಿಗರಿಯಾದ ಮಾಂಸದ ಜತೆಯಲ್ಲಿ ಕೋಳಿ ತಲೆ ಮಾಂಸವೂ ಇತ್ತು. ಅದನ್ನು ನೋಡಿ ಗ್ರಾಹಕರಿಗೆ ಸಿಟ್ಟು ಬಂದಿದೆ. ಹೀಗಾಗಿ ಅದರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಅಸಮಾಧಾನ ಹೊರಹಾಕಿದ್ದಾರೆ.

    ಗ್ರಾಹಕರ ಹೆಸರು ಗೇಬ್ರಿಯಲ್​. ಓರ್ವ ಮಹಿಳೆ. 2021ರ ಡಿಸೆಂಬರ್​ 3ರಂದು ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಅದನ್ನು ಟೇಕವೇಟ್ರಾಮ (@takeawaytrauma) ಹೆಸರಿನ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿ, ಮಹಿಳೆಗಾದ ಕಹಿ ಅನುಭವವನ್ನು ವಿವರಿಸಿದ್ದಾರೆ. ಇಡೀ ಕೋಳಿ ತಲೆ ಸ್ಪಷ್ಟವಾಗಿ ಕಾಣುವಂತಹ ಕೆಎಫ್​ಸಿ ಚಿಕನ್​ ನೋಡಿ ಗಾಬರಿಯಾಯಿತು ಎಂದು ಹೇಳಿಕೊಂಡಿದ್ದಾರೆ.

    ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಎಫ್​ಸಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಆಹಾರ ತಯಾರಿಸುವಾಗ ಸರಿಯಾಗಿ ಪರಿಶೀಲಿಸಬೇಕು. ಇಂತಹ ಘಟನೆಗಳಿಂದ ಕಂಪನಿಗೆ ಕೆಟ್ಟ ಹೆಸರು ಖಂಡಿತ ಎಂದು ನೆಟ್ಟಿಗರೊಬ್ಬರು ಬೇಸರದ ಜತೆ ಎಚ್ಚರಿಕೆಯನ್ನು ನೀಡಿದ್ದಾರೆ. ಇತ್ತ ಫೋಟೋ ವೈರಲ್​ ಆಗುತ್ತಿದ್ದಂತೆ ಎಚ್ಚತ್ತಿರುವ ಕೆಎಫ್​ಸಿ ಇದನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಪ್ರತಿಕ್ರಿಯೆ ನೀಡಿದೆ.

    ಈ ಬಗ್ಗೆ ತನಿಖೆ ನಡೆಸಲು ತಂಡವನ್ನು ರಚಿಸಿದ್ದೇವೆ. ಅಪರೂಪದ ಸಂದರ್ಭಗಳಲ್ಲಿ ತಪ್ಪಾಗಿ ಹೋಗುತ್ತವೆ ಮತ್ತು ಇದು ನಂಬಲಾಗದಷ್ಟು ಅಪರೂಪವಾಗಿದೆ. ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆ ನಡೆಯದಂತೆ ತಡೆಯಲು ಸರಿಯಾದ ತಪಾಸಣೆ ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಫ್‌ಸಿ ಭರವಸೆ ನೀಡಿದೆ. ಇದೇ ವೇಳೆ ಯುಕೆ ಮಹಿಳೆ ಗೇಬ್ರಿಯಲ್ ಅವರನ್ನು ಉಚಿತ ಕೆಎಫ್‌ಸಿ ಊಟಕ್ಕೆ ಆಹ್ವಾನಿಸಲಾಗಿದೆ ಮತ್ತು ಅವರ ಭಯವನ್ನು ನಿವಾರಿಸಲು ಅಡಿಗೆ ಪ್ರಕ್ರಿಯೆಗಳನ್ನು ಸಹ ತೋರಿಸಲಾಗಿದೆ. ಗ್ಯಾಬ್ರಿಯೆಲ್ ಶೀಘ್ರದಲ್ಲೇ ನಮಗೆ 5-ಸ್ಟಾರ್ ವಿಮರ್ಶೆಗಳನ್ನು ಬಿಟ್ಟು ಹಿಂತಿರುಗುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಕೆಎಫ್​ಸಿ ಹೇಳಿದೆ. (ಏಜೆನ್ಸೀಸ್​)

    ಉತ್ಪನ್ನದಲ್ಲಿ ದೋಷವಿದ್ದರೆ ಪ್ರಶ್ನಿಸಿ; ಗ್ರಾಹಕರಿಗೆ ಕಾನೂನು ಪರಿಣಿತರ ಸಲಹೆ

    ಚೀನಾದಲ್ಲಿ ಲಾಕ್​ಡೌನ್​; ಬ್ರಿಟನ್​ನಲ್ಲಿ ಮುಂದುವರಿದ ಆತಂಕ, ಗರಿಷ್ಠ ದೈನಿಕ ಪ್ರಕರಣ ಪತ್ತೆ

    ವಾಟ್ಸ್‌ಆ್ಯಪ್ ಥರದ್ದೇ ಬೇರೆ ಸುರಕ್ಷಿತ ಆ್ಯಪ್ ಅಭಿವೃದ್ಧಿಪಡಿಸಿದ ಸೇನೆ; ಇದು ಸೈನಿಕರಿಗೆ ಮಾತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts