More

    ಆರ್ಥಿಕ ಏಳಿಗೆಗಾಗಿ ಮಹಿಳೆಯರಿಬ್ಬರ ಬಲಿ: ಕೇರಳ ಜನತೆಯನ್ನು ಬೆಚ್ಚಿಬೀಳಿಸಿದ ವಾಮಾಚಾರ ಪ್ರಕರಣವಿದು

    ಪತ್ತನಂತಿಟ್ಟ: ಕೇರಳ ಜನತೆಯನ್ನೇ ಬೆಚ್ಚಿಬೀಳಿಸಿರುವ ವಾಮಾಚಾರಕ್ಕಾಗಿ ಮಹಿಳೆಯರಿಬ್ಬರನ್ನು ಬಲಿ ಕೊಟ್ಟ ಪ್ರಕರಣದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಆರೋಪಿಗಳನ್ನು ಕೇರಳ ಪೊಲೀಸರು ಮಂಗಳವಾರ (ಅ.11) ಬಂಧಿಸಿದ್ದಾರೆ.

    ಈ ಆಘಾತಕಾರಿ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್​ನಲ್ಲಿ ನಡೆದಿದೆ. ಬಂಧಿತರನ್ನು ಶಫಿ ಮತ್ತು ದಂಪತಿ ಭಗವಾಲ್​ ಸಿಂಗ್​ ಮತ್ತು ಲೈಲಾ ಎಂದು ಗುರುತಿಸಲಾಗಿದೆ. ನರಬಲಿ ಆಚರಣೆ ನಡೆಸಿದ ಮೂವರನ್ನು ನಾವು ಬಂಧಿಸಿದ್ದೇವೆ. ವಾಮಾಚಾರಕ್ಕಾಗಿ ಇಬ್ಬರು ಮಹಿಳೆಯರನ್ನು ಕೊಂದಿದ್ದಾರೆ ಎಂದು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ನಾಗರಾಜು ತಿಳಿಸಿದ್ದಾರೆ.

    ಪತ್ತನಂತಿಟ್ಟ ಜಿಲ್ಲೆಯ ಮನೆಯೊಂದರಲ್ಲಿ ಸಮಾಧಿ ಮಾಡಲಾಗಿದ್ದ ಎರಡು ಛಿದ್ರಗೊಂಡ ಶವಗಳು ಪತ್ತೆಯಾಗಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಈ ಭಯಾನಕ ಮಾಹಿತಿ ಬಯಲಾಗಿದೆ. ಸಂತ್ರಸ್ತರನ್ನು ಪದ್ಮ ಮತ್ತು ರೊಸ್ಲಿ ಎಂದು ಗುರುತಿಸಲಾಗಿದೆ. ಇಬ್ಬರು ಸಹ ಲಾಟರಿ ಟಿಕೆಟ್​ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಕೊಲೆಯ ವಿಧಾನ ಹೇಳಲಾಗದಷ್ಟು ಭೀಕರ ಮತ್ತು ಕ್ರೂರವಾಗಿವೆ ಎಂದು ಪೊಲೀಸ್ ಕಮಿಷನರ್ ಹೇಳಿದರು.

    ಪ್ರಮುಖ ಶಂಕಿತ ಆರೋಪಿ ಶಫಿ ಮಹಿಳೆಯರನ್ನು ಬಲಿಕೊಡುವಂತೆ ಆಮಿಷವೊಡ್ಡಿರುವುದು ಬೆಳಕಿಗೆ ಬಂದಿದೆ. ಈತನ ಉದ್ದೇಶ ಹಣವಾಗಿತ್ತು. ಆರೋಪಿಯು ‘ನರಬಲಿ ಆಚರಣೆ’ಗಾಗಿ ಹೆಚ್ಚಿನ ಮಹಿಳೆಯರನ್ನು ಸಂಪರ್ಕಿಸಿದ್ದನೇ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

    ದಂಪತಿ ಭಗವಲ್ ಸಿಂಗ್ ಮತ್ತು ಲೈಲಾ ದಂಪತಿಗಳು ಆರ್ಥಿಕ ಏಳಿಗೆಗಾಗಿ ನರಬಲಿ ಮಾಡಿರುವುದಾಗಿ ತಿಳಿದುಬಂದಿದೆ. ತನಿಖಾ ವೇಳೆ ಲಭ್ಯವಾದ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು ಹಿಡಿಯಲು ಸಹಾಯಕವಾಗಿವೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ

    ಬೆಂಗ್ಳೂರು ವಿವಿಯಲ್ಲಿ ಬಿಬಿಎಂಪಿಯಿಂದ ಅವೈಜ್ಞಾನಿಕ ಹಂಪ್ಸ್​ ನಿರ್ಮಾಣ: ಒಂದೇ ದಿನ 3 ಅಪಘಾತ, ಕೋಮಾಗೆ ಜಾರಿದ ಬೈಕ್​ ಸವಾರ

    ಒಂದೇ ವೇದಿಕೆಯಲ್ಲಿ ರಮ್ಯಾ-ರಚಿತಾ; ಹೆಡ್ ಬುಷ್ ಪ್ರಿ-ರಿಲೀಸ್​ನಲ್ಲಿ ಸ್ಟಾರ್ ನಟಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts