More

    ಅಂಗಡಿಯಿಂದ ಬಂದ ತಾಯಿ ಮಗಳ ಕೋಣೆ ತೆರೆಯುತ್ತಿದ್ದಂತೆ ಕಾದಿತ್ತು ಶಾಕ್​: ಬೆಚ್ಚಿಬೀಳಿಸುವ ಘಟನೆ ಇದು!

    ಚಿತ್ತೂರು: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮತ್ತು ಜೈಲಿಗೆ ಕಳುಹಿಸಿದ ದ್ವೇಷಕ್ಕೆ ಯುವತಿಯೊಬ್ಬಳನ್ನು ಪಾಗಲ್​ ಪ್ರೇಮಿಯೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

    ಚಿತ್ತೂರು ನಗರದ ರಿದ್ಸ್​ಪೇಟೆ ಏರಿಯಾದ ನಿವಾಸಿಗಳಾದ ವರದಯ್ಯ ಮತ್ತು ಲತಾ ದಂಪತಿಗೆ ಸುಶ್ಮಿತಾ ಮತ್ತು ಸುನೀಲ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಅಶಿಕ್ಷಿತನಾಗಿರುವ ವರದಯ್ಯ ತನ್ನ ಮಕ್ಕಳ ಬೆಳವಣಿಗೆ ಬಹಳಷ್ಟು ಶ್ರಮಪಟ್ಟಿದ್ದಾರೆ. ಆರಂಭದ ದಿನಗಳಲ್ಲಿ ಯಾವುದೇ ಕೆಲಸ ಇರಲಿಲ್ಲ. ನಂತರದ ದಿನಗಳಲ್ಲಿ ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಹೋಟೆಲ್​ ಒಂದಕ್ಕೆ ಕೆಲಸಕ್ಕೆ ಸೇರುತ್ತಾರೆ. ಮಕ್ಕಳನ್ನು ಚೆನ್ನಾಗಿ ಓದಿಸುತ್ತಾರೆ. ಇತ್ತ ವರದಯ್ಯ ಪತ್ನಿಗೆ ಕಾಯಿಲೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಓಡಾಡುವುದೇ ಕೆಲಸವಾಗಿರುತ್ತದೆ.

    ಹೀಗಿರುವಾಗ ಮಗಳು ಸುಶ್ಮಿತಾಗೆ ವೆಲ್ಲೂರ್​ನ ಸಿಎಂಸಿ ಮೆಡಿಕಲ್​ ಕಾಲೇಜಿನಲ್ಲಿ ನರ್ಸಿಂಗ್​ಗೆ ಸೀಟು ದೊರೆಯುತ್ತದೆ. ಕೊನೆಗೆ 17 ಸಾವಿರ ಸಂಬಳದ ಕೆಲಸವೂ ಸಿಗುತ್ತದೆ. ರಾತ್ರಿ ಪಾಳಿ ಅಥವಾ ಹೆಚ್ಚಿನ ಕರ್ತವ್ಯ ನಿರ್ವಹಿಸಿ ಮೊದಲ ತಿಂಗಳ ಸಂಬಳವಾಗಿ 18 ಸಾವಿರವನ್ನು ಸುಶ್ಮಿತಾ ಪಾಲಕರಿಗೆ ನೀಡುತ್ತಾಳೆ. ಕುಟುಂಬದ ಸಂಕಷ್ಟ ಕೊನೆಯಾಗುವ ಕಾಲ ಬಂದಿತು ಅಂದುಕೊಂಡಿದ್ದ ಕುಟುಂಬಕ್ಕೆ ಭಾರಿ ಆಘಾತವೊಂದು ಎದುರಾಗುತ್ತದೆ.

    ಸುಶ್ಮಿತಾಗೆ ಚಿನ್ನ ಎಂಬ ಯುವಕನೊಬ್ಬ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿರುತ್ತಾನೆ. ಸುಶ್ಮಿತಾಗೆ ಇಷ್ಟವಿಲ್ಲದಿದ್ದರೂ ನಿರಂತರವಾಗಿ ಕಿರುಕುಳ ನೀಡುತ್ತಿರುತ್ತಾನೆ. ಒಮ್ಮೆ ದೂರು ನೀಡಿ ಜೈಲಿಗೂ ಹಾಕಿಸಲಾಗಿರುತ್ತದೆ. ಜೈಲಿನಿಂದ ಬಿಡುಗಡೆಯಾಗುವ ವೇಳೆ ಮತ್ತೆ ಸುಶ್ಮಿತಾ ತಂಟೆಗೆ ಹೋಗುದಂತೆ ಆಪ್ತ ಸಮಾಲೋಚನೆ ನೀಡಿಯೂ ಕಳುಹಿಸಲಾಗಿರುತ್ತದೆ.

    ಆದರೂ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳದ ಚಿನ್ನ, ಸುಶ್ಮಿತಾಗೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದಿರುತ್ತಾನೆ. ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯನ್ನು ಮುಗಿಸಿದ ಸುಶ್ಮಿತಾ ತನ್ನ ಸಹೋದರ ಸುನೀಲ್​ ಜತೆ ಶುಕ್ರವಾರ 7.30ರ ಸುಮಾರಿಗೆ ಮನೆಗೆ ಬರುತ್ತಾಳೆ. ಈ ವೇಳೆ ಸುಶ್ಮಿತಾ ತಾಯಿ ಮಗಳಿಗೆ ಟೀ ಮಾಡಿ ಕೊಡಲೆಂದು ಅಂಗಡಿಗೆ ತೆರಳಿರುತ್ತಾರೆ. ಇತ್ತ ಸುನೀಲ್​ ಸಹ ಹೋಟೆಲ್​ಗೆ ತೆರಳುತ್ತಾನೆ.

    ಮನೆಯಲ್ಲಿ ಸುಶ್ಮಿತಾ ಮನೆಯಲ್ಲಿ ಒಬ್ಬಳೆ ಇರುವುದನ್ನು ಮನಗಂಡ ಚಿನ್ನ, ಮನೆಯ ಛಾವಣಿ ಮೇಲೇರಿ ಬಾಗಿಲು ಮುರಿದು ಒಳಗೆ ನುಗ್ಗುತ್ತಾನೆ. ಬರುವಾಗ ಜತೆಯಲ್ಲಿ ಚಾಕುವೊಂದನ್ನು ಹಿಡಿದು ಬಂದಿರುತ್ತಾನೆ. ಈ ವೇಳೆ ಸುಶ್ಮಿತಾ ಕೋಣೆಯಲ್ಲಿ ಮಲಗಿರುತ್ತಾಳೆ. ತಕ್ಷಣ ಅವಳ ಮೇಲೆ ದಾಳಿ ಮಾಡುವ ಚಿನ್ನ ಚಾಕುವಿನಿಂದ ಇರಿದು ಕೊಲೆ ಮಾಡುತ್ತಾನೆ. ಇತ್ತ ಹಾಲು ತರಲು ಹೋಗಿದ್ದ ತಾಯಿ ಮನೆಗೆ ಬಂದು ನೋಡಿದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಆಘಾತಕ್ಕೆ ಒಳಗಾಗುತ್ತಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

    ಯಾರಿಗೂ ಹೇಳದೆ ಮಕ್ಕಳೊಂದಿಗೆ ಮನೆಯಿಂದ ಹೊರಟ ದಂಪತಿಯ ಬದುಕು ದುರಂತ ಅಂತ್ಯ!

    ಹದಗೆಟ್ಟ ಆರೋಗ್ಯ ಸ್ಥಿತಿ: ಕರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

    ಇನ್ನು 24*7 ಬ್ಯಾಂಕ್ ಸೇವೆ; ಆ.1ರಿಂದ ಗ್ರಾಹಕರಿಗೆ ಎನ್​ಎಸಿಎಚ್ ಸೌಲಭ್ಯ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts