More

    ವೈರಲ್​ ಆಯ್ತು ಶಶಿ ತರೂರ್​ ಇಡುಗಾಯಿ ಒಡೆಯೋ ಫೋಟೋ: ಕಾಂಗ್ರೆಸ್ ನಾಯಕನ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ

    ಕೊಚ್ಚಿ: ಕಾಂಗ್ರೆಸ್​​​ ಮುಖಂಡ ಶಶಿ ತರೂರ್​ ಅವರು ಹಿಡುಗಾಯಿ ಹೊಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿದ್ದು, ಮೀಮ್ಸ್​​ ಫೋಟೋಗಳನ್ನು ಸ್ವತಃ ಶಶಿ ತರೂರ್​ ಅವರು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಾಣು ತೆಂಗಿನಕಾಯಿಯನ್ನು ಶಾಸ್ತ್ರೀಯವಾಗಿ ಒಡೆಯುವ ಚಿತ್ರವನ್ನು ಬಳಸಿ ಈ ಮೀಮ್ಸ್​ಗಳನ್ನು ಹರಿಬಿಡಲಾಗಿದೆ. ಈ ಫೋಟೋಗಳನ್ನು ಯಾರು ಹರಿಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ನೋಡಲು ತುಂಬಾ ತಮಾಷೆಯಾಗಿವೆ. ವೈರಲ್​ ಆಗಿರುವ ಫೋಟೋಗಳಲ್ಲಿ ಇವು ನನ್ನ ಕೆಲವು ಮೆಚ್ಚಿನವುಗಳು ಎಂದು ಶಶಿ ತರೂರ್​ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಅಂದಹಾಗೆ ತರೂರ್​ ಅವರು ಹಿಡುಗಾಯಿ ಒಡೆಯುತ್ತಿರುವ ಫೋಟೋವನ್ನು ಟೀ ತಯಾರಕ, ಡ್ಯಾನ್ಸರ್​, ಬೌಲರ್​, ಕುಸ್ತಿಪಟು ಹಾಗೂ ಜಾವೆಲಿನ್​ ಥ್ರೂ ನಿರಜ್​ ಚೋಪ್ರಾ ರೀತಿ ಮೀಮ್ಸ್​ ಮಾಡಿ ಹರಿಬಿಟ್ಟಿದ್ದಾರೆ.

    ಅನೇಕ ವರ್ಷಗಳ ಬಳಿಕ ಶಶಿ ತರೂರ್​ ಈ ವರ್ಷ ತಮ್ಮ ತವರು ಮನೆ ಪಲಕ್ಕಾಡ್​ನ ಎಲವಂಚೇರಿಯಲ್ಲಿ ಓಣಂ ಹಬ್ಬ ಆಚರಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ತಮ್ಮೂರಿನ ಭಗವತಿ ದೇವಸ್ಥಾನಕ್ಕೆ ತೆರಳಿ ಹಿಡುಗಾಯಿ ಹೊಡೆದಿರುವು ಫೋಟೋವನ್ನು ಶಶಿ ತರೂರ್​ ಟ್ವೀಟ್ ಮಾಡಿಕೊಂಡಿದ್ದರು. ಅದೇ ಫೋಟೋವನ್ನು ಬಳಸಿಕೊಂಡು ಟ್ರೋಲಿಗರು ಮೀಮ್ಸ್​ಗಳನ್ನು ಮಾಡಿ ಹರಿಬಿಟ್ಟಿದ್ದಾರೆ. ​

    ಮೀಮ್ಸ್​ ಫೋಟೋಗಳನ್ನು ಸ್ವಲ್ಪವೂ ಸಂಕೋಚ ಪಟ್ಟುಕೊಳ್ಳದೇ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ಶಶಿ ತರೂರ್​ ಅವರ ಕ್ರೀಡಾ ಮನೋಭಾವ ಹಾಗೂ ಹಾಸ್ಯ ಪ್ರಜ್ಞೆಗೆ ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಮೀಮ್ಸ್​ಗಳನ್ನು ಮಾಡಿರುವ ಟ್ರೋಲಿಗರು ಸೃಜನಾತ್ಮಕತೆಗೂ ಬಹುಪರಾಕ್​ ಹೇಳಿದ್ದಾರೆ. (ಏಜೆನ್ಸೀಸ್​)

    ನನ್ನ ಗಂಡನನ್ನು ಬಂಧಿಸಬೇಡಿ! ಶೀಲ ಶಂಕಿಸಿ ಗುಪ್ತಾಂಗವನ್ನೇ ಹೊಲಿದ್ರೂ ಪಾಪಿ ಪತಿಯನ್ನು ಬಿಟ್ಟುಕೊಡದ ಪತ್ನಿ

    ಮೈಸೂರು ಗ್ಯಾಂಗ್​ರೇಪ್​ ಪ್ರಕರಣ: ಪರೀಕ್ಷೆ ಬರೆಯದೆ ಪೊಲೀಸ್​ ಬಲೆಗೆ ಬಿದ್ದ ನಾಲ್ವರು ಆರೋಪಿಗಳು

    ಸಿಎಂ ಯೋಗಿ ಆದಿತ್ಯಾನಾಥ್​ಗೆ ಸವಾಲು ಹಾಕಿದ್ದ ಮಾಜಿ ಐಪಿಎಸ್​ ಅಧಿಕಾರಿಯನ್ನು ಹೊತ್ತೊಯ್ದ ಯುಪಿ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts