More

    ಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್​. ಶಂಕರ್ ಅಸಮಾಧಾನ ಸ್ಫೋಟ

    ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಆರ್ ಶಂಕರ್ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

    ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಪರಿಷತ್​ ಚುನಾವಣೆಗೆ ಟಿಕೆಟ್​ ಸಿಗಲಿದೆ ಎಂಬ ಭರವಸೆಯನ್ನು ಶಂಕರ್​ ಹೊಂದಿದ್ದರು. ಆದರೆ, ರಾತ್ರಿ ಸವದಿ ಹೆಸರು ಫೈನಲ್ ಮಾಡುತ್ತಿದ್ದಂತೆ, ಶಂಕರ್​ ಆಪರೇಷನ್ ಕಮಲ ರೂವರಿಗಳನ್ನು ಸಂಪರ್ಕಿಸಿದ್ದಾರೆ ಎಂದು ರಾಜಕೀಯ ಮೂಲಗಳು ಮಾಹಿತಿ ನೀಡಿವೆ.

    ಡಿಸಿಎಂ ಅಶ್ವಥ್ ನಾರಾಯಣ ಮುಂದೆ ಶಂಕರ್​​ ಅಸಮಾಧಾನ ಹೊರಹಾಕಿದದ್ದಾರೆ ಎನ್ನಲಾಗಿದೆ. ಸಂಬಂಧಿ ಬೈರತಿ ಬಸವರಾಜ್ ಮುಂದೆಯು ಬೇಸರ ಹೊರಹಾಕಿದ್ದಾರೆ. ಸಚಿವರಾಗಿದ್ದವರನ್ನು ರಾಜೀನಾಮೆ ಕೊಡಿಸಿ ಆಪರೇಷನ್ ಮಾಡಿದಿರಿ. ಉಪಚುನಾವಣೆಗೆ ಟಿಕೆಟ್ ಕೊಡುವಾಗ ಸಿಎಂ ಮಾತನ್ನು ಪಾಲಿಸಿದೆ. ಪರಿಷತ್ ಸದಸ್ಯ ಮಾಡ್ತೀವಿ ಸುಮ್ಮಿನಿರಿ ಎಂದು ಹೇಳಿದರು. ಆದರೆ ಈಗ ಸವದಿಗೆ ಟಿಕೆಟ್ ಕೊಟ್ಟಿದೀರಾ, ಸರ್ಕಾರ ಬರುವುದಕ್ಕೆ ಕಾರಣರಾದ ನಮ್ಮನ್ನು ಕಡೆಗಣಿಸಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

    ಜುಲೈ ತಿಂಗಳಲ್ಲಿ ನಿಮ್ಮನ್ನ ಸಿಎಂ ಪರಿಗಣಿಸುತ್ತಾರೆ ತಾಳ್ಮೆ ಇಂದ ಇರಿ. ಸವದಿ ಆರು ತಿಂಗಳ ಒಳಗೆ ಪರಿಷತ್ ಸದಸ್ಯರಾಗಬೇಕು ಅನ್ನುವ ಕಾರಣಕ್ಕೆ ಹೈಕಮಾಂಡ್ ಪರಿಗಣಿಸಿದ ಎಂದು ಅಶ್ವಥ್ ನಾರಾಯಣ ಸಾಂತ್ವಾನ ಹೇಳಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts