More

    ಶೇನ್​ ವಾರ್ನ್​ ತಂಗಿದ್ದ ಲಕ್ಷುರಿ ರೂಮಿನಲ್ಲಿ ರಕ್ತದ ಕಲೆ: ಥಾಯ್ಲೆಂಡ್​ ಪೊಲೀಸರ ಸ್ಫೋಟಕ ಹೇಳಿಕೆ

    ಬ್ಯಾಂಕಾಕ್​: ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ (52) ಅವರ ಅಕಾಲಿಕ ಮರಣವು ಪ್ರಪಂಚದಾದ್ಯಂತದ ಅವರ ಅಭಿಮಾನಿಗಳು ಮತ್ತು ಕ್ರೀಡಾ ಪ್ರೇಮಿಗಳು ಘಾಸಿಗೊಳಿಸಿದೆ. ಶೇನ್​ ವಾರ್ನ್​ ಅವರು ವಿಹಾರಕ್ಕೆಂದು ಥಾಯ್ಲೆಂಡ್​ನಲ್ಲಿ ಬೀಡು ಬಿಟ್ಟಿರುವಾಗ ಮಾರ್ಚ್ 4 ರಂದು ಮರಣ ಹೊಂದಿದರು. ವಾರ್ನ್​ ತಂಗಿದ್ದ ಕೋಣೆಯ ನೆಲದ ಮೇಲೆ ರಕ್ತದ ಕಲೆಗಳನ್ನು ಥಾಯ್ಲೆಂಡ್​ ಪೊಲೀಸರು ಪತ್ತೆ ಮಾಡಿರುವುದಾಗಿ ವರದಿಯಾಗಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಶೇನ್ ವಾರ್ನ್ ಅವರು ಮೃತಪಟ್ಟಿರುವುದಾಗಿ ಮಾರ್ಚ್ 4ರಂದು ಥಾಯ್ ಇಂಟರ್ನ್ಯಾಷನಲ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದರು. ಅದಕ್ಕೂ ಮುನ್ನ ಕೋಣೆಯಲ್ಲಿ ಕುಸಿದುಬಿದ್ದಿದ್ದ ವಾರ್ನ್​ ಅವರನ್ನು ಎಚ್ಚರಗೊಳಿಸಲು ಅವರ ಸ್ನೇಹಿತರು ವ್ಯರ್ಥ ಪ್ರಯತ್ನ ಮಾಡಿದ್ದರು. ವಾರ್ನ್ ತಂಗಿದ್ದ ಕೋಣೆಯಲ್ಲಿ ನೆಲದ ಮೇಲೆ ರಕ್ತ ಮತ್ತು ಸ್ನಾನದ ಟವೆಲ್‌ಗಳನ್ನು ಥಾಯ್ ಪೊಲೀಸರು ಪತ್ತೆ ಹಚ್ಚಿದ್ದಾರೆಂದು ಆಸ್ಟ್ರೇಲಿಯದ ಮಾಧ್ಯಮವೊಂದು ಬಹಿರಂಗಪಡಿಸಿದೆ. ವಾರ್ನ್​ ಕೋಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತ ಕಂಡುಬಂದಿದೆ. ಸಿಪಿಆರ್ ಅನ್ನು ಪ್ರಾರಂಭಿಸಿದಾಗ, ಮೃತ ವ್ಯಕ್ತಿಗೆ ಕೆಮ್ಮು, ದ್ರವ ಮತ್ತು ರಕ್ತಸ್ರಾವವಾಗಿತ್ತು ಎಂದು ವೈದ್ಯರು ತಿಳಿಸಿದ್ದು, ಇದು ಸಹಜ ಸಾವು ಎಂದಿದ್ದಾರೆ.

    ವಾರ್ನ್​ ತಂಗಿದ್ದ ಕೋಣೆಯಲ್ಲಿ ರಕ್ತ ಪತ್ತೆಯಾಗಿದ್ದರೂ ಸಹ ಅವರ ಸಾವಿನಲ್ಲಿ ಏನೋ ನಿಗೂಢ ನಡೆದಿದೆ ಎಂಬ ವಿಚಾರವನ್ನು ಕೊಹ್ ಸಮುಯಿಯ ಬೋ ಫುಟ್ ಸ್ಟೇಷನ್‌ನ ಪೊಲೀಸ್ ಅಧೀಕ್ಷಕರು ತಳ್ಳಿಹಾಕಿದರು. ಏಕೆಂದರೆ, ವಾರ್ನ್​ ಇತ್ತೀಚೆಗಷ್ಟೇ ತನ್ನ ಹೃದಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಿದ್ದರು. ಆಸ್ತಮಾದಿಂದಲೂ ಬಳಲಿದ್ದ ವಾರ್ನ್ ಥಾಯ್ಲೆಂಡ್‌ಗೆ ತೆರಳುವುದಕ್ಕೆ ಮುನ್ನ ವೈದ್ಯರನ್ನು ಭೇಟಿಯಾಗಿ ಹೃದಯದ ಪರೀಕ್ಷೆಗೂ ಒಳಗಾಗಿದ್ದರು ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದಾರೆ.

    ವಾರ್ನ್ ಅವರ ಮ್ಯಾನೇಜರ್ ಜೇಮ್ಸ್ ಎರ್ಸ್‌ಕಿನ್ ಪ್ರಕಾರ, ವಾರ್ನ್ ಥಾಯ್ಲೆಂಡ್‌ಗೆ ತೆರಳುವುದಕ್ಕೆ ಮುನ್ನ 2 ವಾರಗಳ ಕಾಲ ದ್ರವ ಆಹಾರವನ್ನು ಮಾತ್ರ ತೆಗೆದುಕೊಳ್ಳುವ ಕಠಿಣ ಡಯೆಟ್ ಪಾಲಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. 14 ದಿನಗಳ ಕಾಲ ಅವರು ಕೇವಲ ದ್ರವ ಆಹಾರ ತೆಗೆದುಕೊಂಡಿದ್ದರು. ಹಿಂದೆಯೂ 3-4 ಬಾರಿ ಇಂಥದ್ದೇ ಡಯೆಟ್ ಮಾಡಿದ್ದರು. ಬೆಣ್ಣೆ ಸಹಿತ ಬನ್ ಮತ್ತು ಜ್ಯೂಸ್‌ಗಳನ್ನು ಮಾತ್ರ ಸೇವಿಸುತ್ತಿದ್ದರು. ಜತೆಗೆ ಸಾಕಷ್ಟು ಸಿಗರೇಟ್‌ಗಳನ್ನು ಸೇದುತ್ತಿದ್ದರು. ಸಾವಿಗೀಡಾಗುವುದಕ್ಕೆ ಮುನ್ನ ಇನ್‌ಸ್ಟಾಗ್ರಾಂನಲ್ಲಿ ವಾರ್ನ್ ತಮ್ಮ ಹಳೆಯ ಫಿಟ್ ಆಗಿರುವ ಚಿತ್ರವನ್ನು ಪ್ರಕಟಿಸಿದ್ದರು ಮತ್ತು ದೇಹ ತೂಕವನ್ನು ಕಳೆದುಕೊಂಡು ಮತ್ತೆ ಶೀಘ್ರವೇ ಈ ಚಿತ್ರದಲ್ಲಿರುವಂತೆ ಆಗುವೆ ಎಂದು ಬರೆದುಕೊಂಡಿದ್ದರು. ದ್ರವ ಆಹಾರದ ಡಯೆಟ್‌ನಿಂದಾಗಿಯೇ ಅವರಿಗೆ ಹೃದಯಾಘಾತದ ಅಪಾಯ ಹೆಚ್ಚಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಸ್ಪಿನ್ ದಿಗ್ಗಜ ಶೇನ್ ವಾರ್ನ್‌ಗೆ ಮುಳುವಾಯಿತೇ ದ್ರವ ಆಹಾರದ ಪಥ್ಯ?

    ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್​: ರಾಜ್ಯಾದ್ಯಂತ ಏಕಕಾಲದಲ್ಲಿ 78 ಕಡೆ ಎಸಿಬಿ ದಾಳಿ

    ಬಿಗ್​ಬಾಸ್​ ನಿರೂಪಕರ ವಿರುದ್ಧವೇ ನಾಲಿಗೆ ಹರಿಬಿಟ್ಟ ಸ್ಪರ್ಧಿ: ಸಿಂಬುಗೆ ಅವಮಾನ, ಅಭಿಮಾನಿಗಳ ಆಕ್ರೊಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts