More

    ಯುವತಿಯ ದ್ವಿಚಕ್ರ ವಾಹನದ ನಂಬರ್​​ ಪ್ಲೇಟ್​ನಲ್ಲಿ ಸೆಕ್ಸ್ ಪದ! RTO ಎಡವಟ್ಟಿನಿಂದ ಮಾನಸಿಕ ಆಘಾತ

    ನವದೆಹಲಿ: ದ್ವಿಚಕ್ರ ವಾಹನದ ನಂಬರ್​ ಪ್ಲೇಟ್​ ಮೇಲಿರುವ ಸೆಕ್ಸ್ ಎಂಬ ಪದವನ್ನು ಬದಲಾಯಿಸುವಂತೆ​ ದೆಹಲಿ ಆರ್​ಟಿಒಗೆ ದೆಹಲಿ ಮಹಿಳಾ ಆಯೋಗ ನೋಟಿಸ್​ ಹೊರಡಿಸಿದೆ. ಇತ್ತೀಚೆಗಷ್ಟೇ ಸ್ಕೂಟಿಯನ್ನು ಖರೀದಿಸಿದ ಯುವತಿಯೊಬ್ಬಳು ತನ್ನ ವಾಹನದ ನೋಂದಣಿ ಸಂಖ್ಯೆಯ ಮೇಲೆ ‘ಸೆಕ್ಸ್​’ ಎಂಬ ಪದವನ್ನು ಹೊಂದಿರುವ ನಂಬರ್​ ಹಂಚಿಕೆ ಸರಣಿಯನ್ನು ನೋಡಿ ಮಹಿಳಾ ಆಯೋಗದ ಗಮನಕ್ಕೆ ತಂದಿದ್ದಳು.

    ಈ ನಂಬರ್​ ಸರಣಿಯನ್ನು ಹಂಚಿಕೆ ಮಾಡಿದ್ದರಿಂದ ನಾನು ತೀವ್ರ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದೇನೆ. ಪ್ರತಿದಿನ ಅನೇಕರು ನನ್ನನ್ನು ರೇಗಿಸುತ್ತಿದ್ದಾರೆ. ವಾಹನವಿದ್ದರೂ ಎಲ್ಲಿಯೂ ಓಡಾಡದಂತಹ ಪರಿಸ್ಥಿತಿ ಎದುರಿಸುತ್ತಿದ್ದೇನೆ. ನಂಬರ್​ ಪ್ಲೇಟ್​ ನೋಡಿದವರೆಲ್ಲ ನನ್ನನ್ನು ಬೇರೆ ದೃಷ್ಟಿಯಲ್ಲಿ ನೋಡುತ್ತಿದ್ದಾರೆ. ಆರ್​ಟಿಒ ಮಾಡಿರುವ ಎಡವಟ್ಟನಿಂದ ಇದೀಗ ನಾನು ಮಾನಸಿಕ ಸಂಕಟ ಅನುಭವಿಸುವಂತಾಗಿದೆ ಎಂದು ಮಹಿಳಾ ಆಯೋಗದ ಮುಂದೆ ಯುವತಿ ನೋವು ತೋಡಿಕೊಂಡಿದ್ದಾಳೆ.

    ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗ ದೆಹಲಿ ಸಾರಿಗೆ ಇಲಾಖೆಗೆ ನೋಟಿಸ್​ ಹೊರಡಿಸಿದ್ದು, ತಕ್ಷಣ ನಂಬರ್​ ಸರಣಿಯನ್ನು ಬದಲಾಯಿಸುವಂತೆ ಹೇಳಿದೆ.

    ಈ ಬಗ್ಗೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್​​, ‘ಸೆಕ್ಸ್​’ ಎಂಬ ಪದವನ್ನು ಹೊಂದಿರುವ ನಂಬರ್​ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ಸಾರಿಗೆ ಇಲಾಖೆಯನ್ನು ಕೇಳಿದ್ದೇನೆ. ಯುವತಿ ವಿಚಾರದಲ್ಲಿ ಜನರು ತುಂಬಾ ಕ್ಷುಲ್ಲಕವಾಗಿರುವುದು ತುಂಬಾ ದುರದೃಷ್ಟಕರ ಸಂಗತಿಯಾಗಿದೆ. ಯುವತಿ ತುಂಬಾ ಕಿರುಕುಳವನ್ನು ಎದುರಿಸುತ್ತಿದ್ದಾಳೆ. ನಾಲ್ಕು ದಿನಗಳ ಒಳಗೆ ಈ ಸಮಸ್ಯೆಯನ್ನು ಬಗೆಹರಿಸಲು ಆರ್​ಟಿಒಗೆ ಸಮಯ ನೀಡಿದ್ದೇನೆಂದು ಹೇಳಿದ್ದಾರೆ.

    ದೆಹಲಿಗೆ ಡಿಎಲ್ ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ, ನಂತರ ವಾಹನದ ಪ್ರಕಾರಕ್ಕೆ ಒಂದು ಅಕ್ಷರ, ನಂತರ ಇತ್ತೀಚಿನ ಸರಣಿಯನ್ನು ಸೂಚಿಸುವ 2 ಅಕ್ಷರಗಳು, ನಂತರ ಆ ಸರಣಿಯಲ್ಲಿ 4 ಅಂಕಿಗಳ ಅನನ್ಯ ಸಂಖ್ಯೆ. ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘S’ ಅಕ್ಷರದಿಂದ ಸೂಚಿಸಲಾಗುತ್ತದೆ.‘

    ದೆಹಲಿಯ ನಂಬರ್ ಪ್ಲೇಟ್‌ಗಳು ಈ ಕೆಳಗಿನ ಸಂಪ್ರದಾಯವನ್ನು ಅನುಸರಿಸುತ್ತವೆ
    ದೆಹಲಿಗೆ DL ನಂತರ ಜಿಲ್ಲೆಯನ್ನು ಪ್ರತಿನಿಧಿಸುವ ಸಂಖ್ಯೆ ಇರುತ್ತದೆ. ನಂತರ ವಾಹನದ ಪ್ರಕಾರವನ್ನು ಅನುಸರಿಸಿ ಒಂದು ಪದ ಇರುತ್ತದೆ. ಬಳಿಕ ಇತ್ತೀಚಿನ ಸರಣಿಯನ್ನು ಸೂಚಿಸುವ 2 ಅಕ್ಷರಗಳನ್ನು ನೀಡಲಾಗುತ್ತದೆ. ಆ ಸರಣಿಯಲ್ಲಿ 4 ಅಂಕಿಗಳ ಅನನ್ಯ ಸಂಖ್ಯೆಯು ಅನುಸರಿಸುತ್ತದೆ. ಅಂದಹಾಗೆ ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ‘S’ ಅಕ್ಷರದಿಂದ ಸೂಚಿಸಲಾಗುತ್ತದೆ. ಆದ್ದರಿಂದ, ಒಂದು ವಿಶಿಷ್ಟವಾದ ನಂಬರ್ ಪ್ಲೇಟ್ ಹೀಗಿರುತ್ತದೆ. DL 2 C AD 1234. ದೆಹಲಿಗೆ DL, 2 ಪೂರ್ವ ಜಿಲ್ಲೆಗೆ, C ಫಾರ್ ಕಾರ್ ಅಥವಾ ದ್ವಿಚಕ್ರ ವಾಹನಗಳಿಗೆ S, ಸಂಖ್ಯೆ ನಂತರದ ಸಂಖ್ಯೆಯ ಸರಣಿಗೆ AD ಎಂದು ಸೂಚಿಸಲಾಗುತ್ತದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್‌ಗಳಲ್ಲಿ ‘ಎಸ್’ ಅಕ್ಷರದ ನಂತರ ‘ಇಎಕ್ಸ್’ ಅಕ್ಷರವಿದೆ. (ಏಜೆನ್ಸೀಸ್​)

    ಅಮೇಠಿಯಲ್ಲಿ ಉತ್ಪಾದನೆಯಾಗಲಿದೆ ಎಕೆ-203 ಗನ್: ಮೂರು ಫುಟ್ಬಾಲ್ ಮೈದಾನದಷ್ಟು ದೂರ ಸಿಡಿಯುವ ಸಾಮರ್ಥ್ಯ…

    ಮೂರು ದಿನ ಹೊಳೆಯಲಿವೆ ಗುರು, ಶುಕ್ರ, ಶನಿ..

    ಮಕ್ಕಳಿಗೂ ಒಮಿಕ್ರಾನ್ ಕಂಟಕ: ಹತ್ತು ದಿನದಲ್ಲಿ ರಾಜ್ಯದ 576 ಚಿಣ್ಣರಿಗೆ ಕೋವಿಡ್ ಸೋಂಕು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts