More

    ಗುಜರಾತ್​ ಗಲಭೆ ಕೇಸ್​: ಪ್ರಧಾನಿ ಮೋದಿಗೆ ಕ್ಲೀನ್​ ಚಿಟ್​ ನೀಡಿ, ಹೈಕೋರ್ಟ್​ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್​

    ನವದೆಹಲಿ: ಗುಜರಾತ್​ ಗಲಭೆ ಪ್ರಕರಣ ಸಂಬಂಧ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್​, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿದೆ.

    ಗುಜರಾತ್​ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ಮೋದಿ ಸೇರಿದಂತೆ 63 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಘಟನೆ ಸಂಬಂಧ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿ, ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್​ ನಾಯಕ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಫ್ರಿ ಗುಜರಾತ್​ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿ, ಎಸ್​ಐಟಿ ತನಿಖಾ ವರದಿಯನ್ನು ಎತ್ತಿಹಿಡಿದಿತ್ತು.

    2002ರ ಫೆಬ್ರವರಿ 28 ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಎಹ್ಸಾನ್ ಜಾಫ್ರಿ ಕೊಲ್ಲಲ್ಪಟ್ಟರು.

    ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ​ ಆದೇಶವನ್ನು ಪ್ರಶ್ನಿಸಿ ಜಾಕಿಯಾ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಇಂದು (ಜೂನ್​ 24) ತೀರ್ಪು ನೀಡಿರುವ ಸುಪ್ರೀಂಕೋರ್ಟ್​, ಜಾಕಿಯಾ ಅವರ ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಪ್ರಧಾನಿ ಮೋದಿ ಅವರಿಗೆ ಗುಜರಾತ್​ ಗಲಭೆ ಪ್ರಕರಣದಲ್ಲಿ ಕ್ಲೀನ್​ ಚಿಟ್​ ನೀಡಿದೆ.

    ಎಸ್‌ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜಾಕಿಯಾ ಅವರ ಅರ್ಜಿಯ ಕುರಿತು ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂಕೋರ್ಟ್ ಅನುಮೋದಿಸಬೇಕು, ಇಲ್ಲದಿದ್ರೆ ಅರ್ಜಿಯಲ್ಲಿ ಎರಡನೇ ಅರ್ಜಿದಾರರ ಸಂಖ್ಯೆಯಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಕೆಲವು ಉದ್ದೇಶಗಳಿಂದ ಈ ಪ್ರಕರಣ ಅಂತ್ಯವಿಲ್ಲದ ಕಸರತ್ತಿಗೆ ಕಾರಣವಾಗಬಹುದು ಎಂದು ಪೀಠಕ್ಕೆ ತಿಳಿಸಿದರು.

    ಜಾಕಿಯಾ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಎಸ್‌ಐಟಿ ತನಿಖೆ ನಡೆಸಲಿಲ್ಲ, ಬದಲಾಗಿ ಸಹಕಾರದ ಕಸರತ್ತು ನಡೆಸಿದೆ ಮತ್ತು ಪಿತೂರಿದಾರರನ್ನು ರಕ್ಷಿಸಲು ಅದರ ತನಿಖೆ ಲೋಪಗಳಿಂದ ಕೂಡಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದರು. ಎಸ್‌ಐಟಿ ಅಧಿಕಾರಿಗಳು ಮತ್ತು ಪೊಲೀಸರಿಗೆ “ಅತ್ಯುತ್ತಮ ಬಹುಮಾನ ನೀಡಲಾಗಿದೆ” ಎಂದು ಆರೋಪಿಸಿದರು.

    2002 ರಲ್ಲಿ ಗುಜರಾತ್‌ನಲ್ಲಿ ನಡೆದ ಮೂರು ದಿನಗಳ ಹಿಂಸಾಚಾರದಲ್ಲಿ 1,000 ಕ್ಕೂ ಹೆಚ್ಚು ಜನರು ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಕೊಲ್ಲಲ್ಪಟ್ಟರು. (ಏಜೆನ್ಸೀಸ್​)

    ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂವರ ಮೃತದೇಹ: ಸಿಸಿಟಿವಿ ಕ್ಯಾಮೆರಾ ಹಿಂದೆ ಬಿದ್ದ ಪೊಲೀಸರು!

    ಮಗನಿಗೆ PSI ಕೆಲ್ಸ ಕೊಡಿಸೋ ಆಸೆಗೆ ಬಿದ್ದು 30 ಲಕ್ಷ ರೂ. ಕಳ್ಕೊಂಡ ಮಂಡ್ಯ ರೈತ: ಬಡ್ಡಿ ಕಟ್ಟಲಾಗದೇ ಕಣ್ಣೀರಿಡ್ತಿದೆ ಕುಟುಂಬ

    ಸತತ 5 ದಿನ ಪೆಟ್ರೋಲ್​ ಬಂಕ್​ ಮುಂದಿನ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ದುರಂತ ಸಾವು! ಲಂಕಾದಲ್ಲಿ ದುರ್ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts