ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂವರ ಮೃತದೇಹ: ಸಿಸಿಟಿವಿ ಕ್ಯಾಮೆರಾ ಹಿಂದೆ ಬಿದ್ದ ಪೊಲೀಸರು!

ಹೈದರಾಬಾದ್​: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವತಿ ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ತೆಲಂಗಾಣದ ಔಶಾಪುರದಲ್ಲಿ ನಡೆದಿದೆ. ಇದೊಂದು ಹಿಟ್​ ಆ್ಯಂಡ್​ ರನ್​ ಕೇಸ್​ ಆಗಿದ್ದು, ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲಿರುವ ಟೋಲ್​ ಪ್ಲಾಜಾ ಸೇರಿದಂತೆ ಇತರೆ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಔಶಾಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 163ರಲ್ಲಿ ಗುರುವಾರ ನಸುಕಿನ ಜಾವವೇ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಜನಗಾಂವ್ ಜಿಲ್ಲೆಯ​ ದೇವರುಪ್ಪುಳ ಮಂಡಲದ ಸಿಂಗರಾಜುಪಲ್ಲಿ ಗ್ರಾಮದ ನಿವಾಸಿ … Continue reading ಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಪತ್ತೆಯಾಯ್ತು ಮೂವರ ಮೃತದೇಹ: ಸಿಸಿಟಿವಿ ಕ್ಯಾಮೆರಾ ಹಿಂದೆ ಬಿದ್ದ ಪೊಲೀಸರು!