More

    ಹುತಾತ್ಮ ಸಾಯಿತೇಜ ಸಾಮಾನ್ಯ ಯೋಧರಲ್ಲ: ಮಾಜಿ ಸೇನಾಧಿಕಾರಿ ಹೇಳಿದ್ದನ್ನು ಕೇಳಿದ್ರೆ ಮೈನವಿರೇಳುತ್ತೆ

    ಹೈದರಾಬಾದ್​: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟ 13 ಮಂದಿ ಯೋಧರ ಪೈಕಿ ಆಂಧ್ರಪ್ರದೇಶದ ಲ್ಯಾನ್ಸ್​ ನಾಯ್ಕ​ ಸಾಯಿ ತೇಜ್​ ಕೂಡ ಒಬ್ಬರು. ಇವರ ನಿಧನ ಭಾರತೀಯ ಸೇನೆಗೆ ತುಂಬಲಾರದ ನಷ್ಟವೆಂದು ಹೈದರಾಬಾದ್​ನ ಮಾಜಿ ಆರ್ಮಿ ಮೇಜರ್ ಭರತ್​ ಅಸಿಂಗ್​ ರೆಡ್ಡಿ ಹೇಳಿದ್ದಾರೆ. ​

    27 ವರ್ಷದ ಸಾಯಿತೇಜ್​ ಅವರು ಆಂಧ್ರದ ಚಿತ್ತೂರು ಜಿಲ್ಲೆಯ ರೆಗಡಿಪಲ್ಲೇ ಗ್ರಾಮದ ನಿವಾಸಿ. ಚಾಲಕನಾಗಿ ವೃತ್ತಿಯನ್ನು ಆರಂಭಿಸಿ, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಬಿಪಿನ್​ ರಾವತ್​​​ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡ ಸಾಯಿತೇಜ್​ ಜೀವನ ಪಯಣವೇ ರೋಚಕ. ಅತ್ಯಂತ ಕಠಿಣ ತರಬೇತಿಗಳನ್ನು ಎದುರಿಸಿ ಎಲ್ಲರ ಕೈಯಲ್ಲೂ ಸೈ ಎನಿಸಿಕೊಂಡಿದ್ದರು. ಆದರೆ, ಹೆಲಿಕಾಪ್ಟರ್​ ಪತನದ ಸಮಯದಲ್ಲಿ ಬಿಪಿನ್​ ರಾವತ್​ ಜತೆಯಲ್ಲೇ ಸಾಯಿತೇಜ ವೀರಮರಣ ಹೊಂದಿರುವುದು ದೇಶದಕ್ಕೆ ತುಂಬಲಾರದ ನಷ್ಟವಾಗಿದೆ.

    ಸಾಯಿತೇಜ್​ ಬಗ್ಗೆ ಮಾತನಾಡಿರುವ ಭರತ್​ ಅಸಿಂಗ್​ ರೆಡ್ಡಿ, ಪ್ಯಾರಚೂಟ್​ ರೆಜಿಮೆಂಟ್​ ವಿಶೇಷ ಪಡೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಸಾಯಿತೇಜ ಕೂಡ ಅಲ್ಲಿ ಕೆಲಸ ಮಾಡಿದ್ದರು. ಅವರು ನನ್ನ ಸಹೋದರ. ಎಲ್ಲ ಯೋಧರು ಕೂಡ ಪ್ಯಾರಾ ಕಮ್ಯಾಂಡೋಗಳಾಗಲು ಸಾಧ್ಯವಿಲ್ಲ. ಯಾರು ಎದೆಗಾರಿಕೆಯನ್ನು ಹೊಂದಿರುತ್ತಾರೋ ಮತ್ತು ಪರಿಶ್ರಮ ಪಡುತ್ತಾರೋ ಅವರನ್ನು ಆಯ್ಕೆ ಮಾಡಿಕೊಂಡು ಕಠಿಣ ತರಬೇತಿ ನೀಡಲಾಗುತ್ತದೆ. ಒಟ್ಟು ಸೇನೆಯಲ್ಲಿ ಕೇವಲ 10 ರಷ್ಟು ಕಮ್ಯಾಂಡೋಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಆರ್ಮಿಯಲ್ಲಿ ಪ್ಯಾರಾ ಕಮ್ಯಾಂಡೋಗಳು ತುಂಬಾ ಮುಖ್ಯ. ಹೀಗಾಗಿ ಸಾಯಿತೇಜ ನಿಧನ ದೇಶಕ್ಕೆ ತುಂಬಲಾರದ ನಷ್ಟವೆಂದು ಭರತ್​ ರೆಡ್ಡಿ ಹೇಳಿದ್ದಾರೆ.

    ಓರ್ವ ದಿಟ್ಟ ಯೋಧನನ್ನು ಕಳೆದುಕೊಂಡ ದೇಶ ಬಡವಾಗಿದೆ. ಅವರ ಕುಟುಂಬಕ್ಕೆ ಆಂಧ್ರ ಪ್ರದೇಶ ಸರ್ಕಾರ ಸಹಾಯ ಮಾಡಬೇಕೆಂದು ಭರತ್​ ರೆಡ್ಡಿ ಅವರು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಂಕ್ರಾಂತಿಗೆ ಬರುವೆ ಎಂದಿದ್ದರು! ಏನೂ ಅರಿಯದ ನನ್ನ ಪುಟ್ಟ ಕಂದಮ್ಮಗಳಿಗೆ ಏನೆಂದು ಹೇಳಲಿ… ಯುವ ಯೋಧನ ಪತ್ನಿಯ ಕಣ್ಣೀರು

    ಬೆತ್ತದಿಂದ ಥಳಿಸಿ ಮಹಿಳೆಯನ್ನ ಕೊಂದ ಪೂಜಾರಿ! ಚನ್ನರಾಯಪಟ್ಟಣದಲ್ಲಿ ನಡೆಯಿತು ಘೋರ ಕೃತ್ಯ

    ಜೂಮ್​ ಕಾಲ್​ನಲ್ಲಿ 900 ಉದ್ಯೋಗಿಗಳನ್ನು ಕೆಲ್ಸದಿಂದ ತೆಗೆದ ಸಿಇಒ ಬಗ್ಗೆ ಆನಂದ್​ ಮಹೀಂದ್ರಾ ಹೇಳಿದ್ದು ಹೀಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts