More

    ಪಾಕ್​ ಮಾರ್ಗವಾಗಿ ಭಾರತಕ್ಕೆ ಬರ್ತಿದ್ದ 1200 ಕೋಟಿ ರೂ. ಮೌಲ್ಯದ ಹೆರಾಯಿನ್​ ಸೀಜ್! 6 ಇರಾನ್​​ ಪ್ರಜೆಗಳ ಬಂಧನ

    ಕೊಚ್ಚಿ: ಅಫ್ಘಾನಿಸ್ತಾನದಲ್ಲಿ ತಯಾರಿಸಿದ ಅಂದಾಜು 1200 ಕೋಟಿ ರೂಪಾಯಿ ಮೌಲ್ಯದ 200 ಕೆಜಿ ಹೆರಾಯಿನ್​ ಅನ್ನು ಭಾರತದ ನೌಕಾಪಡೆ ಹಾಗೂ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ (ಎನ್​ಸಿಬಿ) ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ವಶಕ್ಕೆ ಪಡೆದುಕೊಂಡಿದೆ.

    ಇರಾನ್ ಹಡಗಿನಲ್ಲಿ ಹೆರಾಯಿನ್​ ತುಂಬಿಕೊಂಡು ಪಾಕಿಸ್ತಾನ ಮಾರ್ಗವಾಗಿ ಭಾರತಕ್ಕೆ ತರಲಾಗುತ್ತಿತ್ತು. ಹೆರಾಯಿನ್​ ಅನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು. ಸದ್ಯ ಅಷ್ಟೂ ಡ್ರಗ್ಸ್​ ಅನ್ನು ಸೀಜ್​ ಮಾಡಿರುವ ಅಧಿಕಾರಿಗಳು 6 ಇರಾನ್​​ ಪ್ರಜೆಗಳನ್ನು ಬಂಧಿಸಿದ್ದಾರೆ.

    ಡ್ರಗ್ಸ್ ಅನ್ನು ಜಲನಿರೋಧಕ, ಏಳು ಪದರದ ಪ್ಯಾಕೇಜಿಂಗ್‌ನಲ್ಲಿ ಇರಾನಿನ ಹಡಗಿನಲ್ಲಿ ಸಾಗಿಸಿ, ಅದನ್ನು ಶ್ರೀಲಂಕಾದ ಹಡಗಿಗೆ ವರ್ಗಾಯಿಸಲು ಮುಂದಾಗಿದ್ದರು. ಆದರೆ, ಗುರುವಾರ ಕೇರಳದ ಕೊಚ್ಚಿಯಲ್ಲಿ ನೌಕಾಪಡೆ ಮತ್ತು ಎನ್​ಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ದೊಡ್ಡ ಡ್ರಗ್ಸ್​ ಜಾಲವೇ ಸಿಕ್ಕಿಬಿದ್ದಿದೆ ಎಂದು ಎನ್​ಸಿಬಿಯ ಹಿರಿಯ ಅಧಿಕಾರಿ ಸಂಜಯ್​ ಕುಮಾರ್​ ಸಿಂಗ್​ ತಿಳಿಸಿದ್ದಾರೆ.

    ಡ್ರಗ್ಸ್​ ಪ್ಯಾಕೆಟ್‌ಗಳು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಕಾರ್ಟೆಲ್‌ಗಳಿಗೆ ವಿಶಿಷ್ಟವಾದ ಗುರುತುಗಳು ಮತ್ತು ಪ್ಯಾಕಿಂಗ್ ವಿಶೇಷತೆಗಳನ್ನು ಹೊಂದಿವೆ ಎಂದು ಅಧಿಕಾರಿ ಹೇಳಿದರು. ಕೆಲವು ಡ್ರಗ್ ಪ್ಯಾಕೆಟ್‌ಗಳ ‘ಚೇಳು’ ಸೀಲ್ ಗುರುತುಗಳನ್ನು ಹೊಂದಿದ್ದರೆ, ಇತರವುಗಳು ‘ಡ್ರ್ಯಾಗನ್’ ಸೀಲ್ ಗುರುತುಗಳನ್ನು ಹೊಂದಿದ್ದವು ಎಂದು ತಿಳಿಸಿದರು.

    ಬಹುಶಃ ಹೆರಾಯಿನ್ ಅನ್ನು ಮೊದಲು ಪಾಕಿಸ್ತಾನದಿಂದ ದೋಣಿಯಲ್ಲಿ ಕಳುಹಿಸಲಾಗಿದೆ. ಇದಾದ ಬಳಿಕ ಮಾರ್ಗ ಮಧ್ಯೆ ಇರಾನ್ ಹಡಗಿಗೆ ಡ್ರಗ್ಸ್​ ವಿನಿಮಯ ಮಾಡಲಾಗಿದೆ. ನಂತರ ಶ್ರೀಲಂಕಾದ ಹಡಗಿಗೆ ವಿನಿಮಯ ಮಾಡಿಕೊಳ್ಳುವಷ್ಟರಲ್ಲಿ ಭಾರತೀಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೆ. ಅಲ್ಲದೆ, ಇರಾನ್ ಹಡಗಿನಲ್ಲಿದ್ದ ವ್ಯಕ್ತಿಗಳು ಸಮುದ್ರಕ್ಕೆ ಹಾರಿ ತಪ್ಪಿಸಿಕೊಳ್ಳಲು ಮತ್ತು ಹೆರಾಯಿನ್ ಅನ್ನು ನೀರಿನಲ್ಲಿ ಎಸೆಯಲು ಪ್ರಯತ್ನಿಸಿದರು ಎಂದು ಎನ್‌ಸಿಬಿ ಅಧಿಕಾರಿ ಸಿಂಗ್ ಹೇಳಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಎನ್​ಸಿಬಿ ಬಂಧಿತರ ವಿಚಾರಣೆಯನ್ನು ನಡೆಸುತ್ತಿದೆ. (ಏಜೆನ್ಸೀಸ್​)

    ಪವನ್ ಒಡೆಯರ್ ಬಾಲಿವುಡ್ ಚಿತ್ರ ಶುರು..

    ದಿವ್ಯಾ-ಅರವಿಂದ್ ಅರ್ಧಂಬರ್ಧ ಪ್ರೇಮಕಥೆ; ರೀಲ್​ನಲ್ಲೂ ಒಂದಾದ ರಿಯಲ್ ಜೋಡಿ

    ಹ್ಯಾಟ್ರಿಕ್ ಸಂಭ್ರಮದಲ್ಲಿ ಪ್ರಮೋದ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts