More

    ಇದು ಆರ್​ಆರ್​ಆರ್​ ಚಿತ್ರದ ಅತ್ಯಂತ ಕಳಪೆ ಸಾಧನೆಯಂತೆ! ಜಕ್ಕಣನ ಮೇಲೆ ಅಸಮಾಧಾನ

    ಹೈದರಾಬಾದ್​: ಮಹಾಮಾರಿ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಸ್ಟಾರ್​ ಡೈರೆಕ್ಟರ್​ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ನಟನೆಯ ಬಹುನಿರೀಕ್ಷಿತ “ಆರ್​ಆರ್​ಆರ್”​ ಸಿನಿಮಾ ಮತ್ತೊಮ್ಮೆ ಮುಂದಕ್ಕೆ ಹೋಗಿದೆ.

    ಜನವರಿ 7ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ದೇಶದಲ್ಲಿ ಕರೊನಾ ರೂಪಾಂತರಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಈಗಾಗಲೇ ಶಾಲಾ-ಕಾಲೇಜು ಹಾಗೂ ಥಿಯೇಟರ್​ಗಳು ಬಂದ್​ ಆಗಿವೆ. ಹೀಗಾಗಿ ಆರ್​ಆರ್​ಆರ್​ ಚಿತ್ರವನ್ನು ಮುಂದೂಡಲಾಗಿದೆ. ಬಹಳ ಕಾತರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ.

    ರಾಜಮೌಳಿ ನಿರ್ದೇಶನದ ಸಿನಿಮಾ ಅಂದರೆ ತುಂಬಾ ನಿರೀಕ್ಷೆ ಇರುತ್ತದೆ. ಅದಲ್ಲದೆ, ಆರ್​ಆರ್​ಆರ್​ ಮೇಲೆ ಇನ್ನೂ ಹೆಚ್ಚಿನ ನಿರೀಕ್ಷೆಯಿದೆ. ಅದಕ್ಕೆ ಕಾರಣ ಮೊದಲ ಬಾರಿಗೆ ರಾಮ್​ಚರಣ್​ ಮತ್ತು ಜೂ. ಎನ್​ಟಿಆರ್​ ತೆರೆಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ಕೂಡ ನಡೆಸಿತ್ತು. ಅಷ್ಟರಲ್ಲಾಗಲೇ ಚಿತ್ರವನ್ನು ಮೂಂದೂಡಿರುವುದು ಕಾದ ಬೆಂಕಿಗೆ ನೀರು ಸುರಿದಂತಾಗಿದೆ. ಒಂದು ಬಾರಿಯಾಗಿದ್ದರೆ ಓಕೆ, ಆದರೆ, ನಾಲ್ಕನೇ ಬಾರಿ ಆರ್​ಆರ್​ಆರ್​ ಮುಂದಕ್ಕೆ ಹೋಗಿದ್ದು, ಇದು ಟಾಲಿವುಡ್​ ಮಟ್ಟದಲ್ಲಿ ಅಂತ್ಯಂತ ಕಳಪೆ ಸಾಧನೆ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಮತ್ತೊಂದೆಡೆ ಎನ್​ಟಿಆರ್ ಹಾಗೂ ರಾಮ್​ ಚರಣ್ ಅಭಿಮಾನಿಗಳು ಚಿತ್ರಕ್ಕೆ ಯಾವುದೇ ಬಲವಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಆರ್​ಆರ್​ಆರ್​ ಚಿತ್ರದ ಶೂಟಿಂಗ್ 2018 ರಲ್ಲಿ ಪ್ರಾರಂಭವಾಯಿತು. ಕರೊನಾ ಮೊದಲ ಅಲೆ ಮತ್ತು ಎರಡನೇ ಅಲೆಯಿಂದ ವಿಳಂಬವಾದರೂ, ಶೂಟಿಂಗ್ ವೆಚ್ಚದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಜಕ್ಕಣ್ಣ ಆರ್​ಆರ್​ಆರ್​ ಚಿತ್ರವನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಆರಂಭದಲ್ಲಿ ಚಿತ್ರವು ಜುಲೈ 30, 2020 ರಂದು ಬಿಡುಗಡೆ ಆಗುತ್ತದೆ ಎಂದು ಘೋಷಿಸಲಾಗಿತ್ತು. ನಂತರ ಚಲನಚಿತ್ರವನ್ನು ಜನವರಿ 8, 2021 ಕ್ಕೆ ಮುಂದೂಡಲಾಯಿತು. ನಂತರ ಅಕ್ಟೋಬರ್​ 13ಕ್ಕೆ ನಿಗದಿ ಮಾಡಲಾಗಿತ್ತು. ಅದು ಸೂಕ್ತವಲ್ಲ ಅಂದುಕೊಂಡು ಕೊನೆಯದಾಗಿ 2022ರ ಜನವರಿ 7ಕ್ಕೆ ಮುಂದೂಡಲಾಗಿತ್ತು. ಇದೀಗ ಆ ದಿನಾಂಕವನ್ನು ಮುಂದೂಡಲಾಗಿದೆ. ಇದರಿಂದ ಅಭಿಮಾನಿಗಳು ಜಕ್ಕಣನ ಮೇಲೆ ಅಸಮಾಧಾನಗೊಂಡಿದ್ದಾರೆ. ಚಿತ್ರ ಏಪ್ರಿಲ್​ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ರಿಲೀಸ್​ಗೂ ಮುನ್ನ ಜೂ. ಎನ್​ಟಿಆರ್​-ರಾಮ್​ಚರಣ್ ಫ್ಯಾನ್ಸ್​ ಮಧ್ಯೆ ಕಿಡಿಹೊತ್ತಿಸಿದ RRR ಚಿತ್ರದ ಮೊದಲ ವಿಮರ್ಶೆ

    ಅಖಿಲೇಶ್​ ಯಾದವ್​ ಕನಸಿನಲ್ಲಿ ಪ್ರತಿದಿನ ಬರುವ ಶ್ರೀ ಕೃಷ್ಣ ಪರಮಾತ್ಮ ಗುಡ್​ ನ್ಯೂಸ್​ ಹೇಳ್ತಾರಂತೆ!

    ಆಗಲ್ಲ ಅಂದ್ರೂ ಪಾಲಕರು ಬಿಡ್ಲಿಲ್ಲ: ಹೊಸ ವರ್ಷದಂದೇ ಬಿಇ​ ವಿದ್ಯಾರ್ಥಿನಿ ಕಾಲುವೆಗೆ ಹಾರಿ ಪ್ರಾಣಬಿಟ್ಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts